
ಉಡುಪಿ: ಉತ್ತಮ ಪ್ಯಾಕೇಜಿಂಗ್ನಿಂದ ಉತ್ಪನ್ನಕ್ಕೆ ಹೆಚ್ಚಿನ ಬಾಳಿಕೆ ಸಾಧ್ಯ. ಕೆಟ್ಟ ಪ್ಯಾಕೇಜಿಂಗ್ನಿಂದ ಒಳ್ಳೆಯ ಉತ್ಪನ್ನ ಬೇಡಿಕೆ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಉತ್ಪನ್ನಗಳ ಬ್ರಾಂಡಿಂಗ್ಗೆ ಉತ್ತಮ ಪ್ಯಾಕೇಜಿಂಗ್ ಅತೀ ಅಗತ್ಯ ಎಂದು ಉದ್ಯಮಿ ಕಲ್ಬಾವಿ ಪ್ರಕಾಶ್ ರಾವ್ ಹೇಳಿದರು.
ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ ಉದ್ಯಮ ಕೈಗಾರಿಕಾ ಸಚಿವಾಲಯ ಹಾಗೂ ಉಡುಪಿ ಜಿಲ್ಲಾ ಬೇಕರಿ ಮತ್ತು ಫುಡ್ ಪ್ರಾಡಕ್ಟ್ ತಯಾರಿಕರು ಅಂಡ್ ಮಾರಾಟಗಾರರ ಸಂದ ಆಶ್ರಯದಲ್ಲಿ ಆಹಾರ ಪ್ಯಾಕೇಜಿಂಗ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಹಾರ ಉದ್ಯಮವು ವೃತ್ತಿಪರವಾಗುತ್ತಿದೆ. ಯುವ ಸಮುದಾಯವು ಆನ್ಲೈನ್ ವೇದಿಕೆಯಲ್ಲಿ ದರ, ಶ್ರೇಯಾಂಕವನ್ನು ವಿಮರ್ಶೆಗೆ ಒಳಪಡಿಸುತ್ತಿದ್ದಾರೆ ಎಂದು ಹೇಳಿದರು. ಎಂಎಸ್ಎಂಇ ಅಭಿವೃದ್ಧಿ ಹಾಗೂ ನೆರವು ಕೇಂದ್ರ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ್ ಮಾತನಾಡಿ, ಆಹಾರ ಉತ್ಪನ್ನಗಳ ಸುರಕ್ಷಿತ ಹಾಗೂ ಆಧುನಿಕ ಪ್ಯಾಕೇಜಿಂಗ್ ವಿಧಾನಗಳ ಕುರಿತು ಉದ್ಯಮಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಲೀಟ್ ಬ್ಯಾಂಕ್ ಮುಖ್ಯಸ್ಥ ಹರೀಶ್ ಜಿ., ಉಡುಪಿ ಫುಡ್ಪಾರ್ಕ್ ಆಡಳಿತ ನಿರ್ದೇಶಕ ಜಾನ್ ಆರ್. ಡಿ’ಸಿಲ್ವಾ, ಜಿಲ್ಲಾ ಬೇಕರಿ ಅಸೋಸಿಯೇಶನ್ ಅಧ್ಯಕ್ಷ ವಿಶ್ವನಾಥ ಕುಲಾಲ್, ಕಾನೂನು ಸಲಹೆಗಾರ ಶ್ರೀಧರ್ ಪಿ.ಎಸ್. ಉಪಸ್ಥಿತರಿದ್ದರು. ಸುಮನಾ ರಾಜು ಕಾರ್ಯಕ್ರಮ ನಿರೂಪಿಸಿದರು.
