ನೆರಿಯದಲ್ಲಿ ಉಚಿತ ಟೈಲರಿಂಗ್‌ ತರಬೇತಿ ಶಿಬಿರ ಉದ್ಘಾಟನೆ

0
7

ನೆರಿಯ (ಮಾ. 10): ಸೇವಾಭಾರತಿ (ರಿ.), ಕನ್ಯಾಡಿ ಇದರ ಆಶ್ರಯದಲ್ಲಿ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ.), ಶ್ರೀ ದುರ್ಗಾ ಮಾತೃ ಮಂಡಳಿ, ಕನ್ಯಾಡಿ ಇದರ ಸಹಕಾರದಲ್ಲಿ ಸಬಲಿನಿ ಯೋಜನೆಯಡಿ ಮಹಿಳೆಯರಿಗಾಗಿ 36ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಮಾರ್ಚ್ 10 ರಂದು ನೆರಿಯದ ಬಯಲು ಬಸದಿಯ ಹತ್ತಿರ ಶಿಲ್ಲಿಯವರ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಂಡಾಜೆ ಪ್ರಾ.ಕೃ.ಪ.ಸ.ಸಂಘ(ನಿ.), ಅಧ್ಯಕ್ಷರಾದ ಪ್ರಕಾಶ್ ನಾರಾಯಣ ರವರು ಶಿಬಿರಕ್ಕೆ ಚಾಲನೆ ನೀಡಿ, ಭಾಗವಹಿಸಿದ ಮಹಿಳೆಯರಿಗೆ ಶುಭಹಾರೈಸಿದರು. ಈ ತರಬೇತಿ ಶಿಬಿರವು ಸ್ವ-ಉದ್ಯೋಗದ ಕಡೆಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.

ಸೇವಾಭಾರತಿ ಅಧ್ಯಕ್ಷರಾದ ಹಾಗೂ ಸೇವಾಧಾಮ ಸಂಸ್ಥಾಪಕರಾದ ವಿನಾಯಕ ರಾವ್ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಟೈಲರಿಂಗ್ ಕಲಿಕೆ ಅನೇಕ ಉದ್ಯೋಗದ ಅವಕಾಶಗಳನ್ನು ಒದಗಿಸಬಲ್ಲದು. ನೀವು ಈ ವಿದ್ಯೆಯನ್ನು ಕಲಿತು ಸಮಾಜದಲ್ಲಿ ಬೆಳಗಬೇಕು ಎಂದು ಅಧ್ಯಕ್ಷರ ನುಡಿಗಳನ್ನಾಡಿ ಶುಭಹಾರೈಸಿದರು.

ನೆರಿಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಮಹೇಶ್, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷರಾದ ಮಮತಾ ಬಿ, ಬಯಲು ಬಸದಿ ನೂತನ ವಾಣಿಜ್ಯ ಸಂಕೀರ್ಣ ಮಾಲಕರಾದ ಶಿಲ್ಲಿ, ಅಂಗನವಾಡಿ ಕಾರ್ಯಕರ್ತೆ ದಿವ್ಯಾ, ಟೈಲರಿಂಗ್ ತರಬೇತುದಾರರಾದ ಸಜಿತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 20 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತೆ ದಿವ್ಯಾ ನಿರೂಪಿಸಿ, ಟೈಲರಿಂಗ್ ತರಬೇತಿಯ ಶಿಬಿರಾರ್ಥಿ ಕು ಅರ್ಪಿತಾ ಸ್ವಾಗತಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here