ನೊಯ್ಡಾದ ಸೆಕ್ಟರ್ 105 ರಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಬೃಹತ್ ಪೋರ್ನ್ ರಾಕೆಟ್ ನಡೆಸುತ್ತಿದ್ದ ದಂಪತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಉಜ್ವಲ್ ಕಿಶೋರ್ ಮತ್ತು ನೀಲು ಶ್ರೀವಾಸ್ತವ್ ಎಂಬುವರೇ ಈ ರಾಕೆಟ್‌ನ ಕಿಂಗ್‌ಪಿನ್ ಗಳು. ಈ ದಂಪತಿಗಳು ಮಾಡೆಲಿಂಗ್ ಅವಕಾಶಗಳ ಆಮಿಷವೊಡ್ಡಿ ನೂರಾರು ಮಹಿಳೆಯರನ್ನು ವಂಚಿಸಿ, ಅವರ ಪೋರ್ನ್ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು.
ಈ ವಿಡಿಯೋಗಳನ್ನು ಸೈಪ್ರಸ್ ಮೂಲದ ಟೆಕ್ನಿಯಸ್ ಲಿಮಿಟೆಡ್ ಎಂಬ ಕಂಪನಿಗೆ ಮಾರಾಟ ಮಾಡಲಾಗುತ್ತಿತ್ತು. ಸ್ಟ್ರಿಪ್‌ಚಾಟ್ ಮತ್ತು ಎಕ್ಸ್‌ಹ್ಯಾಮ್‌ಸ್ಟರ್‌ನಂತಹ ಪೋರ್ನ್ ವೆಬ್‌ಸೈಟ್‌ಗಳನ್ನು ಈ ಕಂಪನಿ ನಡೆಸುತ್ತಿದೆ. ಕಳೆದ ಐದು ವರ್ಷಗಳಿಂದ ಈ ರಾಕೆಟ್ ಕಾರ್ಯನಿರ್ವಹಿಸುತ್ತಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ದಾಳಿ ನಡೆದ ಸಮಯದಲ್ಲಿ, ಸ್ಥಳದಲ್ಲಿ ಮೂವರು ಮಾಡೆಲ್‌ಗಳು ಪೋರ್ನ್ ವಿಷಯವನ್ನು ಚಿತ್ರೀಕರಿಸುತ್ತಿದ್ದರು.
ಈ ಕಾರ್ಯಾಚರಣೆಯಲ್ಲಿ 400 ಕ್ಕೂ ಹೆಚ್ಚು ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೂಲಕ ದೆಹಲಿ-ಎನ್‌ಸಿಆರ್‌ನಿಂದ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಚಿತ್ರೀಕರಿಸಿದ ವಿಡಿಯೋಗಳನ್ನು “ಹಾಫ್ ಫೇಸ್ ಶೋ”, “ಫುಲ್ ಫೇಸ್ ಶೋ” ಮತ್ತು “ನ್ಯೂಡ್” ಎಂದು ವರ್ಗೀಕರಿಸಲಾಗಿತ್ತು. ಉಜ್ವಲ್ ಕಿಶೋರ್ ರಷ್ಯಾ ಮೂಲದ ಸೆಕ್ಸ್ ಸಿಂಡಿಕೇಟ್‌ನಲ್ಲಿ ಭಾಗಿಯಾಗಿದ್ದನು ಮತ್ತು ಅಲ್ಲಿಂದಲೇ ಈ ಜಾಲವನ್ನು ವಿಸ್ತರಿಸಲು ಸಹಾಯ ಮಾಡಿದ್ದನು ಎಂದು ವರದಿಯಾಗಿದೆ.
ಈ ದಂಪತಿಗಳು ಸಬ್‌ಡಿಜಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಈ ರಾಕೆಟ್ ನಡೆಸುತ್ತಿದ್ದರು. ಜಾಹೀರಾತು, ಮಾರುಕಟ್ಟೆ ಸಂಶೋಧನೆ ಮತ್ತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆ ಸೇವೆಗಳ ನೆಪದಲ್ಲಿ ವಿದೇಶಿ ರವಾನೆಗಳನ್ನು ನಿಯಮಿತವಾಗಿ ಸ್ವೀಕರಿಸಲಾಗುತ್ತಿತ್ತು ಎಂದು ಇಡಿ ಹೇಳಿದೆ. ಆದರೆ, ಈ ಹಣ “ಎಕ್ಸ್‌ಹ್ಯಾಮ್‌ಸ್ಟರ್‌ನಲ್ಲಿ ಸ್ಟ್ರೀಮ್ ಮಾಡಿದ ವಯಸ್ಕರ ವಿಷಯದಿಂದ ಬಂದಿದೆ” ಎಂದು ಏಜೆನ್ಸಿ ಹೇಳಿದೆ. ದಾಳಿಯ ಸಮಯದಲ್ಲಿ, ವಯಸ್ಕರ ವಿಷಯವನ್ನು ಸ್ಟ್ರೀಮ್ ಮಾಡಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಸ್ಟುಡಿಯೋ ಸೆಟಪ್ ಅನ್ನು ಇಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾಡೆಲ್ ಗಳನ್ನು ನೇಮಿಸಿಕೊಳ್ಳುತ್ತಿದ್ದರು ಎಂದು ಏಜೆನ್ಸಿ ಹೇಳಿದೆ. ಕಂಪನಿಯ ಮತ್ತು ಅದರ ನಿರ್ದೇಶಕರ ಬ್ಯಾಂಕ್ ಖಾತೆಗಳಲ್ಲಿ 15.6 ಕೋಟಿ ರೂಪಾಯಿಗೂ ಹೆಚ್ಚು ಕಾನೂನುಬಾಹಿರ ರವಾನೆಗಳನ್ನು ಸ್ವೀಕರಿಸಲಾಗಿದೆ ಎಂದು ಗುರುತಿಸಲಾಗಿದೆ. ಇದರ ಜೊತೆಗೆ, ನೆದರ್‌ಲ್ಯಾಂಡ್‌ನಲ್ಲಿ ಬಹಿರಂಗಪಡಿಸದ ಬ್ಯಾಂಕ್ ಖಾತೆಯನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿ ಟೆಕ್ನಿಯಸ್ ಲಿಮಿಟೆಡ್‌ನಿಂದ ಸುಮಾರು 7 ಕೋಟಿ ರೂಪಾಯಿ ವರ್ಗಾವಣೆಯಾಗಿದೆ. ಈ ದಂಪತಿಗಳು ಗಳಿಕೆಯ ಸುಮಾರು 75% ಅನ್ನು ಉಳಿಸಿಕೊಂಡು, ಮಾಡೆಲ್ ಗಳಿಗೆ ಕೇವಲ ಒಂದು ಭಾಗವನ್ನು ಮಾತ್ರ ನೀಡುತ್ತಿದ್ದರು. ದಾಳಿಯ ಸಮಯದಲ್ಲಿ 8 ಲಕ್ಷ ರೂಪಾಯಿ ನಗದು ಮತ್ತು ದಂಪತಿಗಳ ವಿರುದ್ಧ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.