ಅಳದಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ bc ಟ್ರಸ್ಟ್ ಗುರುವಾಯನಕೆರೆ ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಮಾನ್ಯ ಅಳದಂಗಡಿ ಅರಮನೆಯ ಅರಸರಾದ ತಿಮ್ಮಣ್ಣರಸರಾದ ಡಾಕ್ಟರ್ ಪದ್ಮಪ್ರಸಾದ್ ಅಜಿಲರು ಸಸಿ ಮಡಿ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಛೇರಿ ಕೃಷಿ ವಿಭಾಗದ ಯೋಜನಾಧಿಕಾರಿಗಳು ಬಾಲಕೃಷ್ಣ, ಗುರುವಾಯನಕೆರೆ ಯೋಜನಾಧಿಕಾರಿಗಳು ಅಶೋಕ್ ಕೃಷಿ ಮೇಲ್ವಿಚಾರಕರು,ಕೃಷ್ಣ ವಲಯದ ಮೇಲ್ವಿಚಾರಕರು ಶ್ರೀಮತಿ ಯಶೋಧ, ಕೃಷಿ ಯಂತ್ರ ಧಾರೆ ಮೆನೇಜರ್ ಸಂತೋಷ ಕುಮಾರ A ಮತ್ತು B ಒಕ್ಕೂಟದ ಅಧ್ಯಕ್ಷರುಗಳಾದ ಹರೀಶ್ ಸಾಲಿಯಾನ್, ನಿನ್ನಿಕಲ್ಲು, ಕೃಷ್ಣಪ್ಪ ಪೂಜಾರಿ, ಬಿಕ್ಕಿರ, ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಮಂಜುನಾಥ ಆಚಾರ್ಯ, ಹರೀಶ್ ಆಚಾರ್ಯ, ಮಿತ್ತರೋಡಿ ಮತ್ತು ಪದಾಧಿಕಾರಿಗಳು, B ಒಕ್ಕೂಟದ ಸೇವಾಪ್ರತಿನಿಧಿ ಪೂರ್ಣಿಮಾ ಪ್ರಮೋದ್, ಯಂತ್ರ ಚಾಲಕರು ಪ್ರಜೆಶ, ಧರಣಪ್ಪ ಊರಿನ ರೈತರು ಗಣ್ಯರು ಉಪಸ್ಥಿತರಿದ್ದರು.