ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣ – ರವೀಂದ್ರ ಪಿ

0
24

“ಸಂಸ್ಕಾರ, ಸಂಘಟನೆ ಮತ್ತು ಸೇವೆ ಇವು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮೂಲ ಧ್ಯೇಯೋದ್ದೇಶವಾಗಿದೆ. ವಿವೇಕಾನಂದ ವಿದ್ಯಾಸಂಸ್ಥೆಗಳೂ ಈ ಧ್ಯೇಯಗಳನ್ನಿರಿಸಿಕೊಂಡು ಸಂಸ್ಕಾರಯುತ ಹಾಗೂ ಸಂಘಟಿತ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಹತ್ತು ಹಲವು ಸಂಘಸಂಸ್ಥೆಗಳಲ್ಲಿ ಸಮಾನಮನಸ್ಕರು ಒಟ್ಟಾಗುತ್ತಾರೆ ಆದರೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಲ್ಲಿ ಯೋಗಬಂಧುಗಳು ಅತ್ಯಂತ ಕ್ರಿಯಾಶೀಲರಾಗಿ ಒಂದೇ ಸೂರಿನಡಿ ಒಂದೇ ಮನಸ್ಸ್ಸಿನಿಂದ ಸಂಘಟಿತರಾಗುವುದು ವಿಶೇಷ. ಪತಂಜಲಿ ಯೋಗ ಶಿಕ್ಷಣ ಸಮಿತಿಯ ರೀತಿಯಲ್ಲೇ ನಮ್ಮ ವಿದ್ಯಾರ್ಥಿಗಳೂ ಯೋಗಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಥಸಪ್ತಮಿಯಂದು ಸೂರ್ಯ ಪ್ರಖರವಾಗಿರುವ ದಿನ. ಇದು ಸೂರ್ಯಾರಾಧನೆಗೆ ಪ್ರಶಸ್ತವಾದ ದಿನವೆಂದು ಹೇಳಲಾಗುತ್ತದೆ.

ನಮ್ಮ ತೆಂಕಿಲದ ವಿವೇಕಾನಂದ ಆವರಣದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತೀ ವರ್ಷ ರಥಸಪ್ತಮಿಯ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ಸೂರ್ಯನಮಸ್ಕಾರ ಮಾಡುತ್ತಾರೆ. ಈ ಬಾರಿಯ ರಥಸಪ್ತಮಿಯಂದು ನೆಹರುನಗರದ ವಿವೇಕಾನಂದ ಆವರಣದಲ್ಲೂ ರಥಸಪ್ತಮಿಯ ಆಚರಣೆ ನಡೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಸೇವಾ ಭಾವ ಸದಾ ನಮ್ಮಲ್ಲಿರಲಿ. ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಶ್ರಮಿಸೋಣ. ಮುಂದಿನ ದಿನಗಳಲ್ಲೂ ವಿವೇಕಾನಂದ ವಿದ್ಯಾಸಂಸ್ಥೆಗಳು ಇಂತಹ ಕಾರ್ಯಕ್ರಮಗಳಿಗೆ ಸದಾ ಕೈ ಜೋಡಿಸಲಿದೆ.” ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ. ಹೇಳಿದರು.

ರಥಸಪ್ತಮಿ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ನೇತ್ರಾವತಿ ವಲಯ, ಪುತ್ತೂರು ತಾಲೂಕು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇವರ ಸಹಯೋಗದೊಂದಿಗೆ ಪುತ್ತೂರಿನ ನೆಹರುನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ಮುಂಭಾಗದಲ್ಲಿ“ಸಾಮೂಹಿಕ ೧೦೮ ಸೂರ್ಯ ನಮಸ್ಕಾರ” ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿವೇಕಾನಂದ ವಸತಿನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ, ತಾಲೂಕು ಸಂಚಾಲಕರಾದ ಶ್ರೀಯುತ ಕೃಷ್ಣಾನಂದ, ಶುಭ, ಶಶಿಕಲಾ ಹಾಗೂ ಬಾಲಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸೂರ್ಯಾರಾಧನೆಯ ವೈಜ್ಞಾನಿಕ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವುದು, ದೈಹಿಕ–ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದು ಹಾಗೂ ಯೋಗದ ಮಹತ್ವವನ್ನು ಸಮಾಜದ ಎಲ್ಲಾ ವರ್ಗಗಳಿಗೆ ತಲುಪಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೂರಾರು ಯೋಗ ಬಂಧುಗಳು ಒಂದೇ ವೇದಿಕೆಯಲ್ಲಿ ೧೦೮ ಸೂರ್ಯ ನಮಸ್ಕಾರಗಳನ್ನು ನೆರವೇರಿಸುವ ಮೂಲಕ ಆರೋಗ್ಯ, ಶಿಸ್ತು ಮತ್ತು ಸಂಸ್ಕಾರದ ಸಂದೇಶವನ್ನು ನೀಡಿದರು.

700 ಕ್ಕಿಂತಲೂ ಹೆಚ್ಚು ಜನರು ಭಾಗಿ
ಮುಂಜಾನೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ೩ ಹಂತಗಳಲ್ಲಿ ೧೦೮ ಸೂರ್ಯ ನಮಸ್ಕಾರ ಮಾಡಿದ ನಂತರ ಸಮಾಪನಗೊಂಡಿತು. ರಥಸಪ್ತಮಿಯಂದು ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಯೋಗಬಂಧು ಜಯಲಕ್ಷ್ಮಿ ಅವರು ತಿಳಿಸಿದರು. ಸೂರ್ಯನಮಸ್ಕಾರವನ್ನು ೩ ಹಂತಗಳಲ್ಲಿ ಕ್ರಮವಾಗಿ ಯೋಗಬಂಧುಗಳಾದ ಅಶ್ವಿನಿ, ದಯಾನಂದ, ರೂಪ ನಡೆಸಿಕೊಟ್ಟರು.ಕಾರ್ಯಕ್ರಮದ ಪ್ರಾರಂಭದಲ್ಲಿ ಮಾನಸಿಕ ಸಿದ್ದತೆಯನ್ನು ಸುಮಾ ನೆರವೇರಿಸಿದರು.ಪ್ರಾತ್ಯಕ್ಷಿತೆಯಲ್ಲಿ ಯೋಗಬಂಧುಗಳಾದ ಭವ್ಯ, ಶರಣಾಕ್ಷಿ, ಕುಸುಮಾಧರ,ರವಿಶಂಕರ, ರಕ್ಷಿತ್, ಚೇತನ, ನಿಶಾಂತ್,ಸAಧ್ಯಾ, ಪ್ರದೀಪ್, ಪವಿತ್ರ,ಸಂತೋಷ,ಜ್ಯೋತಿ, ಮೋಹನ, ರಾಧಿಕಾ,ಪೂರ್ಣಿಮಹಾಗೂ ಕುಶಾಲ ಸಹಕರಿಸಿದರು.

ದಿವ್ಯ ಸ್ವಾಗತಿಸಿ,ರಮೇಶ್ ಪ್ರಭು ವಂದಿಸಿದರು. ಜೈತ್ರಿಕ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರಿನ ಸುತ್ತಮುತ್ತಲಿನ ಪತಂಜಲಿ ಸಮಿತಿಯ ಯೋಗಬಂಧುಗಳು, ನಾಗರಿಕರು ಹಾಗೂ ವಿವೇಕಾನಂದ ವಿಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡAತೆ ಸುಮಾರು 700 ಕ್ಕಿಂತಲೂ ಹೆಚ್ಚು ಜನರುಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here