ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಯಕ್ಷರಂಗ ಯಕ್ಷಗಾನ ಸಂಸ್ಥೆಯ ಆಶ್ರಯದಲ್ಲಿ ಜುಲೈ 12 ರಂದು ಶನಿವಾರ ಸಂಜೆ 6-30ಕ್ಕೆ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಗಡಿಯಾರ ಗೋಪುರದ ಹತ್ತಿರವಿರುವ ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಸಭಾಂಗಣದಲ್ಲಿ ಉಚಿತ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಯಕ್ಷರಂಗದ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಮಂಡಳಿಯ ಮುಖ್ಯಸ್ಥರಾದ ಖ್ಯಾತ ಭಾಗವತರಾದ ರಸರಾಗ ಚಕ್ರವರ್ತಿ, ಜಿ.ರಾಘವೇಂದ್ರ ಮಯ್ಯ ಹಾಲಾಡಿ ಹಾಗೂ ಖ್ಯಾತ ಯಕ್ಷರಂಗ ಕಲಾವಿದರಾದ ಕೋಡಿ ವಿಶ್ವನಾಥ ಗಾಣಿಗ ನೇತೃತ್ವದಲ್ಲಿ ಕವಿ ಶ್ರೀ ದೇವಿದಾಸ ವಿರಚಿತ “ಚಕ್ರವ್ಯೂಹ” ಮತ್ತು ಶ್ರೀ ಮೈರ್ಪಾಡಿ ವೆಂಕಟರಮಣಯ್ಯ ವಿರಚಿತ “ಭಕ್ತಪ್ರಹ್ಲಾದ” ಪೌರಾಣಿಕ ಕಥಾನಕದ ಈ ಮಹತ್ವ ಪೂರ್ಣ ಆರಾಧನಾ ಕರಾವಳಿ ಜಿಲ್ಲೆಗಳ ಯಕ್ಷಗಾನ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಪೂಜಾ ಸೇವೆ ಯಶಸ್ವಿಗೊಳಿಸಬೇಕೆಂದು ಕಲಾಕುಂಚ, ಯಕ್ಷರಂಗ ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಿನಂತಿಸಿದ್ದಾರೆ.