ಹೆಬ್ರಿ ದಿನಾಂಕ 27-12-2025 ರ ಶನಿವಾರ ದಂದು ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಅಮೃತಬಾರತಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಯುತ ಗುರುದಾಸ ಶೆಣೈರವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನಗೈದು “ಹೆತ್ತವರ ಹೆಸರನ್ನು ಉಳಿಸಿ, ನಿಮ್ಮಿಂದ ದೇಶಕ್ಕೆ ಒಳಿತಾಗಲಿ”ಎಂದು ಹಾರೈಸಿದರು. ಸಂಸ್ಥೆಯ ವಸತಿ ನಿಲಯ ಕಮಿಟಿಯ ಸದಸ್ಯರಾದ ಶ್ರೀ ರಾಮಕೃಷ್ಣ ಆಚಾರ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ , ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ರಾಘವೇಂದ್ರ ಶೆಟ್ಟಿ (ತಾಂತ್ರಿಕ ಅಭಿಯಂತರರು) ಯವರು ಮಾತನಾಡುತ್ತಾ, “ಅಮೃತ ಭಾರತಿಯ ಸಂಸ್ಕಾರಯುತ ಶಿಕ್ಷಣ ನಿಜಕ್ಕೂ ಮಾದರಿ ನಾನು ಒಬ್ಬ ಇಲ್ಲಿಯ ವಿದ್ಯಾರ್ಥಿಯ ಪೋಷಕನಾಗಿರುವುದು ಹೆಮ್ಮೆ” ತಂದಿದೆ ಎಂದರು. ಇನ್ನೋರ್ವ ಅತಿಥಿ ದಿವ್ಯ ಜ್ಯೋತಿ ಸಹ ಉಪನ್ಯಾಸಕಿ, ಸರಕಾರಿ ಪದವಿ ಪೂರ್ವ ಕಾಲೇಜು ಮುನಿಯಾಲು ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, “ಎಲ್ಲರಿಗೂ ಬಹುಮಾನ ಸಿಗದಿರಬಹುದು, ಆದರೆ ಸ್ಪರ್ಧಾ ಮನಸ್ಥಿತಿ ನಿಮ್ಮದಾಗಿರಲಿ ಭಾಗವಹಿಸುವಿಕೆಯೇ ಮುಖ್ಯ” ಎಂದು ಹುರಿದುಂಬಿಸಿದರು. ಪ್ರಾಂಶುಪಾಲರಾದ ಅರುಣ್ ಎಚ್. ಮುಖ್ಯೋಪಾಧ್ಯಾಯಿನಿ ಅನಿತಾರವರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಪ್ರತಿಭಾ ನಿರೂಪಿಸಿದರು ಸಹ ಶಿಕ್ಷಕಿ , ಐಶ್ವರ್ಯ ಲಕ್ಷ್ಮಿ ಕಾಮತ್ ಸ್ವಾಗತಿಸಿದರು .ಶಿಕ್ಷಕ ಸುಶಾಂತ್ ಸರ್ವರನ್ನು ವಂದಿಸಿದರು.

