20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಮಾರಂಭದ ಕೃತಜ್ಞತಾ ಸಭೆ

0
22

20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಮಾರಂಭವನ್ನು ಅಭೂತಪೂರ್ವಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರು ಪ್ರದೀಪ್ ಸುವರ್ಣ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಹಾಗೂ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಜರಗಿದ 20ನೇ ವರ್ಷದ ಗಣೇಶೋತ್ಸವ ಸಂಭ್ರಮದ ಲೆಕ್ಕಪತ್ರ ಮಂಡನೆ ಮತ್ತು ಕೃತಜ್ಞತಾ ಸಭೆಯು ಆದಿತ್ಯವಾರ ಅಬ್ಬನಡ್ಕ ಸಂಘದ ರಜತ ಮಹೋತ್ಸವ ಸಭಾಂಗಣದಲ್ಲಿ ಜರಗಿತು.

ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಸುವರ್ಣ ಅವರು ಮಾತನಾಡಿ 20ನೇ ವರ್ಷದ ಅಬ್ಬನಡ್ಕ ಗಣೇಶೋತ್ಸವ ಸಂಭ್ರಮವು ನಮ್ಮೆಲ್ಲರ ನಿರೀಕ್ಷೆಗೂ ಮಿಗಿಲಾಗಿ ಅದ್ಭುತ ಯಶಸ್ಸು ಕಂಡಿದೆ ಈ ಯಶಸ್ಸಿನಿಂದ ಸಹಕರಿಸಿದ ವಿವಿಧ ಸಮಿತಿಯಲ್ಲಿ ಶ್ರಮಿಸಿದ ಸಂಘದ ಸದಸ್ಯರೆಲ್ಲರಿಗೂ, ಸಂಘದ ದಾನಿಗಳಿಗೆ, ಹಿತೈಷಿಗಳಿಗೆ, ಅಭಿಮಾನಿಗಳಿಗೆ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ಬಿನ ಅಧ್ಯಕ್ಷರಾದ ಸುರೇಶ್ ಪೂಜಾರಿ ಅಬ್ಬನಡ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.

ಈ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಧ್ಯಕ್ಷರಾದ ದಿನೇಶ್ ಪೂಜಾರಿ ಬೀರೋಟ್ಟು, ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ಸುವರ್ಣ, ಸಂಫದ ಪೂರ್ವ ಅಧ್ಯಕ್ಷರಾದ ರಘುವೀರ್ ಶೆಟ್ಟಿ, ಆನಂದ ಪೂಜಾರಿ, ರಾಜೇಶ್ ಕೋಟ್ಯಾನ್, ಮಹಿಳಾ ಸಂಘಟನಾ ಕಾರ್ಯದರ್ಶಿ ಸುಲೋಚನ ಕೋಟ್ಯಾನ್, ನೂತನ ಉಪಾಧ್ಯಕ್ಷ ಹರಿಣಿ ಪೂಜಾರಿ, ನೂತನ ಜೊತೆ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ನೂತನ ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸುಭಾಷ್ ಕುಮಾರ್ ಧನ್ಯವಾದ ಸಲ್ಲಿಸಿದರು.