‘ಕರ್ಣಾವಸಾನ’ ತಾಳಮದ್ದಳೆ , ಯಕ್ಷ ಪ್ರಶಸ್ತಿ ಪ್ರದಾನ ಹಾಗೂ ‘ಪಂಜರ ಪಕ್ಷಿ’ ಯಕ್ಷಗಾನ ಗಳ ತ್ರಿವೇಣಿ ಸಂಗಮ!
ಮೂಡುಬಿದಿರೆ : ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಸಂಸ್ಥೆ ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ (ರಿ.) ತನ್ನ 29ನೇ ವರ್ಷದ “ಯಕ್ಷ ಸಂಭ್ರಮ-2026” ಅನ್ನು ಜುಲೈ 17, 2026ರ ಶುಕ್ರವಾರದಂದು ಮೂಡುಬಿದಿರೆಯ ರಿಂಗ್ ರೋಡ್‌ನಲ್ಲಿರುವ ‘ಪ್ರೀತಮ್ ಗಾರ್ಡನ್ ಸಭಾಂಗಣದ,ಕಲಾವಿದ ಮಿಜಾರು ದಿ. ಕೆ. ಸುಬ್ರಾಯ ಭಟ್ ಕಲಾ ವೇದಿಕೆಯಲ್ಲಿ ಅದ್ಧೂರಿಯಾಗಿ ಆಯೋಜಿಸಿದೆ.
ಯಕ್ಷಗಾನ ತಾಳಮದ್ದಲೆ
ಮಧ್ಯಾಹ್ನ 2:00 ರಿಂದ ನಂದಳಿಕೆ ಕಾರ್ಕಳ ತಾಲೂಕಿನ ವಿಶಾಲ ಯಕ್ಷಕಲಾ ಬಳಗದಿಂದ ಸುಪ್ರಸಿದ್ಧ ‘ಕರ್ಣಾವಸಾನ’ ತಾಳಮದ್ದಲೆ ನೆರವೇರಲಿದೆ.
ಸಭಾ ಕಾರ್ಯಕ್ರಮ
ಸಂಜೆ 4:30 ರಿಂದ ಇದೇ ವೇಳೆ ಶ್ರೀ ವನಜಾಕ್ಷಿ ಅಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶೇಷ ಸನ್ಮಾನ ಹಾಗೂ ಕಲಾರಂಗದ ಸಾಧಕರಿಗೆ ಅತ್ಯುನ್ನತ ‘ಶ್ರೀ ಯಕ್ಷ ದೇವ ಪ್ರಶಸ್ತಿ-2026’ ನೀಡಿ ಗೌರವಿಸಲಾಗುವುದು.
ಯಕ್ಷಗಾನ ಪ್ರದರ್ಶನ
ಸಂಜೆ 6:00 ರಿಂದ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಜನಪ್ರಿಯ ಯಕ್ಷಗಾನ ಪ್ರಸಂಗ ‘ಪಂಜರ ಪಕ್ಷಿ’ ಅದ್ಭುತವಾಗಿ ಪ್ರದರ್ಶನಗೊಳ್ಳಲಿದೆ.
ಕಲಾಭಿಮಾನಿಗಳಿಗೆ ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲು ಮಂಡಳಿಯು ಆಮಂತ್ರಣ ಪತ್ರದ ಪ್ರಕಟಣೆಯಲ್ಲಿ ಆದರದ ಸ್ವಾಗತ ಕೋರಿದೆ.
ವರದಿ -ಮಂದಾರ ರಾಜೇಶ್

