ಕುಡ್ಲದಲ್ಲಿ ಅಕ್ಟೋಬರ್ 5, 2026ರಂದು ‘ಕೋಡಿಯಡಿತ ನಿರೇಲ್’ ವಿಜೃಂಭಣೆಯ ಸಂಭ್ರಮ

0
6

-ಮಂದಾರ ರಾಜೇಶ್

​ತುಳುನಾಡ ದೈವಪರಿಚಾರಕರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ.) ಕುಡ್ಲ ಇದರ ಆಶ್ರಯದಲ್ಲಿ October 5, 2026 ರ ಸೋಮವಾರಮಂಗಳೂರಿನ ಪುರಭವನದಲ್ಲಿ “ಕೋಡಿಯಡಿತ ನಿರೆಲ್ – ಲೇಸ್ದ ಗೌ ಜಿ” ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ಅಂದು ಬೆಳಿಗ್ಗೆ 9:00 AM ಗಂಟೆಗೆ ಸರಿಯಾಗಿ ಕಾರ್ಯಕ್ರಮವು ಆರಂಭಗೊಳ್ಳಲಿದೆ. ಕಾರ್ಯಕ್ರಮದ ಸಭೆಯ ಗುರಿಕಾರರಾಗಿ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮೀನಾರಾಯಣ ಎಂ. (ಅಣ್ಣ ಪೂಜಾರಿ) ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾವಂತೂರುಗುತ್ತು ದುರ್ಗಾದಾಸ್ ಶೆಟ್ಟಿ ಗಡಿಕಾರರು ತುಡರ್ ಅಲಾರ್ಡ್ ಲೇಸ್ದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಟ್ರಸ್ಟ್‌ನ ಹೊಸ ಸಾಮಾಜಿಕ ಜಾಲತಾಣದ ಲೋಕಾರ್ಪಣೆಯನ್ನು ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸಲಿದ್ದು, ಅರ್ಹ ಫಲಾನುಭವಿಗಳಿಗೆ ವಿಮಾ ಯೋಜನೆ ಹಾಗೂ ಪಾಸ್‌ಬುಕ್ ಗುರುತು ಚೀಟಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಗುತ್ತದೆ. ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ “ಏರ್ಲ ಗ್ಯಾರಂಟಿ ಅತ್ತ್ ” ಎಂಬ ತುಳು ನಾಟಕವು ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ 2025-2026ನೇ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.

​ಕಾವೂರು ಸೊಸೈಟಿ ಹಾಲ್‌ನಲ್ಲಿ “ವಿಮಾ ಯೋಜನೆ” ಹಾಗೂ “ಆರೋಗ್ಯ ತಪಾಸಣಾ ಕಾರ್ಯಕ್ರಮ”ವನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ಟ್ರಸ್ಟ್‌ನ ಪ್ರಧಾನ ಗೌರವ ಸಲಹೆಗಾರರು ಹಾಗೂ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪದಾಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.