ವರದಿ ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ತುಳುನಾಡು:- ಧರ್ಮ ಬಂಧು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ, ತುಳು ಅಕಾಡೆಮಿ ಮಂಗಳೂರು, ಮತ್ತು ನಾದ ನೂಪುರ ಯಕ್ಷ ಉತ್ತಾನ ಟ್ರಸ್ಟ್ ವಂಡಾರು ಇವರ ಜಂಟಿ ಸಹಭಾಗಿತ್ವದಲ್ಲಿ ದಿನಾಂಕ 16-12-25 ರಂದು ಸ್ವಸ್ತಿಶ್ರೀ ಭಟ್ಟಾರಕ ಭವನ ಶ್ರೀ ಜೈನ ಮಠ ಮೂಡುಬಿದಿರೆ ಇಲ್ಲಿ ಅಪರಾಹ್ನ ಗಂಟೆ 2.00 ರಿಂದ ತುಳುನಾಡು ನುಡಿಗೆ ಜೈನರ ಕೊಡುಗೆ ಎಂಬ ಉಪನ್ಯಾಸವನ್ನು ಡಾ ಸನ್ಮತಿ ಕುಮಾರ್ ಎಸ್ ಡಿ ಯಂ ಕಾಲೇಜು ಹಾಗೂ ಯಂ ಕೆ ರವೀಂದ್ರ ನಾಥ್ ದತ್ತಿ ಉಪನ್ಯಾಸ ದ ಅಂಗವಾಗಿ ಮಾತನಾಡಲಿದ್ದಾರೆ . ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಪಾವನ ಸಾನಿಧ್ಯ ವಹಿಸಿ ಆಶೀರ್ವಾದ ನೀಡಲಿರುವರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು . ಅಭಯಚಂದ್ರ ಜೈನ್ ಶ್ರೀಮತಿ ಬಿ ವೀಣಾ ರಘು ಚಂದ್ರ ಶೆಟ್ಟಿ, ವಿವೇಕ್ ಆಳ್ವಾ, ವoಡಾರು ಗೋವಿಂದ ಹಾಗೂ ತುಳು ಅಕಾಡೆಮಿ ರಿಜಿಸ್ಟರ್ಪೂ ರ್ಣಿಮಾ , ಉಪಸ್ಥಿತರಿರುವರು ತುಳು ಪ್ರಸಂಗ” ಮಹಾತ್ಮ” ತಾಳ ಮದ್ದಳೆ ಜಿಲ್ಲೆಯ ಪ್ರಸಿದ್ದ ಕಲಾವಿದ ರ ಕೂಡುವಿಕೆ ಯಿಂದ ಜರುಗಲಿದೆ ಎಂದು ಜೈನ ಮಠ ಮೂಲಗಳು ತಿಳಿಸಿವೆ .

