ಕೊಪ್ಪಳ ತಾಲೂಕಿನ ಮಾದಿನೂರಿನ ಗೌರಮ್ಮ ಮತ್ತು ಶೇಖರಪ್ಪ ದಂಪತಿಗಳ ಮಗನಾಗಿ ರೈತಾಪಿ ಕುಟುಂಬದಲ್ಲಿ ಹುಟ್ಟಿದ ಗವಿಸಿದ್ದಪ್ಪ ಗೋನಾಳ ಎಂ.ಕಾA. ಪದವೀಧರರು. ಸಾಹಿತಿ, ಪ್ರಕಾಶಕ, ಸಂಘಟಕ, ಪತ್ರಕರ್ತ, ಸಹಕಾರಿ ಧುರೀಣ ಹೀಗೆ ಬಹುಮುಖ ವ್ಯಕ್ತಿತ್ವದ ಕ್ರಿಯಾಶೀಲತೆಯ ಮೂಲಕ ವಿಶಿಷ್ಟ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡಿದ್ದಾರೆ.
೧೯೯೪ ರಿಂದ ಸಾಹಿತ್ಯ ಕೃಷಿಯ ಆರಂಭ :
ಗವಿಸಿದ್ದಪ್ಪ ಗೋನಾಳ ಅವರು ೧೯೯೪ ರಲ್ಲಿ ‘ಬಿಂಬ’ ಕವನ ಪ್ರಕಟಿಸುವುದರೊಂದಿಗೆ ಸಾಹಿತ್ಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಟೀಕೆ ಟಿಪ್ಪಣಿ, ಹೊಗಳಿಕೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶಿಷ್ಟ ವ್ಯಕ್ತಿತ್ವ ಮೈಗೂಡಿಸಿಕೊಂಡು ಬೆಳೆದು ಬಂದಿದಾರೆ.
ಸಮಚಿತ್ತದ ಕ್ರಿಯಾಶೀಲ ನಡೆಯ ಕಾಯಕಜೀವಿ :
ಯಾವುದೇ ಒಬ್ಬ ವ್ಯಕ್ತಿಯು ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಬೇಕಾದರೆ ಸಮಚಿತ್ತವೂ ಬಹುಮುಖ್ಯ ವಾಗುತ್ತದೆ. ಏಕನಿಷ್ಠೆಯ ಮನಸ್ಸಿನಿಂದ ಏನಾದರೂ ಕ್ರಿಯಾಶೀಲತೆಯನ್ನು ಮೆರೆದಾಗಲೇ ಸಾಧನೆಗೊಂದು ಹೊಳಪು ಬರುತ್ತದೆ.
ವಿಶಾಲ ಪ್ರಕಾಶನದ ಮಾಲಿಕೆ :
ಪುಸ್ತಕ ಪ್ರಕಟನೆಯೆಂಬುದು ಜ್ಞಾನಕ್ಷೇತ್ರ ವಿಸ್ತರಿಸುವ ಪುಣ್ಯಕಾರ್ಯವಾಗಿದೆ. ಉತ್ತಮ ಕೃತಿಗಳು ಒಂದು ಕಾಲಘಟ್ಟದ ಆಸ್ತಿಯೆಂದೆನಿಸುತ್ತವೆ. ವಿಶಾಲ ಪ್ರಕಾಶನವೆಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ ಬಿಂಬ ಬಾಳಿಗೆ ಬೆಳಕು, ಮನಸ್ಸಿನ ಮಾತುಗಳು, ಮಾಧ್ಯಮದ ಹೊಣೆ, ಚಿಂತನಶೀಲ, ಎಲ್ಲಿದೆ ಸ್ವಾತಂತ್ರö್ಯ ? ಜ್ಞಾನಾರ್ಜನೆಯ ಮೆಟ್ಟಿಲುಗಳು, ನಿತ್ಯ ಜೀವನದಲ್ಲಿ ಸಂಸ್ಕಾರಗಳು, ಅಂದು ವಿಮೋಚನೆ ಇಂದು ವಿವೇಚನೆ, ಪ್ರಜಾರಕ್ಷಕರೇ ಭಕ್ಷಕರಾದರೆ, ಸಂಸಾರದಲ್ಲಿ ಸಾಮರಸ್ಯ, ಸಮೃದ್ಧಿ ಜೀವನದ ದಾರಿದೀಪಗಳು, ಜೀವನದ ಸಂಗ್ರಾಮದಲ್ಲ್ಲಿ ಯಶಸ್ಸಿನ ಗುಟ್ಟುಗಳು, ಸವಾಲುಗಳು, ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ, ಅಂತರAಗದೊಳ್ ಜಿಗುರಲಿ ಶರಣರ ವಚನಾಮೃತಗಳು, ಸಾದಿಕ್‌ಅಲಿ ಅವರ ಬದುಕು ಮತ್ತು ಪತ್ರಿಕೋದ್ಯಮ, ಮಾತು ಮಾಣಿಕ್ಯ, ವೈಜ್ಞಾನಿಕ ಯುಗದಲ್ಲೂ ಮೌಢ್ಯಗಳ ಆರಾಧಕರು ಹೀಗೆ ಸೃಜನಶೀಲ ಸಾಹಿತ್ಯದ ೧೮ ಕೃತಿಗಳನ್ನು ತಮ್ಮ ಸ್ವಂತ ವಿಶಾಲ ಪ್ರಕಾಶನದಿಂದ ೧೯೯೪ ರಿಂದ ೨೦೨೫ ರ ತನಕ ಪ್ರಕಟಿಸಿದ್ದಾರೆ. ಅಲ್ಲದೇ ವಿವಿಧ ಲೇಖಕರ ೨೫ ಕೃತಿಗಳು ಸೇರಿ ಇದುವರೆಗೆ ೫೨ ಕೃತಿಗಳು ವಿಶಾಲ ಪ್ರಕಾಶನದಿಂದ ಪ್ರಕಟಗೊಂಡಿವೆ.
ಗವಿಸಿದ್ದಪ್ಪ ಗೋನಾಳ ವ್ಯಕ್ತಿತ್ವ ಬಿಂಬಿಸುವ ಅಭಿನಂದನಾ ಗ್ರಂಥಗಳು :
ಒಬ್ಬ ಸಾಧಕನ ಸಾಧನೆಯನ್ನು ಗುರುತಿಸಿ ಗೌರವಿಸುವುದೇ ಅಭಿನಂದನಾ ಗ್ರಂಥಗಳ ಉದ್ದೇಶವಾಗಿದೆ. ಬೆಂಗಳೂರಿನ ರುಕ್ಮಿಣಿ ಪ್ರಕಾಶನದಿಂದ ಮಹೇಶಬಾಬು ಸುರ್ವೆ ಸಂಪಾದಕತ್ವದಲ್ಲಿ ೨೦೦೪ರಲ್ಲಿ ‘ಮಾದಿನೂರು ಮಾಣಿಕ್ಯ’ ಮಂಜುನಾಥ ಪ. ಚಿತ್ರಗಾರ ಕೊಪ್ಪಳದ ಚೆನ್ನಬಸವ ಪ್ರಕಾಶನದಿಂದ ೨೦೧೯ರಲ್ಲಿ ‘ಪತ್ರಿಕೋದ್ಯಮದಲ್ಲಿ ಜಿ. ಎಸ್. ಗೋನಾಳ, ೨೦೨೧ರಲ್ಲಿ ಬೆಂಗಳೂರಿನ ರುಕ್ಮಿಣಿಬಾಯಿ ಪ್ರಕಾಶನದಿಂದ ಜಿ.ಎಸ್. ಗೋನಾಳರ ಬದುಕು ಮತ್ತು ಬರಹಗಳು ಕೃತಿಯನ್ನು ಮಹೇಶ ಸುರ್ವೆ ಹೊರ ತಂದಿದ್ದಾರೆ. ೨೦೨೩ರಲ್ಲಿ ಪ್ರೊ. ಶರಣಬಸಪ್ಪ ಬಿಳೆಎಲಿ ಮತ್ತು ಮಂಜುನಾಥ ಪ ಚಿತ್ರಗಾರ ಸಂಪಾದಕತ್ವದಲ್ಲಿ ‘ಸ್ಪಂದನಶೀಲ’ ಕೃತಿಯು ಹೊರಬಂದಿದೆ. ಮೇಘರಾಜ ರೆಡ್ಡಿ ಗೋನಾಳ್ ಸಂಪಾದಕತ್ವದಲ್ಲಿ ‘ಬಹುಮುಖ ವ್ಯಕ್ತಿತ್ವದ ಜಿ.ಎಸ್.ಗೋನಾಳರು’ ಕೃತಿಯು ೨೦೨೪ರಲ್ಲಿ ಪ್ರಕಟಗೊಂಡಿದೆ. ೨೦೨೫ರಲ್ಲಿ ಸಾಹಿತ್ಯಾವಲೋಕನ ಕೃತಿಯಾಗಿ ‘ಜಿ.ಎಸ್.ಗೋನಾಳರ ಸಮಗ್ರ ಸಾಹಿತ್ಯ ಪರಿಚಯ’ ಸಂಶೋಧನಾ ಪ್ರಬಂಧವು ಹೊರಬಂದಿದೆ.
ಜಿ.ಎಸ್.ಗೋನಾಳರ ಸಂಪಾದಿತ ಕೃತಿಗಳು :
ಹೂಗೊಂಚಲು, ಭಾಗ್ಯಸಿರಿ, ಸಾಹಿತ್ಯಸುಧೆ, ಸಾಂಸ್ಕೃತಿಕ ದಂಡನಾಯಕ, ಸ್ನೇಹಜೀವಿ, ಐತಿಹಾಸಿಕ ಸಿರಿ ಕೋಪಣಾಚಲ, ಕೋಪಣಾದ್ರಿ, ಸಾಧಕ ಸಂಪನ್ನ, ಶೇಖರಗೌಡ ಮಾಲಿಪಾಟೀಲ ಷಷ್ಠಾಬ್ದಿ ಅಭಿನಂದನ ಗ್ರಂಥ, ೨೦೦೨ ರಿಂದ ೨೦೨೫ ರವರೆಗೆ ವಿವಿಧ ಸಾಧಕರ ಅಭಿನಂದನ ಗ್ರಂಥಗಳಿಗೆ ಸಂಪಾದಕರಾಗಿದ್ದಾರೆ.
ಐತಿಹಾಸಿಕ ಇಟಗಿ ಮತ್ತು ಕೊಪ್ಪಳ ಜಿಲ್ಲಾ ಉತ್ಸವಗಳ ಸೇವೆಯಲ್ಲಿ :
ಸೇವಾಲಯಗಳ ಚಕ್ರವರ್ತಿ ಇಟಗಿ ಉತ್ಸವ ಮತ್ತು ಕೊಪ್ಪಳ ಜಿಲ್ಲಾ ಉತ್ಸವಗಳಲ್ಲಿ ಉರ್ದು ಸಮ್ಮೇಳನ, ಕವಿ ಸಮ್ಮೇಳನ, ಪ್ರಕಾಶಕರ ಸಮ್ಮೇಳನ, ಗೋವಾ, ಪಾಂಡಿಚೇರಿ, ಬೆಂಗಳೂರು, ಮಂತ್ರಾಲಯಗಳಲ್ಲಿ ಮಹೇಶಬಾಬು ಸುರ್ವೆ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ.
ಗವಿಸಿದ್ದಪ್ಪನವರ ಸಹಕಾರಿ ಸಂಘದಲ್ಲಿ ಸೇವೆ :
ಗವಿಸಿದ್ದಪ್ಪ ಗೋನಾಳ ಅವರು ಯಂತ್ರಗತಿಯಲ್ಲಿ ಕೆಲಸ ಮಾಡುವ ಮನೋವೃತ್ತಿಯನ್ನು ಹೊಂದಿದವರಾಗಿದ್ದಾರೆ. ಕೊಪ್ಪಳದ ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘ (ರಿ) ದ ನಿರ್ದೇಶಕರು ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ನಿರ್ದೆಶಕರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ೨೦೦೬ ರಿಂದ ೨೦೧೭ ರ ವರೆಗೆ ಸೇವೆ ಸಲ್ಲಿಸಿದ್ದಾರೆ. ಕಿನ್ನಾಳ ವಿ.ಎಸ್.ಎಸ್. ನಿದೇರ್ಶಕರಾಗಿ ಸೇವೆ, ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಸಂಸ್ಥೆ(ರಿ) ಅಧ್ಯಕ್ಷರಾಗಿ ಸೇವೆಗೈದಿರುವರು.
ದತ್ತಿ ಪ್ರಶಸ್ತಿ ಸ್ಥಾಪನೆ :
ಜಿ. ಎಸ್. ಗೋನಾಳರ ಅಜ್ಜಿ ಲಕ್ಷö್ಮಮ್ಮ ದೊಡ್ಡ ಪಂಪಣ್ಣ ಗೋನಾಳ ಸ್ಮರಣಾರ್ಥವಾಗಿ ತಿರುಳ್ಗನ್ನಡ ಸಾಹಿತಿಗಳ ಸಹಕಾರಿ ಸಂಘದಲ್ಲಿ ಮಹಿಳೆಯರ ಅತ್ಯುತ್ತಮ ಪುಸ್ತಕ್ಕಾಗಿ ೨೦೧೯-೨೦ನೇ ಸಾಲಿನಿಂದ ದತ್ತಿ ಪ್ರಶಸ್ತಿ ಸ್ಥಾಪನೆ ಮಾಡಿದ್ದಾರೆ.
ಜಿ.ಎಸ್.ಗೋನಾಳರ ಸಾಹಿತ್ಯ ಕೃತಿಗಳ ಅವಲೋಕನ :
ಒಬ್ಬ ಸೃಜನಶೀಲ ಬರಹಗಾರರಾಗಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಹಲವಾರು ಮೌಲ್ಯಯುತ ಕೃತಿಗಳನ್ನು ಜಿ.ಎಸ್. ಗೋನಾಳ ಅವರು ರಚಿಸಿದ್ದಾರೆ.
ಮಾಧ್ಯಮದ ಹೊಣೆ :
೨೦೧೫ ರಲ್ಲಿ ವಿಶಾಲ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಯಲ್ಲಿ ಪತ್ರಕರ್ತ ಹೇಗಿರಬೇಕು ? ಸಂಪಾದಕನ ಸ್ಥಾನಮಾನ ಎಂಥದು ? ಪ್ರೆಸ್‌ಮೀಟ್, ಜಾಹಿರಾತುಗಳ ಅನಿವಾರ್ಯತೆ, ಮಾಹಿತಿಹಕ್ಕು ಮುಂತಾದ ವಿಷಯಗಳ ಚಿಂತನೆ ನಡೆಸಿದ್ದಾರೆ.
ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ :
೨೦೨೨ ರಲ್ಲಿ ವಿಶಾಲ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಯಲ್ಲಿ ಪತ್ರಿಕೆ ಪತ್ರಕರ್ತರ ಸಮಸ್ಯೆ ಸವಾಲುಗಳು, ಮಾಧ್ಯಮದವರ ಮೇಲಿನ ದಬ್ಬಾಳಿಕೆ ನಿಲ್ಲಲಿ, ಆರ್ಥಿಕ ಭದ್ರತೆ, ನೆಲೆಗಳಿಲ್ಲದೆ ಪತ್ರಕರ್ತರ ಕಷ್ಟ, ಪತ್ರಕರ್ತರಾಗಲು ಮಾನದಂಡಗಳೇನು ? ಮುಂತಾದ ಸಾತ್ವಿಕ ವಿಷಯಗಳ ಚಿಂತನೆ ನಡೆಸಿದ್ದಾರೆ.
ಚಿಂತನಶೀಲ :
೨೦೧೬ ರಲ್ಲಿ ವಿಶಾಲ ಪ್ರಕಾಶನದಿಂದ ಪ್ರಕಟಗೊಂಡ ಈ ಕೃತಿಯಲ್ಲಿ ಸಾಹಿತ್ಯ, ಸಾಹಿತಿ, ಸಾಹಿತಿಯ ನಡೆ, ಸಾಹಿತಿಗಳಲ್ಲಿ ಆದರ್ಶ ಮೌಲ್ಯಗಳು ಮುಂತಾದ ವಿಷಯಗಳ ಕುರಿತು ಚಿಂತನೆಯನ್ನು ಚಿಂತನಾಶೀಲ ಕೃತಿಯು ನಡೆಸುತ್ತದೆ.
ಮಾತು ಮಾಣಿಕ್ಯ :
ಜಿ. ಎಸ್. ಗೋನಾಳರ ಅಂತರAಗದ ನುಡಿ ಪಲ್ಲವಗಳ ಆತ್ಮಾನುಸಂಧಾನಗಳ ಕೃತಿ ಇದಾಗಿದೆ. ೨೦೦೪ರಲ್ಲಿ ಈ ಕೃತಿಯು ಹೊರ ಬಂದಿದೆ. ಒಬ್ಬ ಚಿಂತನಶೀಲ ವ್ಯಕ್ತಿಯಾಗಿ ಕಾಣುತ್ತಾರೆ.
ಬಹುಮುಖ ವ್ಯಕ್ತಿತ್ವದ ಜಿ. ಎಸ್. ಗೋನಾಳರು :
೨೦೨೪ರಲ್ಲಿ ಗವತಿಸಿದ್ದಪ್ಪ ಗೋನಾಳರ ಸುಪುತ್ರರಾದ ಮೇಘರಾಜ ರಡ್ಡಿ ಅವರ ಸಂಪಾದಕತ್ವದಲ್ಲಿ ಈ ಕೃತಿ ಹೊರಬಂದಿದೆ. ಸಂಶೋಧನಾ ವಿದ್ಯಾರ್ಥಿಗಳಾದ ನೇತ್ರಾವತಿ ಜಿ. ಸುನಿತಾ ಎಸ್. ಪ್ರಮಿಳಾ ಪಿ. ರಜಿಯಾ ಬೇಗಂ ಎಂ. ಸುನಂದಾ ಜೆ, ಬಾಲರಾಜ ಬಿ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಡಾ. ವಿಪ್ಲವಿ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ಜಿ.ಎಸ್. ಗೋನಾಳ ವ್ಯಕ್ತಿತ್ವ ಕೃತಿಯನ್ನು ಮೌಲಿಕ ಚಿಂತನೆಯಲ್ಲಿ ಪ್ರಕಟಿಸಿರುವರು.
ಪ್ರಜಾರಕ್ಷಕರೇ ಭಕ್ಷಕರಾದರೇ ? :
ಸ್ವಸ್ಥ ಭಾರತ ಹೇಗಿರಬೇಕು ? ಎಂಬ ರಾಜಕೀಯ ಚಿಂತನ ಲಹರಿಯನ್ನು ಹೊತ್ತ ಕೃತಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಾನಮಾನ, ರಾಜಕಾರಣಿಗಳು ಹೇಗಿರಬೇಕು ? ಮುಂತಾದ ವಿಷಯಗಳ ಅಳವಡಿಕೆಯು ಈ ಕೃತಿಯಲ್ಲಿದೆ. ೨೦೨೦ರಲ್ಲಿ ಈ ಕೃತಿ ಹೊರಬಂದಿದೆ.
ಸಮೃದ್ಧಿ ಜೀವದ ದಾರಿದೀಪಗಳು :
೨೦೨೨ ರಲ್ಲಿ ಹೊರಬಂದ ಈ ಕೃತಿಯು ತನ್ನ ಬದುಕನ್ನು ಅರ್ಥಪೂರ್ಣ ಮಾಡಿಕೊಳ್ಳುವ ಹಲವು ವೈಚಾರಿಕ ಬರಹಗಳನ್ನು ಈ ಕೃತಿಯು ಹೊಂದಿದೆ.
ಸ್ಪAದನಶೀಲ :
ಶರಣಬಸಪ್ಪ ಬಿಳೆಎಲಿ ಹಾಗೂ ಮಂಜುನಾಥ ಪ ಚಿತ್ರಗಾರ ಅವರ ಸಂಪಾದಕತ್ವದಲ್ಲಿ ೨೦೨೩ರಲ್ಲಿ ಹೊರಬಂದ ವಿಮರ್ಶಾ ಅವಲೋಕನವನ್ನು ನಡೆಸುತ್ತದೆ.
ವೈಜ್ಞಾನಿಕ ಯುಗದಲ್ಲೂ ಮೌಢ್ಯಗಳ ಆರಾಧಕರು :
ದೆವ್ವ ಮಾಟ, ಪ್ರಾಣಿ ಬಲಿ, ಸೇವಿಸುವ ಅಹಾರದಲ್ಲಿಯೂ ಜಾತಿ, ಆಸ್ತಿಕ, ನಾಸ್ತಿಕಗಳ ತಾಕಲಾಟ, ವಾಮಾಚಾರ ಮುಂತಾದ ವಿಷಯಗಳ ಕುರಿತು ಚಿಂತನೆ ನಡೆಸುವ ಕೃತಿಯು ಇದಾಗಿದೆ. ೨೦೨೫ ರಲ್ಲಿ ಈ ಕೃತಿಯು ಹೊರಬಂದಿದೆ.
ಸಾಹಿತ್ಯ ಕೃತಿಗಳ ಚಿಂತನೆಯು ಅನನ್ಯ ಮತ್ತು ಅನುಪಮವಾದುದು :
ಜಿ.ಎಸ್.ಗೋನಾಳ ಅವರ ಕೃತಿಗಳು ಬರೀ ವಿರಾಮ ಕಾಲದ ಸಮಯ ಹರಣ ಮಾಡುವಂತಹ ಕೃತಿಗಳಲ್ಲ. ಓದುಗರ ಪ್ರಜ್ಞಾವಿಕಾಸವನ್ನು ಹೆಚ್ಚಿಸುವ ಮೌಲ್ಯಯುತ ಕೃತಿಗಳಾಗಿವೆ. ಜ್ಞಾನವಲಯವನ್ನು ಶ್ರೇಷ್ಠದಾರಿಗೆ ಕೊಂಡೊಯ್ಯುವ ಕ್ರಿಯಾ ಸಂಬAಧದ ಕೃತಿಗಳಾಗಿವೆ. ಅಹಂ ನಿರಸನಗೊಂಡಾಗ ಮಾತ್ರ ಉತ್ತಮ ಲೇಖಕರೂ ಹುಟ್ಟುತ್ತಾರೆ. ಉತ್ತಮ ಓದುಗರೂ ಸಿಗುತ್ತಾರೆ ! ಉತ್ತಮ ಸಮಾಜದ ನಿರ್ಮಾಣವು ಆಗುತ್ತದೆ. ಅದು ಉತ್ತಮ ಬೆಳವಣಿಗೆಯೂ ಹೌದು !
ಗವಿಸಿದ್ದಪ್ಪ ಗೋನಾಳ ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳು :
೧೯೯೭ರಲ್ಲಿ ‘ಬಿಂಬ’ ಕವನ ಸಂಕಲನಕ್ಕೆ ಸೊಲ್ಲಾಪುರದ ಡಿ.ಎ.ವಿ. ಕಾಮರ್ಸ ಕಾಲೇಜಿನಲ್ಲಿ ದ.ರಾ.ಬೇಂದ್ರೆ ಮೆಮೋರಿಯಲ್ ಅವಾರ್ಡ್, ಇದೇ ಕೃತಿಗೆ ೧೯೯೯ ರಲ್ಲಿ ಪತ್ರಕರ್ತ ಫಕೀರಸ್ವಾಮಿ ಹೂಗಾರ ಸ್ಮಾರಕ ಸಾಹಿತ್ಯ ಪ್ರಶಸ್ತಿ, ೨೦೦೫ ರ ಕಲ್ಯಾಣ ಕರ್ನಾಟಕದ ಅತ್ಯುತ್ತಮ ಯುವ ಪ್ರಕಾಶಕ ಪ್ರಶಸ್ತಿ, ಕೊಪ್ಪಳ ಜಿಲ್ಲಾ ಆಡಳಿತ ಮತ್ತು ಕ್ನಡ ಸಾಂಸ್ಕೃತಿಕ ಇಲಾಖೆಯಿಂದ ೨೦೧೦-೧೧ನೇ ಸಾಲಿನ “ಅತ್ಯುತ್ತಮ ಲೇಖಕ ಪ್ರಕಾಶಕ ಪ್ರಶಸ್ತಿ” ಗಳೊಂಇಗೆ ಇನ್ನೂ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ.
ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವಾ ಕೈಂಕರ್ಯ :
ವಿಶಾಲ ಪ್ಕಾಶನ ಮಾದಿನೂರು-ಕೊಪ್ಪಳದ ಪ್ರಕಾಶಕರು, ಕೊಪ್ಪಳ ಜಿಲ್ಲಾ ವಾರ್ತಾ ಮಾಸಪತ್ರಿಕೆಯ ಸಂಪಾದಕರು, ಗದಗ ನವೋದಯ ಕನ್ನಡ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರು ಬೆಂಗಳೂರಿನ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರು, ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು(ರಿ) ಕೊಪ್ಪಳ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆ ಜಿಲ್ಲಾ ಘಟಕ ಕೊಪ್ಪಳದ ಅಧ್ಯಕ್ಷರು ಭಾರತೀಯ ಪತ್ರಕರ್ತರ ಒಕ್ಕೂಟ ನವದೆಹಲಿ-ಬೆಂಗಳೂರು ಸದಸ್ಯರು, ಶ್ರೀ ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಮತ್ತು ಕಲ್ಯಾಣ ಸಂಸ್ಥೆ, ಮಾದಿನೂರು ಕೊಪ್ಪಳ ಇದರ ಅಧ್ಯಕ್ಷರು, ಕಲಬುರ್ಗಿ ವಿಭಾಗದ ಅಖಿಲಭಾರತ ವಚನ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿವಿಧ ಸಮ್ಮೇಳನಗಳಲ್ಲಿ ಮುಖ್ಯ ಜವಾಬ್ದಾರಿ ವಹಿಸಿದ ಗವಿಸಿದ್ದಪ್ಪ :
ಬಹುಮುಖ ವ್ಯಕ್ತಿತ್ವದ ಗವಿಸಿದ್ದಪ್ಪ ಅವರು ಅಹರ್ನಿಸೆ ಕ್ರಿಯಾಶೀಲರಾಗಿರುವುದರಿಂದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗೀದಾರರಾಗಿರುವುದರಿಂದ ಸ್ವಪ್ರೇರಣೆಯನ್ನು ಪಡೆದಿದ್ದಾರೆ. ೧೯೯೯ರಲ್ಲಿ ರಾಜ್ಯಮ್ಟದ ಅಂಧಮಕ್ಕಳ ಸಾಂಸ್ಕೃತಿಕ ಮೇಳ ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ (ಎ.ಆರ್.ಡಿ. ಸೇವಾ ಸಂಸ್ಥೆಯಿAದ ತಾಲೂಕಾ ಯೋಜನಾಧಿಕಾರಿಯಾಗಿ ಸೇವೆ ಮತ್ತು ಸಮ್ಮೇಳನದಲ್ಲಿ ೮೦೦ ವಿಶೇಷ ಚೇತನ ಮಕ್ಕಳು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದ ದಾಖಲಾರ್ಹ ಕಾರ್ಯಕ್ರಮವೆನಿಸಿದೆ). ದೆಹಲಿಯ ರಾಷ್ಟಿçÃಯ ಅಂಧತ್ವ ನಿವಾಣಾ ಕೇಂದ್ರದಲ್ಲಿ (ಎನ್.ಐ.ವಿ.ಎಚ್) ರಾಷ್ಟçಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ ಹೆಗ್ಗಳಿಕೆ, ಗಂಗಾವತಿಯಲ್ಲಿ ಜರುಗಿದ ೭೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಾಲೂಕ ಅಧ್ಯಕ್ಷನಾಗಿ ಕಾರ್ಯ, ಬಾಲವಿಕಾಸ ಅಕಾಡೆಮಿ ಕೊಪ್ಪಳ ಜಿಲ್ಲೆಯ ಸದಸ್ಯನಾಗಿ ಸೇವೆ, ಜೀತ ನಿರ್ಮೂಲನ ಸಮಿತಿ ಕೊಪ್ಪಳ ಜಿಲ್ಲಾ ಸಮಿತಿ ಸದಸ್ಯನಾಗಿ ಸೇವೆ, ಕೊಪ್ಪಳದ ಅಂಚೆ ಇಲಾಖೆ ಸಲಹಾ ಸಮಿತಿ ಸದಸ್ಯನಾಗಿ ಸೇವೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆ, ಸದ್ಯದಲ್ಲಿ ಭಾರತೀಯ ಪತ್ರಕರ್ತ ಒಕ್ಕೂಟದ ಸದಸ್ಯನಾಗಿ ಸೇವೆ, ಹೀಗೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ, ಸದಸ್ಯರಾಗಿ, ಮಾರ್ಗದರ್ಶಕರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಗೌರವವು ಜಿ.ಎಸ್. ಗೋನಾಳ ಅವರಿಗೆ ಸಲ್ಲುತ್ತದೆ.
ಕ್ರತೃತ್ವ ಶಕ್ತಿಯ ಪಾದರಸದಂತೆ ದುಡಿಯುವ ಕಾರ್ಯ ಜಂಗಮ :
ಗವಿಸಿದ್ದಪ್ಪ ಸುಮ್ಮನೆ ಕುಳಿತು ಕಾಲಹರಣ ಮಾಡುವ ಮನಸ್ಸು ಹೊಂದಿದವರಲ್ಲ. ಅವರದೇನಿದ್ದೂ ಕ್ರತೃತ್ವ ಶಕ್ತಿಯ ಪಾದಸದಂತೆ ದುಡಿಯುವ ಕಾರ್ಯ ಜಂಗಮನAತಹ ವ್ಯಕ್ತಿತ್ವವಾಗಿದೆ. “ವ್ಯರ್ಥ ಕಾಲಹರಣ ಮಾಡಿ ಬದುಕಿನ ಅರ್ಥ ಕಳೆದುಕೊಳ್ಳುವುದಕ್ಕಿಂತ ; ಉನ್ನತ ಕೆಲಸ ಕಾರ್ಯ ಮಾಡಿ ಆತ್ಮತೃಪ್ತಿ ಕಂಡುಕೊಳ್ಳುವ ಸಂತೃಪ್ತ ಬದುಕು” ಆಗಿದೆ. ಅದೇನಿದ್ದರೂ ಅರ್ಪಣಾ ಮನೋಭಾವದಿಂದ ದುಡಿಯುವ ದಿವ್ಯ ಭವ್ಯ ಬದುಕಾಗಿದೆ. ದ್ವಂದ್ವ ವಿಚಾರಗಳನ್ನು ಕೈಬಿಟ್ಟು ಹದಭರಿತ ಪರಿಣಾಮ ಕಂಡುಕೊಳ್ಳುವ ಸಮಧಾನದ ತವನಿಧಿಯಂತಹ ಗಟ್ಟಿ ನೆಲೆಯ ಬದುಕಾಗಿದೆ! ನ್ಯಾಯ ನಿಷ್ಠುರಿ ನಡೆಹೊಂದಿದ ಸ್ಪಟಿಕದಂತೆ ಹೊಳಪು ನೀಡುವ ನಿಷ್ಕಲ್ಮಷ ಹೃದಯದ ಹಸನಾದ ಬದುಕಾಗಿದೆ. ಅವರ ಬಾಳುಭವ್ಯವಾಗಲೆಂದು ಹಾರೈಸುವೆನು.

