ವರದಿ ರಾಯಿ ರಾಜ ಕುಮಾರ್
ಬ್ರಹ್ಮಾಂಡ ದಲ್ಲಿರುವುದೆಲ್ಲ ಪಿಂಡಾಂಡದಲ್ಲಿದೆ. ರೋಗ ನಿವಾರಣೆಗೆ ಚಿಕಿತ್ಸಕಬೇಕು. ವೈದ್ಯ ಉಪಚಾರಕ ಸೇವಕ ರೋಗಿ ಎಲ್ಲರೂ ಸಂವಹನ ಮಾಡಿಕೊಂಡರೆ ಮಾತ್ರ ಬದುಕು ಸುಖಮಯ. ದೇಹದ ಪ್ರತಿಯೊಂದು ಜೀವಕೋಶಗಳು ಸೇರಿಕೊಂಡು, ಕೂಡಿಕೊಂಡು, ರಕ್ಷಿಸಿಕೊಂಡು, ಮನಸ್ಸಿಗೂ ದೇಹಕ್ಕೂ ಆಹಾರವನ್ನು ಸ್ವೀಕರಿಸಿ ತೇಜಸ್ಸಿನಿಂದ ಸಹಕಾರಿ ತತ್ವದಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಜೀವಕೋಶಗಳು, ಅಂಗಗಳು ಜಗಳ ಮಾಡಿಕೊಂಡರೆ ಕ್ಯಾನ್ಸರ್ ಇತ್ಯಾದಿ ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ಕಾಕುಂಜೆ ಆಯುರ್ವೇದ ಕ್ಲಿನಿಕ್ ನ ಡಾ ಪ್ರಸನ್ನ ಕಾಕುಂಜೆ ದಿಕ್ಸೂಚಿ ಭಾಷಣ ಗೈದರು.
ಅವರು ಮೂಡುಬಿದಿರೆ ಎಂಸಿಎಸ್ ಸೊಸೈಟಿಯ ಸಹಕಾರಿ ಚಿಂತನ ಸರಣಿಯ 5ನೇ ದಿನದ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಹಕಾರ ವಿಷಯದ ಭಾಷಣಕಾರರಾಗಿದ್ದರು. ಆರೋಗ್ಯ ಇದ್ದರೆ ಮಾತ್ರ ಬದುಕು ಶ್ರೇಯಸ್ಕರ. ನೆಮ್ಮದಿಯ ಆರೋಗ್ಯವನ್ನು ಹೊಂದಿ,
ಒತ್ತಡವನ್ನು ನಿವಾರಿಸಿಕೊಳ್ಳಲು ಖ್ಯಾತಸರ್ಜನ್ ಡಾ ಹರೀಶ್ ನಾಯಕ್ ಕೇಳಿಕೊಂಡರು.
ದ ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡುತ್ತಿರುವ ಎಂಸಿಎಸ್ ಸೊಸೈಟಿಯನ್ನು ಅಭಿನಂದಿಸಿದರು. ಪ್ರೀತಿ, ವಿಶ್ವಾಸ, ಸಹಕಾರದಿಂದ ಬಡವರನ್ನು ಮೇಲೆತ್ತಲು ಎಲ್ಲರ ಸಹಭಾಗಿತ್ವ ಪಡೆದ ಎಂ ಸಿ ಎಸ್ ಸೊಸೈಟಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಮೆಚ್ಚಿಕೊಂಡರು.
ಮೆಡಿಕಲ್ ಕಾಲೇಜು ಡೀನ್ ಡಾ ಕೆ ಮಹಾಬಲೇಶ ಶೆಟ್ಟಿ ಅಧ್ಯಕ್ಷ ಪೀಠದಿಂದ ಮಾತನಾಡಿ ರೋಗಿ ಎಂದು ಕೊರಗದೆ ಸಂತಸದಿಂದ ಬದುಕಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇತರರೊಂದಿಗೆ ಹೋಲಿಸಿಕೊಂಡು ಕೊರಗಬೇಡಿ ಎಂದು ಕೇಳಿಕೊಂಡರು. ಇದೇ ಸಂದರ್ಭದಲ್ಲಿ ಅನನ್ಯ ಸೇವೆ ಸಲ್ಲಿಸಿದ ಸಕ್ರಿಯ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಹಾಜರಿದ್ದರು. ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ಸಾಧನೆಗಳನ್ನು ದಾಖಲಿಸಿದರು. ಚೇತನ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ಜಯರಾಮ್ ಕೋಟ್ಯಾನ್ ವಂದಿಸಿದರು.
Home Uncategorized ಬಡ ಜನರ ಅನುಕೂಲಕ್ಕಾಗಿ ಸಹಕಾರಿ ತತ್ವದಡಿ ಆಸ್ಪತ್ರೆ, ಜನೌಷಧಿ ಕೇಂದ್ರ ಬರಲಿ-ಡಾ ಪ್ರಸನ್ನ ಕಾಕುಂಜೆ

