ಮಲ್ಪೆ ; ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ ಶ್ರೀ ರಾಮ ದೇವರ ಪ್ರತಿಷ್ಠಾಪನೆ ಗೊಂಡು 25 ವರ್ಷದ ರಜತ ಮೊಹೋತ್ಸವ ಆಚರಣೆ , ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ಆದಿತ್ಯವಾರ ನೆಡೆಯಿತು. ಬೆಳ್ಳಿಗೆ ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ , ಶತ ಕಲಶಾಭಿಷೇಕ , ಕನಕಾಭಿಷೇಕ , ಗಂಗಾಭಿಷೇಕ , ಪಲಾಭಿಷೇಕ , ಹಾಗೂ ಸಾನಿಧ್ಯ ಹವನ , ಶ್ರೀದೇವರಿಗೆ ವಿಶೇಷ ಅಲಂಕಾರ , ಹಾಗೂ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ , ಭಜನಾ ಕಾರ್ಯಕ್ರಮ , ಪಲ್ಲ ಪೂಜೆ , ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು. ವೈಭವದ ಪೇಟೆ ಉತ್ಸವ ; ಸಂಜೆ ಶ್ರೀ ರಾಮ ಮಂದಿರದಿಂದ ಮಲ್ಪೆ ಮುಖ್ಯ ರಸ್ತೆಯಲ್ಲಿ ನೂತನ ರಜತ ಪಲ್ಲಕ್ಕಿಯಲ್ಲಿ ಪ್ರಥಮ ಪೇಟೆ ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ವಿಶೇಷ ಸ್ತಬ್ಧ ಚಿತ್ರ , ತಟ್ಟಿರಾಯ, ಕೀಲುಕುದುರೆ, ಕುಣಿತ ಭಜನೆ, ಗೊಂಬೆ ಬಳಗ, ಚಂಡೆವಾದನ, ವಿವಿಧ ವಾದ್ಯಮೇಳ ಜೊತೆಗೆ ವಿಶೇಷ ಆಕರ್ಷಕ ಮೆರವಣಿಗೆಯ ಪೇಟೆ ಉತ್ಸವ ವೈಭವದಿಂದ ಜರಗಿತು,ರಾತ್ರಿ ಕಟ್ಟೆ ಪೂಜೆ, ವಸಂತ ಪೂಜೆ , ಅಷ್ಟಾವಧಾನ ಸೇವೆ ಜರಗಿತು. ಶ್ರೀ ದೇವರ ಸನ್ನಿಧಿಯಲ್ಲಿ ಮಂದಿರದ ಅರ್ಚಕರಾದ ಅರ್ಚಕರಾದ ಶೈಲೇಶ್ ಭಟ್ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೇದ ಮೂರ್ತಿ ಜಯದೇವ್ ಭಟ್, ಲಕ್ಷ್ಮಣ ಭಟ್, ಸಹಕರಿಸಿದರು. ಶ್ರೀ ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷ ಶಾಲಿನಿ ಪೈ, ಎಮ್ ದೇವರಾಯ ಭಟ್ , ವಿ ಅನಂತ್ ಕಾಮತ್ , ಸುರೇಂದ್ರ ಭಂಡಾರ್ ಕಾರ್ , ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥರಿದ್ದರು.

