
ಮೂಡುಬಿದಿರೆ: ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡ ಕಳೆದ ಎಂಟು ವರ್ಷಗಳಿಂದ ಒಂದು ಕೋಟಿಗೂ ಅಧಿಕ ಮೊತ್ತದ ಹಣವನ್ನು ಸಂಗ್ರಹಿಸಿ ಸಮಾಜದ ಆಶಕ್ತರಿಗೆ, ನಿರ್ವಸಿತರಿಗೆ, ವಿದ್ಯಾರ್ಥಿಗಳಿಗೆ ಆರೋಗ್ಯ ಪಿಡಿತರಿಗೆ ಸಹಾಯ ಹಸ್ತ ನೀಡುತ್ತಿದೆ. ಸಮಾಜದ ಸಹಕಾರವಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಉದ್ದೇಶ ತಂಡಕ್ಕಿದೆ ಎಂದು ಸಂಘಟನೆಯ ಸಂಸ್ಥಾಪಕ ಸುನಿಲ್ ಮೆಂಡೋನ್ಸ ತಿಳಿಸಿದರು.
ಅನಾರೋಗ್ಯವಿದ್ದರೂ ಟೈಲರಿಂಗ್ ವೃತ್ತಿ ಮಾಡಿಕೊಂಡು, ತಾಕೋಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಲಾರೆನ್ಸ್ ಫೆಬಿಯೋಲಾ ಮೆಂಡೋನ್ಸಾ ಅವರಿಗೆ ಹಲವಾರು ದಾನಿಗಳ ನೆರವಿನಿಂದ ಸ್ವಂತ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಸಬೆಟ್ಟು ಚರ್ಚಿನ ಧರ್ಮಗುರು ಗ್ರೇಗರಿ ಡಿಸೋಜ, ತಾಕೋಡೆ ಚರ್ಚಿನ ಧರ್ಮ ಗುರು ರೋಹನ್ ಲೋಬೋ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮನುಷ್ಯತ್ವವೇ ಮಾನವ ಧರ್ಮ ಎಂಬ ಧ್ಯೇಯ ವಾಕ್ಯ ಈ ತಂಡದಾಗಿದೆ.
ಹುಮ್ಯಾನಿಟಿ ಸಂಸ್ಥೆಯ ಸಂಸ್ಥಾಪಕ ರೋಷನ್ ಬೆಳ್ಮಣ್, ಸ್ಪೂರ್ತಿ ಬಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್, ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಆಲ್ವಿನ್ ರೋಡ್ರಿಗಸ್, ವಕೀಲ ನಾಗೇಶ್ ಶೆಟ್ಟಿ ಮತ್ತಿತರರಿದ್ದರು. ತಂಡದ ಕಾರ್ಯದರ್ಶಿ ಲೆತ್ತಿಶಿಯ ಗೊಮ್ಸ್ ಲೆಕ್ಕಪತ್ರ ಮಂಡಿಸಿದರು.
ವರದಿ: ಜಗದೀಶ್ ಪೂಜಾರಿ ಕಡಂದಲೆ