ಗೌರವ ಡಾಕ್ಟರೇಟ್ ಪದವಿ ಪಡೆದ ಹೆಚ್. ಎಸ್. ಪ್ರತಿಮಾ ಹಾಸನ್

0
67

24-01-2026ರಂದು ಬೆಂಗಳೂರಿನ ಬಸವನಗುಡಿಯಲ್ಲಿ ಸನ್ ರೈಸ್ ಇಂಟರ್ ನ್ಯಾಷನಲ್ ಕಲ್ಚರಲ್  ಯುನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪದವಿ  ನೀಡುವ  ಕಾರ್ಯಕ್ರಮದಲ್ಲಿ ನೆಲ, ಜಲ,  ನಾಡು, ನುಡಿಗಾಗಿ ಶ್ರಮಿಸುತ್ತಿರುವ ಹಾಸನ ನಗರದ ಶಿಕ್ಷಕಿ.ಸಾಮಾಜಿಕ ಚಿಂತಕಿ. ಸಾಹಿತಿ.ಪತ್ರಕರ್ತೆ ಹಾಗೂ ಸಂಸ್ಥಾಪಕ ಅಧ್ಯಕ್ಷರು  ‘ ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್.ರಾಜ್ಯ ಘಟಕ. ಹಾಸನ.’ ಬಹುಮುಖ ಪ್ರತಿಭೆ, ಸದಾ ಕ್ರಿಯಾಶೀಲರಾಗಿರುವ ಹಾಗೂ ಜಿಲ್ಲೆ, ರಾಜ್ಯ,ಮಟ್ಟದಲ್ಲಿ ಹಲವಾರು ಸಂಘ ಸಂಸ್ಥೆಯಲ್ಲಿ ಪದಾಧಿಕಾರವನ್ನು ಪಡೆದು  ಕಾರ್ಯನಿರ್ವಹಿಸುತ್ತಿದ್ದು, ನೂರಾರು ಪ್ರಶಸ್ತಿಗಳನ್ನು ಪಡೆದಿರುವ  ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ  ಪ್ರಶಸ್ತಿಗಳನ್ನು ಪಡೆದಿದ್ದು. ಯಾವುದೇ ಹಮ್ಮು ಇಲ್ಲದ ನೇರ ನುಡಿಯ ಮಾತುಗಾರ್ತಿ, ಮಹಿಳಾ ಸಾಧಕಿ, ಮಹಿಳಾ ಹೋರಾಟಗಾರ್ತಿ, ರೈತರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜ ಸೇವಕಿಯಾಗಿ  ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತಿಕವಾಗಿ ಸೇವೆ ಸಲ್ಲಿಸಿದ್ದು ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿ  ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದನ್ನು ಗಮನಿಸಿದ್ದು ಹಾಗೂ ಅಂಕಣಗಾರ್ತಿಯಾಗಿ, ಸಮಾಜದ ಓರೆಕೊರೆಯ ಬಗ್ಗೆ ತಿಳಿಸುತ್ತಿದ್ದು ಹಲವಾರು ಪ್ರಕಾರಗಳಲ್ಲಿ ಪತ್ರಿಕೆಗಳಿಗೆ ಬರೆಯುತ್ತಿರುವುದನ್ನು ಗಮನಿಸಿದ್ದು. ಎಲ್ಲ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹಲವಾರು ಸಂಘಟನೆಗೆ ಮಾದರಿಯಾಗಿದ್ದಾರೆ ಎಂದು ಅವರ ಎಲ್ಲ ಕಾರ್ಯ ವನ್ನು ಗಮನಿಸಿ, ದಾಖಲೆಯನ್ನು ಪರಿಶೀಲಿಸಿ ಗೌರವ ಡಾಕ್ಟರೇಟ್  ಪದವಿ ಗೆ ಆಯ್ಕೆ ಮಾಡಿ ಸಾಹಿತ್ಯ ಹಾಗೂ ಸಮಾಜ ಸೇವೆಗೆ ಹೆಚ್. ಎಸ್. ಪ್ರತಿಮಾ ಹಾಸನ್ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪುಟ್ಟೇಗೌಡರು ರಿಟೆಡ್ ಪೊಲೀಸ್ ಆಫೀಸರ್, ಡಾ. ಪುಷ್ಪಲತಾ ಸ್ಟೇಟ್ ವಾಯ್ಸ್ ಪ್ರೆಸಿಡೆಂಟ್ ಕರ್ನಾಟಕ ರಾಜ್ಯ ರೈತ ಸಂಘ, ಡಾ.ಮಂಜುಳಾ  ಕೇರ್ ಆಲ್ ಹಾಸ್ಪಿಟಲ್ ಟ್ರಸ್ಟ್, ಡಾ. ಕುಮಾರ್ ವಸಿಷ್ಠ, ಫೇಮಸ್ ಅಸ್ತ್ರೋಲಜಿ, ಡಾ. ಶಶಿಕಲಾ ಆರ್. ಎಜುಕೇಶನ್ ಡಿಪಾರ್ಟ್ಮೆಂಟ್, ರಾಮು ಅಡ್ವಕೇಟ್   ಹೈ ಕೋರ್ಟ್ ಆಫ್ ಕರ್ನಾಟಕ, ಕಸ್ತೂರಿ ಚಂದ್ರು,  ಇನ್ನು ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here