3 ಬ್ರದರ್ಸ್ ಕನ್ನಡ ಅರ್ಪಿಸುವ ಹುಡುಗಿ ಸಿಕ್ತಿಲ್ಲ ಎಂಬ ಕನ್ನಡ ರಾಪ್ ಆಲ್ಬಮ್ ಸಾಂಗ್ ಜು. 7ರಂದು ಸಂಜೆ 6-00 ಗಂಟೆಗೆ `3 ಬ್ರದರ್ಸ್ ಕನ್ನಡ ಯುಟ್ಯೂಬ್ ಚಾನೆಲ್`ನಲ್ಲಿ ಬಿಡುಗಡೆಯಾಗಲಿದೆ.
3 ಬ್ರದರ್ಸ್ ಕನ್ನಡ ನಿರ್ಮಾಣದ ಈ ಆಲ್ಬಮ್ ಸಾಂಗ್ ನ್ನು ಚೇತನ್ ರೈ ಅವರು ನಿರ್ದೇಶಿಸಿ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ.
ಜೋಯ್ ಸ್ಟೇಲರ್ ಅವರು ಸಂಗೀತ ನಿರ್ಮಾಣ ಮಾಡಿದ್ದಾರೆ. ಸಾತ್ವಿಕ್ ರೈ ನೃತ್ಯ ಸಂಯೋಜನೆ ಮಾಡಿದ್ದಾರೆ. ಗಾಯಕರಾಗಿ ಚೇತನ್ ರೈ, ಪವನ್ ರೈ ಹಾಗೂ ಶಶಿಕುಮಾರ್ ರೈ ಸಹಕರಿಸಿದ್ದಾರೆ. ಸಮೃದ್ದ್ ರೈ, ಸುಧೀಂದ್ರ, ಸಾತ್ವಿಕ್ ರೈ ನಟಿಸಿದ್ದು, ರಂಜನ ಇಂದಾಜೆ ಛಾಯಾಗ್ರಹಣ ಮಾಡಿದ್ದಾರೆ.
ಎಡಿಟರ್ ಆಗಿ ಚರಣ್ ಹಾಗೂ ಸಹ ಎಡಿಟರ್ ಆಗಿ ಶ್ರೇಯಸ್ ಸಹಕರಿಸಿದ್ದಾರೆ. ಟ್ಯಾಬ್ ಸ್ಟುಡಿಯೋ ಬೆದ್ರ ಇದರ ಸಂತೋಷ್ ಪುಚ್ಚೇರ್ ಅವರು ಪೋಸ್ಟರ್ ಡಿಸೈನ್ ಮಾಡಿದ್ದಾರೆ.