ವರದಿ ವಿನೋದ್ ಶೆಟ್ಟಿ ಉಡುಪಿ
ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಸಾವಿರಾರು ವರ್ಷಗಳ ಇತಿಹಾಸವಿರುವ ದೊಡ್ಡಣ ಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಸಾಂಪ್ರದಾಯದ ಪ್ರಕಾರ ಕೊಡಿ ತಿಂಗಳ ಮಂಜದ ಮಾರಿ ಪೂಜೆ ದಿನಾಂಕ 14-12-2025 ಆದಿತ್ಯವಾರದಂದು ಜರದಲಿದೆ. ಮಧ್ಯಾಹ್ನ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಮಾರಿ ಸಮಾರಾಧನೆಯ ಅನ್ನಸಂತರ್ಪಣೆ ಜರಗಲಿರುವುದು ಭಕ್ತಾದಿಗಳು ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.
ರಾತ್ರಿ 9:00ಗೆ ಸರಿಯಾಗಿ ಪಂಚ ಜುಮಾದಿ ದೈವಸ್ಥಾನದಲ್ಲಿ ಮಾರಿ ಯು ಹೊರಟು ದೊಡ್ಡನೆ ಗುಡ್ಡೆ ಗಡುಬಾಡು ಜಾಗದಲ್ಲಿ ಪೂಜಾ ವಿಧಿ ವಿಧಾನದ ಕಾರ್ಯಗಳು ನಡೆಯಲಿದೆ. ಆದರಿಂದ ಗ್ರಾಮದ ಸದ್ಭಕ್ತರು ಈ ಒಂದು ಪುಣ್ಯದ ಕಾರ್ಯದಲ್ಲಿ ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಆಡಳಿತ ಮಂಡಳಿ ಹಾಗೂ ಊರಿನ ಹತ್ತು ಸಮಸ್ತರು. ಬೆಳಿಗ್ಗೆ 9:00ಯಿಂದ ರಾತ್ರಿ 8:00 ವರೆಗೆ ಹಣ್ಣು ಕಾಯಿ ಮಾಡುವ ವ್ಯವಸ್ಥೆ ಮಾಡಲಾಗಿದೆ.

