ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಪೇಟೆಯಲ್ಲಿ ಬೈಕ್ ಮತ್ತು ಲಾರಿ ಅಪಘಾತ ಹಿನ್ನಲೆಯಲ್ಲಿ ಲಾರಿ ಹರಿದು ಬೈಕ್ ಸಹ ಸವಾರ ಮೃತಪಟ್ಟಿದ್ದಾನೆ
ಮೃತ ವಿದ್ಯಾರ್ಥಿಯನ್ನು ಕೇರಳ ತಿರುವನಂತಪುರ ಮೂಲದ ಮುಲ್ಕಿ ಸೈಂಟ್ ಆನ್ಸ್ ಕಾಲೇಜು ವಿದ್ಯಾರ್ಥಿ ಸುಗಂಧ್ (21) ಎಂದು ಗುರುತಿಸಲಾಗಿದೆ
ಬೈಕ್ ಸವಾರ ಇನ್ಸಾಫ್ (21) ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುತ್ತಿರುವ ಲಾರಿ ಹಾಗೂ ಸುರತ್ಕಲ್ ನಿಂದ ಮೂಲ್ಕಿ ಕಡೆಗೆ ಪ್ರಯಾಣಿಸುತ್ತಿರುವ ಬೈಕ್ ಹಳೆಯಂಗಡಿ ಮುಖ್ಯ ರಸ್ತೆಯ ಬ್ಯಾರಿಕೇಡ್ ಬಳಿ ಸಿಕ್ಕಿಹಾಕಿಕೊಂಡು ಅಫಘಾತ ಸಂಭವಿಸಿದೆ. ಲಾರಿ ಚಾಲಕ ಮಂಜುನಾಥ ಚೂರಿ ವಿರುದ್ದ ಪ್ರಕರಣ ದಾಖಲಾಗಿದೆ.