ಅಮೃತ ಭಾರತಿ : ಅಮೃತ ಆಸ್ವಾದ ಉದ್ಘಾಟನೆ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ಅಮೃತ ಆಸ್ವಾದ (ಫುಡ್ ಫೆಸ್ಟ್) ಕಾರ್ಯಕ್ರಮ ನಡೆಯಿತು. ಹೆಬ್ರಿ ಬಂಟರ ಸಂಘದ ಸುಕೇಶ್ ಶೆಟ್ಟಿ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಮೃತ ಭಾರತಿ ಹಾಸ್ಟೆಲ್ ಕಮಿಟಿಯ ಗೌರವ ಅಧ್ಯಕ್ಷರಾದ ಯೋಗೀಶ್ ಭಟ್ ಅವರು ಮಾತನಾಡಿ, ಎಳವೆಯಲ್ಲಿಯೇ ವ್ಯವಹಾರ ಜ್ಞಾನವನ್ನು ಕಲಿತುಕೊಳ್ಳಬೇಕು ಎನ್ನುವ ನೆಲೆಯಲ್ಲಿ ಅಮೃತ ಭಾರತಿ ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಜ್ಞಾನವನ್ನು ತಿಳಿಸುವ ಅಮೃತ ಆಸ್ವಾದ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಉದ್ಯಮ ರಂಗದಲ್ಲಿ ಎಷ್ಟು ಎತ್ತರಕ್ಕೂ ಬೇಕಾದರೂ ಬೆಳೆಯಬಹುದು. ಕಾರ್ಮಿಕರಾಗಿ ವೃತ್ತಿ ಆರಂಭಿಸಿದವರು ಇಂದು ಉದ್ಯಮ ರಂಗದ ದಿಗ್ಗಜರಾಗಿ ಬೆಳೆದ ಸಾವಿರಾರು ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ . ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮುಂದೆ ಉದ್ಯಮ ರಂಗದಲ್ಲಿ ಮಹತ್ತರ ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದರು. ಹಾಸ್ಟೆಲ್ ಕಮಿಟಿಯ ಸದಸ್ಯರಾದ ರಾಮಕೃಷ್ಣ ಆಚಾರ್ಯ, ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸನ್ನಿಧಿ ಸ್ವಾಗತಿಸಿ ತ್ರಿಷಾ ಅತಿಥಿಗಳ ಪರಿಚಯವನ್ನು ಮಾಡಿದಳು. ರೀಶಾ ಪೂಜಾರಿ ನಿರೂಪಿಸಿ ಶಾರ್ವರಿ ವಂದಿಸಿದಳು. ಕಾಮರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

