ಶೌರ್ಯ ವಿಪತ್ತು ನಿರ್ವಹಣಾ ತಂಡ ಕಲ್ಲಡ್ಕ ಹಾಗೂ ಭೀಮ್ ಸಂಜೀವಿನಿ ಬೋಳಂತೂರು ಇವುಗಳ ಜಂಟಿ ಆಶ್ರಯದಲ್ಲಿ ಮನೆ ದುರಸ್ತಿ ಶ್ರಮದಾನ

0
20

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಭೀಮ್ ಸಂಜೀವಿನಿ ಬೋಳಂತೂರು
ಇದರ ಜಂಟಿ ಆಶ್ರಯದಲ್ಲಿ ಬೋಳಂತೂರು ಗ್ರಾಮದ ಕೊಕ್ಕಪುಣಿ ಸೇಸಪ್ಪ ನಾಯ್ಕರ ಮನೆ ದುರಸ್ತಿ ಶ್ರಮದಾನ ಕಾರ್ಯಕ್ರಮವು ರವಿವಾರ ಜರಗಿತು.

ಸೇಸಪ್ಪ ನಾಯ್ಕ ಹಾಗೂ ಅವರ ಪತ್ನಿ ಇಬ್ಬರೇ ವೃದ್ಧ ದಂಪತಿಗಳು ಸದರಿ ಮನೆಯಲ್ಲಿ ವಾಸಿಸುತ್ತಿದ್ದು ತೀರಾ ದುಸ್ಥಿಯಲ್ಲಿ ಮನೆ ಇದ್ದು ಮನೆಯಲ್ಲಿ ವಾಸವಿರುದೆ ಕಷ್ಟವಾಗಿತ್ತು. ಈ ವಿಷಯವನ್ನು ಭೀಮ್ ಸಂಜೀವಿನಿ ಬೋಳಂತೂರುನವರು ಕಲ್ಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಗಮನಕ್ಕೆ ತಂದಾಗ ಕೂಡಲೆ ಭೀಮ್ ಸಂಜೀವಿನಿ ಬೋಳಂತೂರು ಸದಸ್ಯರನ್ನು ಜೊತೆಗೂಡಿಸಿಗೊಂಡು ಮನೆ ರಿಪೇರಿ ಕಾರ್ಯಕ್ಕೆ ಮುಂದಾದರು .

ಶ್ರಮದಾನ ನಡೆಯುವ ಸ್ಥಳಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಟ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ, ಕಲ್ಲಡ್ಕ ವಲಯ ಮೇಲ್ವಿಚಾರಕ ಸುಕರಾಜ್ , ಬೋಳಂತೂರು ಒಕ್ಕೂಟ ಸೇವಾ ಪ್ರತಿನಿಧಿ ಲೀಲಾವತಿ ಭೇಟಿ ನೀಡಿ ಶ್ರಮದಾನಕ್ಕೆ ಪ್ರೋತ್ಸಾಹ ನೀಡಿ, ಮನೆಯ ಪರಿಸ್ಥಿತಿ ಕಂಡು ಇನ್ನು ಮುಂದಕ್ಕೆ ಇವರಿಗೆ ಶೌಚಾಲಯ ಹಾಗೂ ಬಚ್ಚಲು ಮನೆ ಸಮಸ್ಯೆ ಇದ್ದು ಆದಷ್ಟು ಬೇಗ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದೊರಕಿಸಿ ಕೊಡುವುದಾಗಿ ತಿಳಿಸಿದರು.

ಈ ಶ್ರಮದಾನ ಕಾರ್ಯದಲ್ಲಿ ಭೀಮ್ ಸಂಜೀವಿನಿ ಬೋಳಂತೂರು ಇದರ ಶ್ರೀನಿವಾಸ ಬಂಗಾರುಕೋಡಿ, ಹರೀಶ್ ವಿ ಮಾಸ್ತರ್, ಸದಾನಂದ ಬಿ.ಆರ್. ನಗರ, ಮಹೇಶ್ ಕಲ್ಪನೆ , ಕೃಷ್ಣಪ್ಪ ಕಲ್ಪನೆ, ಸುಭಾಶ್ಚಂದ್ರ ಕೊಕ್ಕಪುಣಿ, ಹರಿಶ್ವಂದ್ರ ಕಲ್ಪನೆ, ರವೀಂದ್ರ ಕಲ್ಪನೆ, ಕುದೀಸ್ ದಾಸಮದಕ, ಸೋಮಶೇಖರ ಬಿ.ಆರ್.ನಗರ , ಶುಭರಾಜ್ ಕಲ್ಪನೆ, ಮನೋಹರ ದಾಸಮದಕ, ಸೋಮನಾಥ ಬಿ.ಆರ್.ನಗರ, ಗಗನ್ ದಾಸಮದಕ, ಕೀರ್ತನ್ ದಾಸಮದಕ, ಮಹೇಶ್ ಕೊಕ್ಕಪುಣಿ, ವಿಶ್ವನಾಥ ಕೊಕ್ಕಪುಣಿ, ನವೀನ್ ಕೊಕ್ಕಪುಣಿ ರವಿ, ಕಲ್ಲಡ್ಕ ಶೌರ್ಯ ತಂಡದ ಕಟಕ ಪ್ರತಿನಿಧಿ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ಸಂಯೋಜಕ ವಿದ್ಯಾ, ಸದಸ್ಯರುಗಳಾದ ಗಣೇಶ್ ನಾಯ್ಕ, ರಮೇಶ್ ಕುದ್ರೆಬೆಟ್ಟು, ಸತೀಶ್ ಕುದ್ರೆಬೆಟ್ಟು,ಸಂತೋಷ್ ಬೊಲ್ಪೊಡಿ, ಗೀತಾ ಕೊಳಕೀರು,ಸೌಮ್ಯ ಬೊಂಡಲಾ, ರವಿಚಂದ್ರ ಬಪ್ಪನ್ ತೋಟ,ವೆಂಕಪ್ಪ, ಧನಂಜಯ, ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಶ್ರಮದಾನ ಕಾರ್ಯಕ್ರಮಕ್ಕೆ ಅಂಬಿಕಾ ಗೆಳೆಯರ ಕಲ್ಪನೆ ಹಾಗೂ. ಬ್ಯಾಂಕ್ ಆಫ್ ಬರೋಡಾ ಪೆರ್ನೆಯ ಧನಲಕ್ಷಿ ಸಹಕರಿಸಿದರು.

LEAVE A REPLY

Please enter your comment!
Please enter your name here