ಉಡುಪಿ ರೈಲ್ವೆ ಯಾತ್ರಿ ಸಂಘದ ಮಹಾಸಭೆ: ಅಮೃತ್ ಯೋಜನೆಯ ಶೀಘ್ರ ಅನುಷ್ಠಾನದ ಹೋರಾಟಕ್ಕೆ ಆದ್ಯತೆ

0
7

ಉಡುಪಿ ರೈಲ್ವೆ ಯಾತ್ರಿ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಧೀರಜ್ ಎನ್ ಶಾಂತಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಉಡುಪಿಯ ಹಿಂದಿ ಪ್ರಚಾರ ಸಭಾಭವನದಲ್ಲಿ ನಡೆಯಿತು.

ಭಾರತದಲ್ಲಿ ರೈಲು ಸಂಪರ್ಕ ಚಾಲನೆ ದೊರೆತ ಬಹುತೇಕ ಒಂದು ಶತಮಾನದ ಬಳಿಕ ಉಡುಪಿಗೆ ರೈಲ್ವೆ ಸಂಪರ್ಕಗಳ ಜೋಡಣೆ ಭಾಗ್ಯ ದೊರೆತರೂ ಅಭಿವೃದ್ಧಿಯ ದೃಷ್ಟಿಯಲ್ಲಿ ದೇಶದ ಉನ್ನತ ರೈಲ್ವೆ ನಿಲ್ದಾಣಗಳ ಗುಣಮಟ್ಟವನ್ನು ತಲುಪಲು ಸಾಕಷ್ಟು ಆಶಾದಾಯಕ ಪ್ರಯತ್ನಗಳು ನಡೆದಿದ್ದು ಸಮಾಧಾನಕರ ವಿಷಯ. ಅಮೃತ್ ಯೋಜನೆಯಂತಹ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನ ಗೊಳಿಸಿ ಕಾಮಗಾರಿಗಳನ್ನು ತಕ್ಷಣ ಆರಂಭಿಸುವ ನಿಟ್ಟಿನಲ್ಲಿ ಸಂಘದ ಹೋರಾಟ ನಿರಂತರವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಭೇಟಿಯಾಗುವ ಪ್ರಕ್ರಿಯೆಗಳನ್ನು ಮುಂದುವರಿಸುವ ಬಗ್ಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ನಿರ್ದೇಶಕರು ಮತ್ತು ಸದಸ್ಯರುಗಳಾದ ಸದಾನಂದ ಅಮೀನ್, ರಾಧಾಕೃಷ್ಣ ರಾವ್, ಜಯರಾಮ್ ಪ್ರಭು, ರತ್ನಶ್ರೀ ಆಚಾರ್ಯ, ಹೇಮನಾಥ ಹೆಗ್ದೆ, ಪಿ ಎನ್ ರವೀಂದ್ರ, ಅಪ್ರಾಯ ಶೆಟ್ಟಿಗಾರ್, ಮಹಮ್ಮದ್ ಮೌಲಾ, ಶ್ರೀನಿವಾಸ ಶೆಟ್ಟಿ ತೊನ್ಸೆ, ರವೀಶ್ ಕೋಟ್ಯಾನ್, ರವಿ ಪೂಜಾರಿ ಹಿರಿಯಡ್ಕ, ತಿಲಕನಾಥ್ ಮಂಜೇಶ್ವರ, ಐವಾನ್ ಡಿಸೋಜ, ನಾರಾಯಣ ಕಾಂಚನ್ ಮತ್ತಿತರರು ಹಾಜರಿದ್ದರು.

ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ವಾರ್ಷಿಕ ವರದಿ, ಕೋಶಾಧಿಕಾರಿ ಯು ಅಜಿತ್ ಕುಮಾರ್ ಶೆಣೈ ಅವರು ಲೆಕ್ಕಪತ್ರ ಮಂಡನೆ ಮಾಡಿದರು. ನಿರ್ದೇಶಕರಾದ ಜನಾರ್ದನ್ ಕೋಟ್ಯಾನ್ ಸ್ವಾಗತಿಸಿ, ಜಾನ್ ರೆಬೆಲ್ಲೊ ವಂದಿಸಿದರು.
ಪ್ರಭಾಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.