ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ನಿಂದ ವಿಶ್ವ ಪರಿಸರ ದಿನದ ಅಂಗವಾಗಿ ಪ್ಲಾಸ್ಟಿಕ್ ವಿರುದ್ಧಧ ಅರಿವಿನ ಅಭಿಯಾನ

0
29

1,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಿದೆ ಮತ್ತು 2025ರ ವೇಳೆಗೆ 15 ನಗರ ಸಂಸ್ಥೆಗಳಲ್ಲಿ ವಸ್ತುಗಳ ಮರು ಪಡೆಯುವ ಸೌಲಭ್ಯಗಳನ್ನು ರೂಪಿಸಲಿದೆ
ಮುಂಬೈ, ಜೂನ್ 4, 2025: ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಪಾರಿಸರಿಕ ಜವಾಬ್ದಾರಿಗೆ ತನ್ನ ಬದ್ಧತೆಯನ್ನು ಮತ್ತಷ್ಟು ಸದೃಢಗೊಳಿಸಿದ್ದು ಪ್ಲಾಸ್ಟಿಕ್ ಬಳಕೆ ಕುರಿತು ಎಚ್ಚರದಿಂದ ಇರುವಂತೆ ಅರಿವಿನ ಅಭಿಯಾನ ಪ್ರಾರಂಭಿಸಿದೆ. ಈ ಉಪಕ್ರಮದ ಭಾಗವಾಗಿ ಗ್ರಾಹಕರು, ಉದ್ಯೋಗಿಗಳು ಮತ್ತು ಸಾರ್ವಜನಿಕರಲ್ಲಿ ಅರಿವಿನ ಉಪಕ್ರಮಗಳನ್ನು ನಡೆಸುತ್ತಿದೆ.
ಈ ಅಭಿಯಾನವನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಸಿ.ಎಸ್.ಆರ್. ಕಾರ್ಯಕ್ರಮ ಪರಿವರ್ತನ್ ಅಡಿಯಲ್ಲಿ ನಡೆಸಲಾಗುತ್ತಿದ್ದು ಅದು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಅವರ ಪ್ಲಾಸ್ಟಿಕ್ ಇ-ತ್ಯಾಜ್ಯವನ್ನು ಮರುಬಳಕೆಗೆ ನೀಡಲು ಮತ್ತು ಅವರ ಮೂಲಭೂತ ಅಗತ್ಯಗಳಿಗೆ ಪ್ಲಾಸ್ಟಿಕ್ ಗೆ ಪರ್ಯಾಯಗಳನ್ನು ಬಳಸಲು ಗ್ರಾಹಕರಿಗೆ ಉತ್ತೇಜಿಸುತ್ತದೆ. ಇದಲ್ಲದೆ ಬ್ಯಾಂಕ್ ಅರಿವಿನ ಕಾರ್ಯಕ್ರಮಗಳು, ಸಂಗ್ರಹದ ಉಪಕ್ರಮಗಳು ಮತ್ತು ಸ್ವಚ್ಛತಾ ಉಪಕ್ರಮಗಳನ್ನು ಉದ್ಯೋಗಿಗಳ ನೇತೃತ್ವದಲ್ಲಿ ನಡೆಸಲಿದ್ದು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಸಂಘಟಿತ ಕ್ರಮವನ್ನು ಉತ್ತೇಜಿಸುತ್ತದೆ.

ಬ್ಯಾಂಕ್ ಪರಿಸರದ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಋಣಾತ್ಮಕ ಪರಿಣಾಮಗಳ ಕುರಿತು ಅರಿವನ್ನು ಹೆಚ್ಚಿಸಲು ವಿಶೇಷ ವೆಬ್ ಪುಟ ಪ್ರಾರಂಭಿಸಿದೆ ಮತ್ತು ನಾಗರಿಕರಿಗೆ ಅವರ ದೈನಂದಿನ ಜೀವನದಲ್ಲಿ ಸರಳ ಆದರೆ ಪರಿಣಾಮಕಾರಿ ರೂಢಿಗಳಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಆನ್ಲೈನ್ ಪ್ರತಿಜ್ಞೆ ಕೈಗೊಳ್ಳಲು ಸನ್ನದ್ಧವಾಗಿಸುತ್ತದೆ.
ಈ ಅರಿವಿನ ಉಪಕ್ರಮದೊಂದಿಗೆ ಬ್ಯಾಂಕ್ ತನ್ನ ಸಮುದಾಯ-ಪ್ರೇರಿತ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಮುಂದುವರಿಸುತ್ತಿದೆ. ಪರಿವರ್ತನ್ ಉಪಕ್ರಮಗಳ ಮೂಲಕ 2025ರಲ್ಲಿ ಬ್ಯಾಂಕ್ 1,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸುವ ಹಾಗೂ 15 ನಗರ ಸಂಸ್ಥೆಗಳಿಗೆ ವಸ್ತುಗಳ ಸಂಗ್ರಹ ಸೌಲಭ್ಯ ರೂಪಿಸುವ ಗುರಿ ಹೊಂದಿದೆ.

ಭಾರತದಾದ್ಯಂತ ಹಲವಾರು ಪ್ರದೇಶಗಳಲ್ಲಿ ಬ್ಯಾಂಕ್ ತ್ಯಾಜ್ಯ ವಿಂಗಡಣೆ, ಮರುಬಳಕೆ ಮತ್ತು ಭೂಭರ್ತಿ ಮೇಲೆ ಆಧಾರಪಡುವುದನ್ನು ಕಡಿಮೆ ಮಾಡುವುದನ್ನು ಸಮಗ್ರ ವಿಧಾನವಾಗಿ ಅನುಷ್ಠಾನಗೊಳಿಸಿದೆ. ಈ ಪ್ರಯತ್ನಗಳು ರಾಷ್ಟ್ರೀಯ ಯೋಜನೆಗಳಾದ ಸ್ವಚ್ಛ ಭಾರತ್ ಅಭಿಯಾನ ಮತ್ತು ಯು.ಎನ್.ಸುಸ್ಥಿರತೆಯ ಅಭಿವೃದ್ಧಿ ಗುರಿಗಳಿಗೆ (ಎಸ್.ಡಿ.ಜಿ.ಗಳು) ಪೂರಕವಾಗಿದ್ದು ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕೇರಳ, ಅಸ್ಸಾಂ, ರಾಜಸ್ಥಾನ ಮತ್ತು ಛತ್ತೀಸಗಢಗಳಲ್ಲಿ ವಿಸ್ತರಿಸಿದ್ದು ಅಲ್ಲಿನ ನಿವಾಸಿಗಳಿಗೆ ಶೈಕ್ಷಣಿಕ ಉಪಕ್ರಮಗಳು, ಕಲಾ ಅನುಸ್ಥಾಪನೆಗಳು ಮತ್ತು ವರ್ತನೆಯ ಬದಲಾವಣೆಯ ಅಭಿಯಾನಗಳ ಮೂಲಕ ಸಕ್ರಿಯವಾಗಿರಿಸಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೈಝದ್ ಭರೂಚಾ, “ಎಚ್.ಡಿ.ಎಫ್.ಸಿ. ಬ್ಯಾಂಕ್ ನಲ್ಲಿ ನಾವು ಅರ್ಥಪೂರ್ಣ ಬದಲಾವಣೆಯನ್ನು ಸಮುದಾಯಗಳೊಂದಿಗೆ ಸಹ-ಸೃಷ್ಟಿಸಬೇಕು ಎನ್ನುವುದರಲ್ಲಿ ನಂಬಿಕೆ ಇರಿಸಿದ್ದೇವೆ. ನಮ್ಮ ಪರಿವರ್ತನ್ ಉಪಕ್ರಮಗಳಲ್ಲಿ ಪ್ಲಾಸ್ಟಿಕ್ ಅರಿವಿನ ಅಭಿಯಾನ ಒಳಗೊಂಡಿದ್ದು ಅವುಗಳನ್ನು ಸ್ಥಳೀಯ ಮಾಲೀಕತ್ವದ ಬೆಂಬಲದೊಂದಿಗೆ ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಥಳೀಯ ನಾಗರಿಕರನ್ನು ಒಳಗೊಳ್ಳುವ ಮೂಲಕ ದೀರ್ಘಾವಧಿ ಪರಿಣಾಮ ಸೃಷ್ಟಿಸಲಿದೆ. ಪ್ಲಾಸ್ಟಿಕ್ ಮಾಲಿನ್ಯ ನಿವಾರಣೆಗೆ ಒಟ್ಟಾಗಿ ಕೆಲಸ ಮಾಡುವ ಮೂಲಕ ಮಾವು ಪರಿಸರ ಸಂರಕ್ಷಣೆಗೆ ಸಣ್ಣ ಭಾಗ ನಿರ್ವಹಿಸುತ್ತಿದ್ದೇವೆ ಮತ್ತು ನಾವು ಸೇವೆ ಒದಗಿಸುವ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ವಲಯವನ್ನು ಸದೃಢಗೊಳಿಸುತ್ತಿದ್ದೇವೆ” ಎಂದರು.

ಪ್ರಮುಖ ಯೋಜನೆಯಾಗಿ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ವೇಸ್ಟ್ ವಾರಿಯರ್ಸ್ ಸಹಯೋಗದಲ್ಲಿ 26- ಅಡಿ ಎತ್ತರದ ಮ್ಯೂರಲ್ ಅನ್ನು ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳಗಳಿಂದ ರೂಪಿಸಲಾಗಿದೆ. ಬಿರ್ ಮತ್ತು ಧರ್ಮಶಾಲಾದಲ್ಲಿ ಎಚ್.ಡಿ.ಎಫ್.ಸಿ. ಬ್ಯಾಂಕ್ 10 ಪಂಚಾಯಿತಿಗಳಲ್ಲಿ `ವರ್ತನೆಯ ಬದಲಾವಣೆ ಅಭಿಯಾನ’ ಅನುಷ್ಠಾನಗೊಳಿಸಿದ್ದು 2024-25ರ ಹಣಕಾಸು ವರ್ಷದಲ್ಲಿ 200 ಮೆಟ್ರಿಕ್ ಟನ್ನುಗಳಷ್ಟು ಘನತ್ಯಾಜ್ಯವನ್ನು ಭೂಭರ್ತಿಗಳಿಂದ ವರ್ಗಾಯಿಸಿದೆ.

ವಿಶಾಖಪಟ್ಟಣದಲ್ಲಿ ಬ್ಯಾಂಕ್ ಗ್ರಾಮ ಪಂಚಾಯಿತಿಗಳೊಂದಿಗೆ ಸಹಯೋಗ ಹೊಂದಿದ್ದು ಎಸ್.ಎಚ್.ಜಿ.ಗಳು ಮತ್ತು ನೈರ್ಮಲ್ಯದ ಕೆಲಸಗಾರರಿಗೆ ತ್ಯಾಜ್ಯವನ್ನು ಆರ್ಥಿಕ ಅವಕಾಶಗಳನ್ನಾಗಿ ಪರಿವರ್ತಿಸಲು ತರಬೇತಿ ನೀಡುತ್ತಿದೆ. ಛತ್ತೀಸಗಢ, ಅಸ್ಸಾಂ ಮತ್ತು ಕೇರಳಗಳಲ್ಲಿ ಅಂತಹುದೇ ಉಪಕ್ರಮಗಳಲ್ಲಿ ಸಾವಿರಾರು ಟನ್ನುಗಳಷ್ಟು ಘನ್ಯಾಜ್ಯವನ್ನು ಸಂಸ್ಕರಿಸಿದೆ, ಅನೌಪಚಾರಿಕ ತ್ಯಾಜ್ಯದ ಕೆಲಸಗಾರರನ್ನು ಏಕೀಕರಿಸಿದೆ ಮತ್ತು ಸ್ಥಳೀಯ ಜೀವನೋಪಾಯಗಳನ್ನು ಹೆಚ್ಚಿಸಿದೆ.
About HDFC BANK
For more information, click here: www.hdfcbank.com.

LEAVE A REPLY

Please enter your comment!
Please enter your name here