ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಪೌರ್ಣಮಿ ಪ್ರಯುಕ್ತ ಗಣಪತಿ ಹೋಮ

0
3

ಸಜಿಪಮೂಡ : ಇಲ್ಲಿನ ಅನ್ನಪಾಡಿ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಪೌರ್ಣಮಿಯ ಪುಣ್ಯಕಾಲದ ಅಂಗವಾಗಿ ಬ್ರಾಹ್ಮೀ ಮುಹೂರ್ತದ ಉಷಾಕಾಲದಲ್ಲಿ ಶ್ರೀ ಬಾಲ ಗಣಪತಿ ಹೋಮವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಸಜಿಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೋಮ ಕಾರ್ಯಕ್ರಮ ನಡೆಯಿತು. ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಬಾಲ ಗಣಪತಿಯ ಅನುಗ್ರಹ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಶ್ರೀನಿವಾಸ ಶಿವ ತಾಯ, ತನಿಯಪ್ಪ ಮೂಲ್ಯ, ಯಶವಂತ ಕುಲಾಲ್, ಪ್ರಬಂಧಕ ಪ್ರಶಾಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.