ಕಿರಿಮಂಜೇಶ್ವರ: ಗ್ರಾಮ ಪಂಚಾಯತ್ ಕಿರಿಮಂಜೇಶ್ವರ ವತಿಯಿಂದ ಎಸ್.ಎಸ್ ಎಲ್. ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳಿಗೆ 2024-25ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ ನಡೆಯಿತು. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ ಖಾರ್ವಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅತಿ ಹೆಚ್ಚು ಅಂಕ ತೆಗೆದ ವಿದ್ಯಾರ್ಥಿಗಳಿಗೆ ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು ಹಾಗೆ ಶಾಲೆಯ ಆವರಣದ ಕಂಪೌಂಡ್ ನಿರ್ಮಾಣ ಹಾಗೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗಿದೆ ಶಾಲಾ ಶೈಕ್ಷಣಿಕ ಪರಿಸರ ಹಾಗೂ ಗುಣಾತ್ಮಕ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಮಂಜು ಎಂ ಪೂಜಾರಿ ಅವರು ಮಾತನಾಡಿ ಕಿರುಮಂಜೇಶ್ವರ ಗ್ರಾಮ ಪಂಚಾಯತಿ ವತಿಯಿಂದ ನಮ್ಮ ಶಾಲೆಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ ಮತ್ತು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಶಿಕ್ಷಕರ ದಂಡೆ ನಮ್ಮ ಶಾಲೆಯಲ್ಲಿ ಇದೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಯ ಅಧ್ಯಕ್ಷರಾದ ಶ್ರೀ ಈಶ್ವರ ಇವರು ವಹಿಸಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ
ಪರೀಕ್ಷೆಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ 4 ವಿದ್ಯಾರ್ಥಿಗಳನ್ನು ಅವರ ಪರವಾಗಿ ಅವರ ತಾಯಂದಿರನ್ನು ಸನ್ಮಾನಿಸಲಾಯಿತು.
ಅಲ್ಲದೇ ಪಂಚಾಯತ್ ವತಿಯಿಂದ ಕಳೆದ ವರ್ಷ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ನೀಡಿದ ಜಿಲ್ಲಾ ಮಟ್ಟದ ಅತ್ಯುತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿಗೆ ಭಾಜನರಾದ ಶಾಲಾ ಮುಖ್ಯೋಪಾಧ್ಯಾಯರಾದ ಮಂಜು.ಎಂ.ಪೂಜಾರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲೆಯ ಎಸ್.ಡಿಎಂ.ಸಿ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ಶಾಲಾ ಆವರಣಗೋಡೆ ನಿರ್ಮಿಸಿ ಕೊಟ್ಟ ಗ್ರಾಮಪಂಚಾಯತ್ ಕಿರಿಮಂಜೇಶ್ವರಕ್ಕೆ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಸಕಾಲದಲ್ಲಿ ಈ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ ಗುತ್ತಿಗೆದಾರರಾದ ನಾರಾಯಣ.ಟಿ ಕೊಡೇರಿ ಇವರನ್ನು ಗೌರವಿಸಲಾಯಿತು.
ಇಲಾಖೆಯ ನಿಯಮದಂತೆ ತೆರವುಗೊಂಡ ಎಸ್.ಡಿ.ಎಂ.ಸಿಯ 3 ಸದಸ್ಯರ ಸ್ಥಾನಕ್ಕೆ ಹೊಸ ಸದಸ್ಯರನ್ನ ಆಯ್ಕೆ ಮಾಡಿ ನೂತನ ಅಧ್ಯಕ್ಷರನ್ನು ಚುನಾಯಿಸಲಾಯಿತು. ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಭಾಸ್ಕರ ಖಾರ್ವಿ ಆಯ್ಕೆಯಾದರು. ಈ ಎಲ್ಲಾ ಪ್ರಕ್ರಿಯೆಗಳನ್ನು ಪಂಚಾಯತ್ ಅಧ್ಯಕ್ಷರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿಯ ಸದಸ್ಯರು, ಗ್ರಾಮಪಂಚಾಯತ್, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಮಕ್ಕಳ ಪೋಷಕರು, ಉಪಸ್ಥಿತರಿದ್ದರು.
ಹಾವಳಿ ಬಿಲ್ಲವ ಇಂಗ್ಲೀಷ್ ಭಾಷಾ ಶಿಕ್ಷಕರು, ಸ್ವಾಗತಿಸಿದರು. ಕನ್ನಡ ಭಾಷಾ ಅಧ್ಯಾಪಕರಾದ ಶ್ರೀ ಶ್ರೀಕಾಂತ್.ಬಿ ಅನಿತ ವಿಜ್ಞಾನ ಶಿಕ್ಷಕಿ ನಿರೂಪಿಸಿದರು. ಮಂಜುನಾಥ.ಕೆ ಗೌಡ ಸಮಾಜವಿಜ್ಞಾನ ಶಿಕ್ಷಕರು ವಂದಿಸಿದರು.