Thursday, April 24, 2025
Homeಮಂಗಳೂರುಶ್ರೀರಾಮನವಮಿ ನಿಮಿತ್ತ ಸನಾತನ ಸಂಸ್ಥೆಯಿಂದ ವಿವಿಧೆಡೆ ರಾಮನಾಮ ಸಂಕೀರ್ತನೆ ಆಯೋಜನೆ !

ಶ್ರೀರಾಮನವಮಿ ನಿಮಿತ್ತ ಸನಾತನ ಸಂಸ್ಥೆಯಿಂದ ವಿವಿಧೆಡೆ ರಾಮನಾಮ ಸಂಕೀರ್ತನೆ ಆಯೋಜನೆ !

ಜಿಲ್ಲಾದ್ಯಂತ ಬಾಲಸಂಸ್ಕಾರ ವರ್ಗಗಳಲ್ಲಿ ಸಾಮೂಹಿಕ ರಾಮನಾಮ ಪಠಣ !

ದಕ್ಷಿಣ ಕನ್ನಡ (ಮಂಗಳೂರು) : ಶ್ರೀ ವಿಷ್ಣುವಿನ ಏಳನೆಯ ಅವತಾರ ಶ್ರೀರಾಮ ಇವರ ಜಯಂತಿಯ ಪ್ರಯುಕ್ತ ಶ್ರೀ ರಾಮನವಮಿ ಆಚರಿಸುತ್ತಾರೆ. ಚೈತ್ರ ಶುದ್ಧನವಮಿಗೆ ರಾಮನವಮಿ ಎಂದು ಹೇಳುತ್ತಾರೆ. ಧರ್ಮದ ಎಲ್ಲಾ ಮಿತಿಗಳನ್ನು ಪಾಲಿಸುವ ಅಂದರೆ, ಮರ್ಯಾದಾ ಪುರುಷೋತ್ತಮ , ಆದರ್ಶ ಪುತ್ರ  ಆದರ್ಶ ಬಂಧೂ, ಆದರ್ಶ ಪತಿ, ಆದರ್ಶ ಮಿತ್ರ, ಆದರ್ಶ ರಾಜಾ, ಆದರ್ಶ ಶತ್ರು ಹೇಗೆ ಎಲ್ಲಾ ರೀತಿಯಲ್ಲಿಯೂ ಆದರ್ಶ ಆಗಿರುವವರು ಯಾರು ಎಂದು ಕೇಳಿದಾಕ್ಷಣ ಕಣ್ಣು ಎದುರು ಬರುವ ನಾಮ ಎಂದರೆ ಅದು ಶ್ರೀರಾಮ . ಇಂದು ಎಂದಿಗಿಂತಲೂ ಶ್ರೀರಾಮ ತತ್ವದ ಲಾಭ ಒಂದು ಸಾವಿರ ಪಟ್ಟು ಹೆಚ್ಚಾಗಿ ಕಾರ್ಯನಿರತವಾಗಿರುತ್ತದೆ.

ಇದರ ಲಾಭ ಪಡೆಯಲು ದಕ್ಷಿಣ ಕನ್ನಡ, ಕೊಡಗು ಮತ್ತು ಕಾಸರಗೋಡಿನ ೮ ಸ್ಥಳಗಳಲ್ಲಿ ನಡೆದ ಸನಾತನ ಸಂಸ್ಥೆಯ ಬಾಲಸಂಸ್ಕಾರ ವರ್ಗಗಳಲ್ಲಿ ಸಾಮೂಹಿಕ ‘ಶ್ರೀರಾಮ ಜಯ ರಾಮ ಜಯ ಜಯ ರಾಮ |’ ಈ ನಾಮಜಪವನ್ನು ಮಾಡಲಾಯಿತು. ಬಾಲಸಂಸ್ಕಾರ ವರ್ಗದ ಮಕ್ಕಳು ಉತ್ಸಾಹದಿಂದ ಶ್ರೀ ರಾಮಚಂದ್ರನ ಕಥೆಗಳನ್ನು ಕೇಳಿ, ರಾಮನ ಗುಣಗಳನ್ನು ಅರಿತುಕೊಂಡರು. ಬೋಳೂರು ಬೊಕ್ಕಪಟ್ಟಣ ಭಜನಾ ಮಂದಿರ, ಮಂಜು ಶ್ರೀ ಭಜನ ಮಂಡಳಿ ಕುಂಡಡ್ಕಾ ವೇಣೂರು ಮುಂತಾದ ಬಾಲಸಂಸ್ಕಾರ ವರ್ಗಗಳಲ್ಲಿ ೨೦೦ಕ್ಕೂ ಅಧಿಕ ಮಕ್ಕಳು ಮತ್ತು ಹಿಂದೂ ಬಾಂಧವರು ರಾಮನಾಮ ಜಪವನ್ನು ಮಾಡಿ ಪ್ರಭು ಶ್ರೀ ರಾಮನ ಚರಣಗಳಲ್ಲಿ ಕೃತಜ್ಞತೆಯನ್ನು ಸಮರ್ಪಿಸಿದರು.

RELATED ARTICLES
- Advertisment -
Google search engine

Most Popular