ಶ್ರೀಪಂಚಮುಖಿ ಗಾಯತ್ರಿ ದೇವಿಯ ಪ್ರತಿಷ್ಠಾಪನ ಸಂದರ್ಭ ದೊಡ್ಡಣ್ಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಗಾಯತ್ರಿ ಧ್ಯಾನಪೀಠದಲ್ಲಿ ಧಾರ್ಮಿಕವಾಗಿ ಹಾಗೂ ಹಾಗೂ ಗಣನೀಯ ಸೇವೆ ಸಲ್ಲಿಸಿದವರನ್ನು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅವರು ಗಣ್ಯತಿ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಿದರು.
ಉಡುಪಿಯ ಶ್ರೀ ಕೃಷ್ಣ ಕ್ಯಾಟರ್ಸ್ ನ ಶ್ರೀಧರ್ ಭಟ್ ಅವರನ್ನು ದುರ್ಗಾ ಆದಿಶಕ್ತಿ ಅನುಗ್ರಹ ಪ್ರಶಸ್ತಿ ಯೊಂದಿಗೆ ಪಾಕ ಸಂಘಟನಾ ಚತುರ ಬಿರುದು ಹಾಗೂ ಸಮಾಜ ಸೇವಕ ನಿತ್ಯಾನಂದ ಒಳಕಾಡು ಇವರನ್ನು ಸಮಾಜ ಸೇವಾ ಚಕ್ರವರ್ತಿ ಬಿರುದು ಪರಂಪಳ್ಳಿ ಶ್ರೀ ದುರ್ಗಾ ಶಾಮಿಯಾನದ ಶ್ರೀ ಮಹೇಶ್ ಅವರನ್ನು ಶ್ರೀದೇವಿ ಛಾಯಾಸುತ ಬಿರುದನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀ ಗಣೇಶ್ ಸರಳಾಯ ಅವರನ್ನು ಹಾಗೂ ವೇದಮೂರ್ತಿ ಕಲ್ಯ ಅಶೋಕ್ ಆಚಾರ್ಯ, ವೇದಮೂರ್ತಿ ವಿಕ್ಯಾತ್ ಭಟ್ ಓಕೆಶನ್ ಇವೆಂಟ್ನ ಶ್ರೀ ಸುದೀಪ್ ಕುಮಾರ್
ಅಮ್ಮ ಕಲಾವಿದರು ತಂಡದ ಬಹುಮುಖ ಪ್ರತಿಭೆಯ ಸುಂದರ ರೈ ಮಂದಾರ ದೀಪಕ್ ರೈ ಪಣಾಜೆ, ಮಂಗಲ್ ಪಾಡಿ ಸೋಮನಾಥ ಶೆಟ್ಟಿ, ಹಾಗೂ ಖ್ಯಾತ ಕಾರ್ಯಕ್ರಮ ನಿರೂಪಕ ಶ್ರೀ ಚೇತನ್ ಶೆಟ್ಟಿ ಮಂಗಳೂರು ಹಾಗೂ ಪ್ರಶಾಂತ್ ಶೆಟ್ಟಿ ಉಡುಪಿ, ಮಡಿವಾಳ ಸಂಘದ ಅಧ್ಯಕ್ಷರು ಹಾಗೂ ಯುವ ಯುದ್ದಮಿಯಾದ ಪ್ರದೀಪ್ ಮಡಿವಾಳ ಇವರನ್ನು ಗೌರವಯುತವಾಗಿ ಸನ್ಮಾನಿಸಲಾಯಿತು.
Home Uncategorized ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ “ಗಾಯತ್ರಿ ಧ್ಯಾನಪೀಠದಲ್ಲಿ ಧಾರ್ಮಿಕ ಸೇವೆಗೈದ ಗಣ್ಯರಿಗೆ ಸನ್ಮಾನ”