ಹೆಬ್ರಿಯಲ್ಲಿ ಜನಸೇವೆಗೆ ವಿಫುಲವಾದ ಅವಕಾಶಗಳಿವೆ: ನೀರೆ ಕೃಷ್ಣ ಶೆಟ್ಟಿ
ಹೆಬ್ರಿ : ಜನಸೇವೆಗೆ ಸಿಗುವ ಅವಕಾಶಗನ್ನು ಬಳಸಿಕೊಂಡು ಸೇವೆಯನ್ನು ಮಾಡಬೇಕು, ಸಹನೆ ತಾಳ್ಮೆ ಇದ್ದಾಗ ಜನರಸೇವೆ ಮಾಡಲು ಸಾಧ್ಯವಾಗುತ್ತದೆ. ಹೆಬ್ರಿಯಲ್ಲಿ ಜನಸೇವೆಗೆ ವಿಫುಲವಾದ ಅವಕಾಶಗಳಿವೆ, ನಾಯಕತ್ವದ ಗುಣವಿರುವ ಆಶಾ ಶೆಟ್ಟಿ ತಂಡದವರು ಲಯನ್ಸ್ ಮೂಲಕ ಸೇವೆ ಮಾಡಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮುಖಂಡ ನೀರೆ ಕೃಷ್ಣ ಶೆಟ್ಟಿ ಹಾರೈಸಿದರು.
ಅವರು ಬುಧವಾರ ಇಕ್ಕೋಡ್ಲು ಹೋಮ್ ಸ್ಟೇನಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ ಮತ್ತವರ ತಂಡದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥೆಯಲ್ಲಿ ಈಗ ೧೩ ಲಕ್ಷ ಸದಸ್ಯರಿದ್ದಾರೆ, ಅದನ್ನು ೧೫ ಲಕ್ಷಕ್ಕೆ ಏರಿಸುವ ಗುರಿಯನ್ನು ಅಂತರಾಷ್ಟ್ರೀಯ ಅಧ್ಯಕ್ಷರು ಹೊಂದಿದ್ದಾರೆ. ಅದನ್ನು ಮಾಡುವುದು ನಮ್ಮೇಲ್ಲರ ಹೊಣೆಯಾಗಿದೆ. ಅಮೇರಿಕದಲ್ಲಿರುವ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಸಂಸ್ಥೆಯ ಅಧ್ಯಕ್ಷರು ಭಾರತದವರಾಗಿರುವುದು ನಮಗೆಲ್ಲ ಅತ್ಯಂತ ಹೆಮ್ಮೆ, ಸೇವೆಯೇ ಲಯನ್ಸ್ ಸಂಸ್ಥೆಯ ಉದ್ದೇಶ. ನಾವು ಲಯನ್ಸ್ ಮೂಲಕ ಕಟ್ಟಕಡೆಯ ಜನರ ಸೇವೆಯನ್ನು ಮಾಡಬೇಕಿದೆ, ಲಯನ್ಸ್ ಸಂಸ್ಥೆ ಹುಟ್ಟಿದ ಅಮೇರಿಕಾದಲ್ಲೇ ನಮ್ಮ ನೂತನ ಲಯನ್ಸ್ ಜಿಲ್ಲಾ ಗವರ್ನರ್ ಪ್ರಮಾಣವಚನ ಸ್ವೀಕರಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಪದಗ್ರಹಣ ನೆರವೇರಿಸಿ ಲಯನ್ಸ್ ಜಿಲ್ಲಾ ಚೀಫ್ ಕೋಆರ್ಡಿನೇಟರ್ ನೀರೆಬೈಲೂರು ಉದಯ ಕುಮಾರ್ ಹೆಗ್ಡೆ ಹೇಳಿದರು.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಜನಸೇವೆ ಅತ್ಯುತ್ತಮ ಅವಕಾಶ ದೊರೆತಿದೆ. ಸರ್ವರ ಮಾರ್ಗದರ್ಶನದಲ್ಲಿ ಸೇವೆಯನ್ನು ಮಾಡುತ್ತೇನೆ ಎಂದು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷೆ ಆಶಾ ಭುಜಂಗ ಶೆಟ್ಟಿ ಹೇಳಿದರು.
ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸೀತಾನದಿ ನಾಗೇಶ ನಾಯಕ್ ದಂಪತಿಯನ್ನು ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಶಿವಪುರ ಮೂರ್ಸಾಲು ಡಾ. ಪುಪ್ಪರಾಜ್ ಎಂ ನಾಯಕ್, ಬೈಲೂರು ಉದಯ ಕುಮಾರ್ ಹೆಗ್ಡೆ, ಆಶಾ ಭುಜಂಗ ಶೆಟ್ಟಿ, ಹರೀಶ ಶೆಟ್ಟಿ ನಾಡ್ಪಾಲು ಸಹಿತ ಹಲವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ರಾಮಚಂದ್ರ ಐತಾಳ್ ವಿದ್ಯಾರ್ಥಿ ನಿಧಿಯನ್ನು ನೀಡಿದರು. ವೈದ್ಯರ ದಿನಾಚರಣೆ ಪ್ರಯುಕ್ತ ವೈದ್ಯರನ್ನು ಗೌರವಿಸಲಾಯಿತು. ಚಿರಾಗ್ ಆರ್ ಪೂಜಾರಿ ಮತ್ತು ಸಮೀಕ್ಷಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಭುಜಂಗ ಶೆಟ್ಟಿ, ವರಂಗ ಲಕ್ಷ್ಮಣ ಆಚಾರ್ ಹಾಗೂ ಜಯರಾಮ ಶೆಟ್ಟಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಸಿ ಸುರೇಶ ಶೆಟ್ಟಿ, ವಲಯಾಧ್ಯಕ್ಷ ಸತೀಶ ಶೆಟ್ಟಿ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಹರೀಶ ಶೆಟ್ಟಿ ನಾಡ್ಪಾಲು, ಕೋಶಾಧಿಕಾರಿ ಪ್ರಸಾದ್ ರೈ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.
ಹೆಬ್ರಿ ಟಿ.ಜಿ.ಆಚಾರ್ಯ ಪದಗ್ರಹಣ ಅಧಿಕಾರಿಯವರ ಮತ್ತು ಬೇಳಂಜೆ ಹರೀಶ ಪೂಜಾರಿ ನೂತನ ಆಧ್ಯಕ್ಷರನ್ನು ಪರಿಚಯಿಸಿದರು. ರಮೇಶ ಆಚಾರ್ ಹೆಬ್ರಿ ಸಹಕರಿಸಿದರು. ಡಾ. ಭಾರ್ಗವಿ ಐತಾಳ್, ಸ್ನೇಹಲತಾ ಟಿಜಿ, ಸುಜಾತ ಹರೀಶ್ ನಿರೂಪಿಸಿದರು. ನಾಗೇಶ ನಾಯಕ್ ಸೀತಾನದಿ ಸ್ವಾಗತಿಸಿದರು.