ತಾನೊಬ್ಬ ಬಂಟ ಸಮುದಾಯದ ಶಾಸಕನಾಗಿದ್ದರೂ ಬಿಲ್ಲವ ಸಮುದಾಯದ ಸ್ವಾಮೀಜಿ ಬ್ರಹ್ಮಾನಂದ ಸರಸ್ವತಿಯವರ ಚಾತುರ್ಮಾಸದ ರೂವಾರಿಯಾಗಿ ಹಿಂದೂ ಸಮಾಜವನ್ನು ಒಗ್ಗೂಡಿಸಿ ಯಶಸ್ವಿಗೊಳಿಸಿದ ಗುರುರಾಜ್ ಗಂಟಿಹೊಳೆಗೆ ರಾಜ್ಯ, ದೇಶ-ವಿದೇಶಗಳ ಬಿಲ್ಲವ ಸಂಘಟನೆಗಳಿಂದ ಅಭಿನಂದನಾ ಮಹಾಪೂರ!
ಬೈಂದೂರು: ಜಾತಿ, ಮತಗಳ ಗಡಿಗಳನ್ನು ಮೀರಿ ಸಮಾಜದ ಒಳಿತಿಗಾಗಿ ಶ್ರಮಿಸುವ ಮೂಲಕ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಮಾದರಿ ನಾಯಕತ್ವ ಮೆರೆದಿದ್ದಾರೆ. ಬೈಂದೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ ಕಾರ್ಯಕ್ರಮದ ಯಶಸ್ಸಿನ ಹಿಂದೆ ಅವರು ನಿಂತು ಇತಿಹಾಸ ನಿರ್ಮಿಸಿದ್ದಾರೆ.
ತಾನೊಬ್ಬ ಬಂಟ ಸಮುದಾಯದ ಶಾಸಕನಾಗಿದ್ದರೂ, ಬಿಲ್ಲವ ಸಮುದಾಯದ ಪೂಜ್ಯ ಸ್ವಾಮೀಜಿಯಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಗುರುವಾಗಿ ಸ್ವೀಕರಿಸಿ, ಚಾತುರ್ಮಾಸದ ಮುಖ್ಯ ರೂವಾರಿಯಾಗಿ ಮುಂಚೂಣಿಯಲ್ಲಿ ನಿಂತು ಇಡೀ ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಮೂಲಕ ಈ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಶಾಸಕರ ಈ ವಿಶಿಷ್ಟ ಹೆಜ್ಜೆಗೆ ಬೈಂದೂರು ಬಿಲ್ಲವ ಸಮುದಾಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಇದು ಸಮಾಜದ ಗಟ್ಟಿ ಒಗ್ಗಟ್ಟಿಗೆ ಸಾಕ್ಷಿಯಾಗಿದೆ.
ರಾಜ್ಯ ಹಾಗೂ ದೇಶ-ವಿದೇಶಗಳಿಂದ ಹರಿದುಬಂದ ಅಭಿನಂದನೆ:
ರಾಜ್ಯಾದ್ಯಂತ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲಿರುವ ಬಿಲ್ಲವ ಸಂಘಟನೆಗಳಿಂದ ಶಾಸಕರ ಈ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಹ್ರೇನ್, ದುಬೈ, ಬೆಂಗಳೂರು, ಮಹಾರಾಷ್ಟ್ರ ಹಾಗೂ ಉತ್ತರ ಕನ್ನಡ ಸೇರಿದಂತೆ ವಿವಿಧೆಡೆಯ ಬಿಲ್ಲವ ಸಂಘಟನೆಗಳು ಮತ್ತು ಪ್ರಮುಖ ಮುಖಂಡರು ಶಾಸಕರ ಸಂಘಟನಾ ಶಕ್ತಿಯನ್ನು ಹಾಡಿಹೊಗಳುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸನಾತನ ಧರ್ಮದ ನಿಜವಾದ ಸೇವಕ:
“ತಾನೊಬ್ಬ ಯಾವುದೇ ಜಾತಿಯಲ್ಲಿ ಜನಿಸಿರಲಿ, ಸನಾತನ ಧರ್ಮದ ತತ್ವದಡಿ ಕೆಲಸ ಮಾಡುವವರನ್ನು ನಾವೆಲ್ಲರೂ ಸಂಭ್ರಮಿಸಬೇಕು, ಪೂಜಿಸಬೇಕು” ಎನ್ನುವ ಉದಾತ್ತ ಮನೋಭಾವದ ಶಾಸಕ ಗುರುರಾಜ್ ಗಂಟಿಹೊಳೆ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

