ಉತ್ತಮ ನಾಯಕತ್ವಕ್ಕೆ ಕಠಿಣ ಶ್ರಮ, ಸೇವಾ ಮನೋಭಾವ ಅಗತ್ಯ : ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ವಿಕ್ರಮ್ ದತ್ತ
ಮುಲ್ಕಿ : ಉತ್ತಮ ನಾಯಕತ್ವಕ್ಕೆ ಕಠಿಣ ಶ್ರಮ, ಸೇವಾ ಮನೋಭಾವ ಅಗತ್ಯ ಎಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ವಿಕ್ರಮ್ ದತ್ತ ಹೇಳಿದರು . ಅವರು ಮುಲ್ಕಿ ರೋಟರಿ ಕ್ಲಬ್ ನ 2026 27ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿ ಮುಲ್ಕಿ ರೋಟರಿ ಕ್ಲಬ್ ನ ನೂತನ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮಾತನಾಡಿ ಮುಲ್ಕಿ ರೋಟರಿ ಕ್ಲಬ್ ಅನೇಕ ಸಮಾಜ ಸೇವೆಗಳ ಮೂಲಕ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದು ಮುಂದಿನ ದಿನಗಳಲ್ಲಿ ತಮ್ಮ ನಾಯಕತ್ವದಲ್ಲಿ ಕ್ಲಬ್ ನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು , ಬಿರುವೆರ್ ಕುಡ್ಲ ಸಂಘಟನೆಯ ಮುಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್,
ರೋಟರಿ ಕ್ಲಬ್ ನ ಜೋಯಲ್ ಹೆರಾಲ್ಡ್ ಡಿಸೋಜಾ, ದೇವಿದಾಸ ಶೆಟ್ಟಿ ಕಿನ್ನಿಗೋಳಿ, ಕಳೆದ ಸಾಲಿನ ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜಾ, ಭುಜಂಗ ಬಿ ಕವತ್ತಾರು, ನಾರಾಯಣ, ಶಿವರಾಮ ಜಿ ಅಮೀನ್,ಚಂದ್ರಿಕಾ ಭಂಡಾರಿ, ವೈ ಎನ್ ಸಾಲ್ಯಾನ್, ರವಿಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮಾಜೀ ಅಧ್ಯಕ್ಷ ಜೇಮ್ಸ್ ಪೀಟರ್ ಡಿಸೋಜಾ, ಸ್ವಾಗತಿಸಿದರು ಅಶೋಕ್ ಕುಮಾರ್ ಶೆಟ್ಟಿ ನಿರೂಪಿಸಿದರು.

