ಹನಿ ಸಂಹಿತೆ’ ಕೃತಿ ಬಿಡುಗಡೆ ಸಮಾರಂಭ : ಸಂಪೂರ್ಣ ಯಶಸ್ವಿ

0
13

-ಮಂದಾರ ರಾಜೇಶ್

​ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜು ಸಭಾಂಗಣದಲ್ಲಿ ದ.ಕ. ಜಿಲ್ಲಾ ಕ.ಸಾ.ಪ. ಮಂಗಳೂರು ತಾಲೂಕು ಘಟಕ, ನೆಲ್ಲಿಕಾರು ಶೆಟ್ಟಿ ಪ್ರತಿಷ್ಠಾನ ಹಾಗೂ ಮಂಗಳೂರು ಹವ್ಯಕ ಸಭಾ ಸಹಯೋಗದಲ್ಲಿ ಗಣೇಶ್ ಪ್ರಸಾದ್ ಅವರ 10ನೇ ಕೃತಿ ‘ಹನಿ ಸಂಹಿತೆ’ ಬಿಡುಗಡೆಗೊಂಡಿತು.

ಖ್ಯಾತ ಹನಿಗವಿ ಡುಂಡಿರಾಜ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕೃತಿಯ ವ್ಯಂಗ್ಯ, ವಿಡಂಬನೆ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿದರು.

​ತಾಲೂಕು ಕ.ಸಾ.ಪ. ಅಧ್ಯಕ್ಷ ಮಂಜುನಾಥ್ ಎಸ್. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿವಾಣ ಗೋವಿಂದ ಭಟ್ಟ ಹಾಗೂ ಎನ್. ತಿಲಕ್ ಪ್ರಸಾದ್ ಶುಭ ಹಾರೈಸಿದರು.

ಉಷಾ ಜಿ ಪ್ರಸಾದ್ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಡಾ. ಮುರಲೀಮೋಹನ್ ಚೂಂತಾರು ಸ್ವಾಗತಿಸಿ, ರಘು ಇಡ್ಕಿದು ನಿರೂಪಿಸಿದರು. ಸುಬ್ರಾಯ ಭಟ್ ವಂದಿಸಿದರು.

ಸನತ್ ಕುಮಾರ್ ಜೈನ್ ಹಾಗೂ ಕೃಷ್ಣಪ್ಪ ನಾಯಕ್ ಕಾರ್ಯಕ್ರಮದಲ್ಲಿ ಸಹಕರಿಸಿದರು