ಬಂಟ್ವಾಳ : ಯುವವಾಹಿನಿ (ರಿ) ಬಂಟ್ವಾಳ ಘಟಕದ ವತಿಯಿಂದ ಜುಲೈ 23 ನೇ ಗುರುವಾರ ಸಜೀಪ ಮುನ್ನೂರು ಪುರುಷೋತ್ತಮ ಪೂಜಾರಿ ಮಿತ್ತಕಟ್ಟ ಇವರ ಮನೆಯಲ್ಲಿ ಗುರುತತ್ವವಾಹಿನಿ 72 ನೇ ಮಾಲಿಕೆ ನಡೆಯಿತು. ಜಯಶಂಕರ್ ಕಾನ್ಸಾಲೆ ಗುರು ತತ್ವ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ರಿ.ಬಂಟ್ಟಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷರಾದ ಹರೀಶ್ ಅಜೆಕಲ, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ, ನಿರ್ದೇಶಕರಾದ ಶೈಲೇಶ್ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಸಂಘಟನಾ ಕಾರ್ಯದರ್ಶಿಯಾದ ಜಗನ್ನಾಥ್ ಕಲ್ಲಡ್ಕ. ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರಾ, ಅರುಣ್ ಮಹಾಕಾಳಿಬೆಟ್ಟು,ನಾಗೇಶ್ ಪೊನ್ನೋಡಿ, ಶಿವಾನಂದ ಎಂ , ಹರೀಶ್ ಕೋಟ್ಯಾನ್ ಕುದನೆ, ದಿನೇಶ್ ಸುವರ್ಣ ರಾಯಿ, ಜಗದೀಶ್ ಕಾರಾಜೆ ಮತ್ತು ಸದಸ್ಯರಾದ ಯಶೋಧರ್ ಕಡಂಬಲಿಕೆ, ವಿಘ್ನೇಶ್ ಬೊಳ್ಳಾಯಿ , ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ, ಸಾತ್ವಿಕ್ ದೇರಾಜೆ, ನಾರಾಯಣ ಪಲ್ಲಿಕಂಡ, ಅಶ್ವಿನ್ ಕಾರಾಜೆ ಮತ್ತು ವಿನಯ್ ಆಚಾರ್ಯ ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ಟಾಳ ಘಟಕದ ಅಧ್ಯಕ್ಷರಾದ ಕಿರಣ್ ರಾಜ್ ಪೂಂಜರಕೋಡಿ ಸ್ವಾಗತಿಸಿದರು, ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ಧನ್ಯವಾದ ನೀಡಿದರು.

