ಇಂದು ಸೊರ್ಪು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ

0
139

ಶಿರ್ವ: ಸೂಡ ಸೊರ್ಪು ಶ್ರೀ ದುರ್ಗಾಪರಮೇಶರೀ ಅಮ್ಮನವರ ಸನ್ನಿಧಾನದಲ್ಲಿ ಮೇ 9ರಿಂದ 12ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಪೂರ್ವಭಾವಿಯಾಗಿ ಮೇ 9 ರಂದು ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆಯು ಮಧ್ಯಾಹ್ನ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯಿಂದ ಪ್ರಾರಂಭಗೊಂಡು ವಿವಿಧ ವೇಷ ಭೂಷಣ, ವಾದ್ಯ ಘೋಷ ಬಿರುದಾವಳಿಗಳೊಂದಿಗೆ ಶಿರ್ವ ಮುಖ್ಯರಸ್ತೆಯ ಮೂಲಕ ಶಿರ್ವ ಪೇಟೆ, ಸಂಗೀತಾ ಕಾಂಪ್ಲೆಕ್ಸ್, ತುಂಡುಬಲ್ಲೆಗಾಗಿ ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಾನಕ್ಕೆ ಮೆರವಣಿಗೆಯ ಮೂಲಕ ತಲುಪಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೇ 9ರಂದು ಸಂಜೆ 6 ರಿಂದ ಸೊರ್ಪು ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಮಂಡಳಿಯ ವತಿಯಿಂದ ಭಜನ ಕಾರ್ಯಕ್ರಮ, ಮೇ 10 ರಂದು ಸಂಜೆ 6 ರಿಂದ ವಿವಿಧ ಭಜನ ಮಂಡಳಿಯವರಿಂದ ಭಜನೆ ಕಾರ್ಯಕ್ರಮ, ಮೇ 12 ರಂದು ರಾತ್ರಿ 9 ರಿಂದ ಸಮಾಜರತ್ನ ಲೀಲಾಧರ ಶೆಟ್ಟಿ ಸಾರಥ್ಯದ ಕಾಪು ರಂಗತರಂಗ ಕಲಾವಿದರಿಂದ ಕುಟ್ಯಣ್ಣನ ಕುಟುಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಶ್ರೀ ದೇಗುಲದ ಕಾರ್ಯಕಾರಿ ಸಮಿತಿಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here