ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಬಿ ಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಬಿ ಸಿ ರೋಡ್ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ವತಿಯಿಂದ ಕಾರ್ಮೆಲ್ ಕಾಲೇಜು ಮೊಡಂಕಾಪು ಇಲ್ಲಿ “ಸ್ವಾಸ್ಥ್ಯ ಸಂಕಲ್ಪ”ಕಾರ್ಯಕ್ರಮ ಆಗಸ್ಟ್ 31ರ ಸೋಮವಾರ ಜರಗಿತು. ಮಂಗಳೂರು ನಿವೃತ್ತ ಆರೋಗ್ಯ ಮೇಲ್ವಿಚಾರಕರಾದ ಜಯರಾಮ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿ,ದುಶ್ಚಟ ಮುಕ್ತರಾಗುವಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ “ನಶೆ ಎಂಬ ನರಕ” ಕಿರು ಚಿತ್ರವನ್ನು ವಿಡಿಯೋ ಮೂಲಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ,ಕಾಲೇಜು ಉಪ ಪ್ರಾಂಶುಪಾಲ ಸುರೇಶ್, ಬಿ ಮೂಡ ಒಕ್ಕೂಟದ ಉಪಾಧ್ಯಕ್ಷೆ ಪವಿತ್ರ ಬಿ ಎಸ್, ಉಪಸ್ಥಿತರಿದ್ದರು. ಬಿ ಮೂಡ ಒಕ್ಕೂಟದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿ, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ವಂದಿಸಿದರು.ಬಿ ಸಿ ರೋಡ್ ವಲಯದ ಮೇಲ್ವಿಚಾರಕರು ಗಿರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು.

