ಕುಂದಾಪುರ ತಾಲೂಕಿನ ಕಾರಣಿಕ ದೈವಕ್ಷೇತ್ರಗಳಲ್ಲೊಂದಾದ ಹಾಲಾಡಿ ಶ್ರೀ ಮರ್ಲುಚಿಕ್ಕು ದೇವಸ್ಥಾನದಲ್ಲಿ ದಿನಾಂಕ: 20-01-2026 ರಿಂದ 22-01-2026 ರವರೆಗೆ ಪ್ರತಿಷ್ಠಾ ವರ್ಧಂತಿ ಉತ್ಸವ, ಹಾಲು ಹಬ್ಬ ಮತ್ತು ಗೆಂಡೋತ್ಸವ ನಡೆಯಲಿದೆ.
ಹಾಲಾಡಿಯ ವಾರಾಹಿ ನದಿಯ ತಟಾಕದಲ್ಲಿರುವ ಈ ದೇವಸ್ಥಾನಕ್ಕೆ ಕರಾವಳಿ ಮತ್ತು ಮಲೆನಾಡ ಭಾಗದಲ್ಲೂ ಬಹುದೊಡ್ಡ ಸಂಖ್ಯೆಯ ಭಕ್ತರಿದ್ದು, ಕರಾವಳಿ ಕಡಲ ಬಾಗದ ಖಾರ್ವಿ ಕೊಂಕಣಿ ಸಮುದಾಯದ ಆರಾಧ್ಯ ಕ್ಷೇತ್ರವಾಗಿದೆ, ಚಿಕ್ಕು ಪ್ರಧಾನ ದೇವಸ್ಥಾನಗಳಲ್ಲಿ ಹಾಲಾಡಿಯ ಆದಿ ಮರಳುಚಿಕ್ಕು ಮತ್ತು ಮರಳುಚಿಕ್ಕು ದೇವಸ್ಥಾನದ ಗೆಂಡಸೇವೆ ಮೊದಲು ನಡೆಯುತ್ತದೆ.
ಶ್ರೀ ಕ್ಷೇತ್ರದಲ್ಲಿ ಜನವರಿ 20 ರಂದು ಬೆಳಿಗ್ಗೆ 9.30 ರಿಂದ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಕಲಾಹೋಮ, ಕಲಾಭಿಷೇಕ ಮಧ್ಯಾಹ್ನ 1.00 ರಿಂದ ಅನ್ನಸಂತರ್ಪಣೆ, ಜನವರಿ 21 ರಂದು ಮಧ್ಯಾಹ್ನ ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ. ರಾತ್ರಿ ಗೆಂಡಸೇವೆ, ಮಹಾ ಅನ್ನ ಸಂತರ್ಪಣೆ, ಶ್ರೀ ಕ್ಷೇತ್ರ ಹಾಲಾಡಿ ಮೇಳದವರಿಂದ ಯಕ್ಷಗಾನ ಬಯಲಾಟ, ಜನವರಿ 22 ರಂದು ಸ್ವಾಮಿ ಸೇವೆ, ನಾಗ ದರ್ಶನ,ಢಮರು ಸೇವೆ, ತುಲಾಭಾರ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

