ಪತ್ರಕರ್ತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಆಚಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹು.ಲಿ ಅಮರ್ನಾಥ್ ಆಯ್ಕೆ

0
78

ಬೆಂಗಳೂರು: ನೂತನ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘಟನೆಯ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ರಾಘವೇಂದ್ರ ಆಚಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹು.ಲಿ ಅಮರ್ನಾಥ್ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಹು.ಲಿ ಅಮರನಾಥ್ ರವರು ಮಾತನಾಡಿ ನೂತನ ಪತ್ರಕರ್ತರ ಒಕ್ಕೂಟವು ರಾಜ್ಯಾದ್ಯಂತ ವಿಸ್ತರಿಸಿ, ಕಾರ್ಯಾಚರಣೆ ನಡೆಸಿ ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡಿಸುತ್ತೇವೆ ಹಾಗು ಹಲವಾರು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವವರಿಗೆ ನಮ್ಮ ಒಕ್ಕೂಟದ ಪರವಾಗಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ರಾಜ್ಯದಲ್ಲಿ ಹಲವಾರು ಸಂಘಗಳು ಇದ್ದರೂ ಸಹ ಪತ್ರಕರ್ತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. ಪತ್ರಕರ್ತರ ಏಳಿಗೆಗಾಗಿ ನಮ್ಮ ಒಕ್ಕೂಟ ಶ್ರಮಿಸುವುದೇ ಈ ಒಕ್ಕೂಟದ ಉದ್ದೇಶ ಎಂದು ಹೇಳಿದರು.

ಜೊತೆಗೆ ಸದ್ಯದಲ್ಲೇ ನಮ್ಮ ಒಕ್ಕೂಟದವರೆಲ್ಲರೂ ಸೇರಿ ಅಧಿಕೃತವಾಗಿ ದಿನಾಂಕ ನಿಗದಿಪಡಿಸಿ ಅದ್ದೂರಿಯಾಗಿ ಚಾಲನೆ ನೀಡುತ್ತೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ

ನೂತನ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘಟನೆಯ ಒಕ್ಕೂಟದ
ರಾಜ್ಯ ಉಪಾಧ್ಯಕ್ಷರಾಗಿ ಎಸ್ ಅನಿತ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಎಚ್.ಎಸ್.ಕುಮಾರಸ್ವಾಮಿ, ರಾಜ್ಯ ಕಾರ್ಯದರ್ಶಿಯಾಗಿ ವಿ ಪ್ರಕಾಶ್, ರಾಜ್ಯ ಖಜಾಂಚಿಯಾಗಿ ಆಶಾ. ಎ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here