
ಬ್ರಹ್ಮಾವರ : ಕರ್ಜೆಯ ಎಂ.ಎಂ. ಶೆಟ್ಟಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಅಶೀರ್ವಾದ ಗ್ರೀನ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ & ಬಾರ್ ಸಂಸ್ಥೆಯ ಗ್ರ್ಯಾಂಡ್ ಓಪನಿಂಗ್ ಸಮಾರಂಭವು ಅಕ್ಟೋಬರ್ 21ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರ ಶಾಸಕರಾದ ಯಶ್ ಪಾಲ್ ಸುವರ್ಣ, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಶ್ರೀ ಕ್ಷೇತ್ರ ಮಂದಾರ್ತಿಯ ಆಡಳಿತ ಧರ್ಮದರ್ಶಿಗಳಾದ ಧನಂಜಯ ಶೆಟ್ಟಿ, ಉಡುಪಿಯ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಕರ್ಜೆಯ ಶ್ರೀ ಮಾಂಗ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುಗ್ಗಿ ಸುಧಾಕರ ಶೆಟ್ಟಿ, ಕರ್ಜೆಯು ಉದ್ಯಮಿಗಳಾದ ಸುರೇಶ್ ಶೆಟ್ಟಿ ತಡಾಲು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಕಾರ್ಕಳದ ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಎಪಿಎಂ ಸಮೂಹ ಸಂಸ್ಥೆ ಹೆಬ್ರಿ ಇದರ ಮಾಲೀಕರಾದ ಪ್ರವೀಣ್ ಬಲ್ಲಾಳ್, ಹಾಗೂ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಮನೋಹರ ಶೆಟ್ಟಿ ಮಾಲೀಕತ್ವದ ಈ ಸಂಸ್ಥೆಯು ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಿದ್ದು, ಎಸಿ ಮತ್ತು ನಾನ್ ಎಸಿ ಕೊಠಡಿಗಳು, ಮಿನಿ ಪಾರ್ಟಿ ಹಾಲ್ ಹಾಗೂ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ವ್ಯವಸ್ಥೆಯನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಸತಿ, ಕುಟುಂಬದೊಂದಿಗೆ ಊಟೋಪಚಾರ ಹಾಗೂ ಸಣ್ಣ ಸಮಾರಂಭಗಳನ್ನು ಆಯೋಜಿಸಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
