ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಹೇಮಾ ಶಾಂತಪ್ಪ ಪೂಜಾರಿ ಪುನಾರಾಯ್ಕೆ

0
63

ದಾವಣಗೆರೆ : ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸರ್ವ ಸದಸ್ಯರ ಮಹಾಸಭೆಯಲ್ಲಿ 2026-28ನೇ ಸಾಲಿನ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಹೇಮಾ ಶಾಂತಪ್ಪ ಪೂಜಾರಿ ಪುನಾರಾಯ್ಕೆಯಾಗಿದ್ದಾರೆ ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ತಿಳಿಸಿದ್ದಾರೆ.

ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷರಾಗಿ ವಸಂತಿ ಮಂಜುನಾಥ್, ಉಪಾಧ್ಯಕ್ಷರಾಗಿ ಗಿರಿಜಮ್ಮ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಅಡಿಗ, ಖಜಾಂಚಿಯಾಗಿ ಶೈಲಾ ವಿಜಯ್‌ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾಗಿ ಪ್ರಭಾ ರವೀಂದ್ರ, ಶಾರದಮ್ಮ ಶಿವನಪ್ಪ, ಲಲಿತಾ ಕಲ್ಲೇಶ್, ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ, ಡಾ|| ಆರತಿ ಸುಂದರೇಶ್, ಕುಸುಮಾ ಲೋಕೇಶ್, ರೇಖಾ ಪುರಾಣಿಕ್ ಅಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here