ಮೂಡಬಿದಿರೆಯ ಶ್ರೀ ಮಹಾವೀರಕಾಲೇಜಿನಲ್ಲಿ ಪ್ರತಿಷ್ಟಿತ ಬಹುರಾಷ್ಟ್ರೀ ಯ ಕಂಪೆನಿ ಐಬಿಎಂ ಮತ್ತು ಐಸಿಟಿ ಅಕಾಡೆಮಿಇವರ ಸಹಯೋಗದಿಂದ ನಾಲ್ಕು ದಿನಗಳ ಕೃತಕ ಬುದ್ಧಿಮತ್ತೆ (ಏಐ) ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿಕಾಲೇಜಿನಅಂತಿಮ ವರ್ಷದಕಂಪ್ಯೂಟರ್ ಸೈನ್ಸ್ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಏಐನ ಮೂಲಭೂತ ತತ್ವಗಳು ಮತ್ತು ಪ್ರಾಯೋಗಿಕ ಬಳಕೆಗಳ ಕುರಿತುಅರಿವು ನೀಡಲಾಗುತ್ತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರಜೈನ್, ‘ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ಏಐ ತರಬೇತಿ ನೀಡಲು ಐಬಿಎಂ ಮತ್ತು ಐಸಿಟಿ ಅಕಾಡೆಮಿ ನಮ್ಮಕಾಲೇಜಿನಜೊತೆ ಕೈ ಜೋಡಿಸಿರುವುದು ಸಂತಸದ ಸಂಗತಿ’ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಐಸಿಟಿ ಅಕಾಡೆಮಿಯಡಿಜಿಎಂ ವಿಷ್ಣುಪ್ರಸಾದ್, ‘ವಿವಿಧ ಕ್ಷೆತ್ರಗಳಲ್ಲಿ ಏಐ ತಜ್ಞರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಂಬAಧಿತಡಿಜಿಟಲ್ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವುದು ಈ ಕಾರ್ಯಕ್ರಮದಗುರಿ’ಎಂದು ಹೇಳಿದರು.
ವಿದ್ಯಾರ್ಥಿಗಳ ವೃತ್ತಿಕೌಶಲಗಳನ್ನು ಬಲಪಡಿಸಿ ಉದ್ಯೋಗಾವಕಾಶಗಳಿಗೆ ಸಿದ್ಧಗೊಳಿಸುವ ನಮ್ಮ ನಿರಂತರ ಪ್ರಯತ್ನದ ಅಂಗವಾಗಿ ಈ ಕಾರ್ಯಕ್ರಮವನ್ನುಆಯೋಜಿಸಲಾಗಿದೆ’ಎಂದು ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ತಿಳಿಸಿದರು.ಈ ತರಬೇತಿಕಾರ್ಯಕ್ರಮವನ್ನು ಐಸಿಟಿ ಅಕಾಡೆಮಿಯ ಅನುಭವಿ ತರಬೇತುದಾರ ಶಶಿಕಾಂತ್ ಎಚ್.ನಡೆಸುತ್ತಿದ್ದು, ಇದರ ಮೂಲಕ ವಿದ್ಯಾರ್ಥಿಗಳು ಏಐಯ ಪ್ರಾಯೋಗಿಕ ಬಳಕೆಗಳನ್ನು ಕಲಿತು ಸಂಬAಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ವೇದಿಕೆಯಲ್ಲಿ ಐಸಿಟಿ ಅಕಾಡೆಮಿಯ ಪ್ರಾಜೆಕ್ಟ್ ಸಂಯೋಜಕ ಪವನ್‌ಕಲ್ಯಾಣ್, ವಿದ್ಯಾರ್ಥಿಕ್ಶೇಮಪಾಲನಾಧಿಕಾರಿ ಪ್ರೊ. ಹರೀಶ್, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥೆ ಹಾಗೂ ಕಾರ್ಯಕ್ರಮ ಸಂಯೋಜಕಿ ಕೀರ್ತಳಾ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಶಾಶ್ವತಾ ಸ್ವಾಗತಿಸಿ, ಶ್ರೇಷ್ಠಾ ಶೆಣೈ ವಂದಿಸಿದರು, ಪ್ರತಿಷ್ಠಾ ನಿರೂಪಿಸಿದರು.

