ಮೂಡುಬಿದಿರೆ ಬಿಲ್ಲವ ಸಂಘದಲ್ಲಿ ಗುರು ಜಯಂತಿ, ಮೂರ್ತಿ ಪ್ರತಿಷ್ಠಾಪನೆಯ 39ನೇ ವಾರ್ಷಿಕೋತ್ಸವ

0
188


ಮೂಡುಬಿದಿರೆ: ಪ್ರತಿಯೊಬ್ಬರು ಸಮಾಜದ ಆಸ್ತಿ. ದೇಶದ ಆಸ್ತಿ. ನಾರಾಯಣಗುರುಗಳ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನಾರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿರಿಯವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿ , ಸಾಮಾಜಿಕ ಕೆಲಸ-ಕಾರ್ಯಗಳಿಗೆ ತೊಡಗಿಸುವಂತೆ ಮಾರ್ಗದರ್ಶನ ನೀಡಬೇಕೆಂದು ವಾಗ್ಮಿ ಎನ್ .ಆರ್ ದಾಮೋದರ ಶರ್ಮ ಹೇಳಿದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣ ಗುರು ಸೇವಾದಳ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ನಾರಾಯಣ ಗುರುಗಳ 171ನೇ ವರ್ಷದ ಜನ್ಮ ದಿನಾಚರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆಯ 39ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದರು.
ಶಾಸಕ ಉಮಾನಾಥ ಎ.ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಬೇಧ ಭಾವವು ಇಲ್ಲದೆ ಎಲ್ಲಾ ವಗ9ದ ಜನರ ಬದುಕನ್ನು ಸುಧಾರಣೆ ಮಾಡಲು ಹೊರಟವರು ನಾರಾಯಣ ಗುರುಗಳು. ಅವರು ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮವೆಂದು ಸಾರಿರುವುದು ಅದು ಮಾನವ ಕುಲಕ್ಕೆ ಹೊರತು ಇತರ ಜಾತಿ, ಧಮ9ಗಳಿಗಲ್ಲ ಎಂಬುದನ್ನು ನಾವು ಸರಿಯಾಗಿ ಅಥ9 ಮಾಡಿಕೊಳ್ಳಬೇಕೆಂದರು.
ಸಂಘದ ಅಧ್ಯಕ್ಷ ,ವಕೀಲ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸತೀಶ್ ಎನ್ ಬಂಗೇರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಅಂತರಾಷ್ಟಿçÃಯ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ ರವಿ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಲಕ್ಷö್ಮಣ್ ಪೂಜಾರಿ, ಸುಶಾಂತ್ ಕರ್ಕೇರ, ಹಾಗೂ ನವಾನಂದ ಒಂಟಿಕಟ್ಟೆ ಸನ್ಮಾನಿತರ ಪತ್ರವನ್ನು ವಾಚಿಸಿದರು. ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ ಒಂಟಿಕಟ್ಟೆ ಹಾಗೂ ಸಂಘದ ಸಾಂಸ್ಕೃತಿಕ ಸ್ಪರ್ಧೆಗಳ ನೃತ್ಯ ಸಂಯೋಜಕ ಚೇತನ್ ಜೈನ್ ಅವರನ್ನು ಗೌರವಿಸಲಾಯಿತು.
ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಡಾ.ಮುರಳೀಕೃಷ್ಣ ಆರ್ ವಿ, ಎಮ್.ಸಿ.ಎಸ್ ಬ್ಯಾಂಕ್‌ನ ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಂ, ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಮೂಡುಬಿದಿರೆ ಶಾಖಾ ಪ್ರಬಂಧಕ ಅಭಿಜಿತ್, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಮೂಳೆ ಶಸ್ತçಚಿಕಿತ್ಸಕ ಡಾ.ಉಜ್ವಲ್ ಯು.ಸುವರ್ಣ, ನೆಲ್ಲಿಕಾರು ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ರುಕ್ಕಯ್ಯ ಪೂಜಾರಿ ಅಳಿಯೂರು,ಸೇವಾದಳದ ಅಧ್ಯಕ್ಷ ದಿನೇಶ್ ಪೂಜಾರಿ ಮಾರೂರು, ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಶ್ರೀರಾಜ್ ಸನಿಲ್ ನಿರೂಪಿಸಿದರು. ಉಪಾಧ್ಯಕ್ಷ ರವೀಂದ್ರ ಕರ್ಕೇರ ವಂದಿಸಿದರು.


LEAVE A REPLY

Please enter your comment!
Please enter your name here