ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿʼಸೋಜಾ ರವರು ಪರಿಷತ್ತಿನ ಶೂನ್ಯ ವೇಳೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ವಾಣಿಜ್ಯ ಬಳಕೆ ಎಲ್ ಪಿ ಜಿ ಸಿಲಿಂಡರ್ ಪೂರೈಕೆ ಅಭಾವದಿಂದ ಉಂಟಾಗಿರುವ ಬಗ್ಗೆ ಸನ್ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರ ಗಮನ ಸೆಳೆದರು.
ಸಿಲಿಂಡರ್ನ ತೀರಾ ಅವಶ್ಯಕತೆ ಇರುವ ಹಾಸ್ಟೆಲ್ಗಳು ಅಸ್ಪತ್ರೆಗಳಿಗೆ ಆಹಾರ ತಯಾರಿಸಲು ಕಮರ್ಷಿಯಲ್ ಸಿಲಿಂಡರ್ಗಳನ್ನು ವ್ಯವಸ್ಥಿತವಾಗಿ ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು ಹಾಗೂ ಹೋಟೆಲ್ ಗಳು ಸ್ವಲ್ಪದಿನ ತಾಳ್ಮೆಯಿಂದ ಇರಬೇಕು ಮತ್ತು ಸಿಲಿಂಡರ್ ಬದಲು ಇಲೆಕ್ಟ್ರಿಕ್ನ್ನು ಬಳಸಬೇಕೆಂದು ಹಾಗೂ ಸಮಸ್ಯೆ ಒಂದು ವಾರದಲ್ಲಿ ಪರಿಹಾರವಾಗುವ ಸಾಧ್ಯತೆ ಇದ್ದು 10-12 ಹಡಗುಗಳು ಬರುವ ಸೂಚನೆ ಇದೆ ಎಂದು ಎಂದು ಸಚಿವರು ಉತ್ತರಿಸಿದರು.
