ರುಡ್‌ಸೆಟ್ ಬ್ರಹ್ಮಾವರದಲ್ಲಿ ಉಚಿತ ಸ್ವಉದ್ಯೋಗ ತರಬೇತಿ: ಅರ್ಜಿ ಆಹ್ವಾನ

0
7

ಬ್ರಹ್ಮಾವರ : ಸ್ವಉದ್ಯೋಗದ ಮೂಲಕ ಯುವಜನರಿಗೆ ಬದುಕು ಕಟ್ಟಿಕೊಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ, ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರವು ಮುಂಬರುವ ತಿಂಗಳುಗಳಲ್ಲಿ ವಿವಿಧ ಕೌಶಲ್ಯಾಧಾರಿತ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆಯುವ ಈ ತರಬೇತಿಗಳಲ್ಲಿ ಉಚಿತ ಊಟ, ವಸತಿ, ಸಮವಸ್ತ್ರ ಹಾಗೂ ತರಬೇತಿ ಕಿಟ್ ಒದಗಿಸಲಾಗುವುದು. ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಮುಂಬರುವ ತರಬೇತಿಗಳು:

  • ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ: ಜುಲೈ 1ರಿಂದ 30ರವರೆಗೆ
  • ಹಪ್ಪಳ, ಉಪ್ಪಿನಕಾಯಿ ಹಾಗೂ ಮಸಾಲೆ ಪುಡಿ ತಯಾರಿಕೆ: ಜುಲೈ 13ರಿಂದ ಆಗಸ್ಟ್ 1ರವರೆಗೆ
  • ಕೃಷಿ ಉದ್ಯಮಿ / ಕೋಳಿ ಸಾಕಾಣಿಕೆ: ಜುಲೈ 13ರಿಂದ 25ರವರೆಗೆ
  • ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್: ಜುಲೈ 20ರಿಂದ ಆಗಸ್ಟ್ 23ರವರೆಗೆ
  • ಎಲೆಕ್ಟ್ರಿಕಲ್ ಮೋಟರ್ ರಿವೈಂಡಿಂಗ್ ಮತ್ತು ಸರ್ವಿಸ್: ಆಗಸ್ಟ್ 10ರಿಂದ ಸೆಪ್ಟೆಂಬರ್ 8ರವರೆಗೆ
  • ಮಹಿಳಾ ಟೈಲರಿಂಗ್: ಆಗಸ್ಟ್ 13ರಿಂದ ಸೆಪ್ಟೆಂಬರ್ 12ರವರೆಗೆ
  • ಸಿಸಿ ಕ್ಯಾಮೆರಾ ರಿಪೇರಿ, ಸರ್ವಿಸ್ ಮತ್ತು ಜೋಡಣೆ: ಆಗಸ್ಟ್ 17ರಿಂದ 29ರವರೆಗೆ

ತರಬೇತಿಯ ಜೊತೆಗೆ ವ್ಯಕ್ತಿತ್ವ ವಿಕಸನ, ಉದ್ಯಮಶೀಲತಾ ಅಭಿವೃದ್ಧಿ, ಸಮಯ ಪಾಲನೆ, ಸಂವಹನ ಕೌಶಲ್ಯ, ಬ್ಯಾಂಕಿಂಗ್, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಸೇರಿದಂತೆ ಉದ್ಯಮ ಆರಂಭಿಸಲು ಅಗತ್ಯವಾದ ಮಾರ್ಗದರ್ಶನ ನೀಡಲಾಗುತ್ತದೆ. ಅಲ್ಲದೆ ಸ್ವಉದ್ಯೋಗಕ್ಕೆ ಅಗತ್ಯವಿರುವ ಸಾಲ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಸಲಹೆಯನ್ನೂ ಒದಗಿಸಲಾಗುವುದು.

18ರಿಂದ 50 ವರ್ಷದೊಳಗಿನ ಗ್ರಾಮೀಣ ಭಾಗದ ಬಿಪಿಎಲ್ ಕುಟುಂಬದ ಸದಸ್ಯರು, ಕನ್ನಡ ಓದಲು-ಬರೆಯಲು ಬಲ್ಲವರು ಹಾಗೂ ಸ್ವಉದ್ಯೋಗ ಆರಂಭಿಸುವ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿಗಳನ್ನು ಲಗತ್ತಿಸಿ ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, ಉಡುಪಿ ಜಿಲ್ಲೆ ವಿಳಾಸಕ್ಕೆ ಅಥವಾ 98440 86383 / 70225 60492 ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸಬಹುದಾಗಿದೆ.

LEAVE A REPLY

Please enter your comment!
Please enter your name here