ಧರ್ಮಸ್ಥಳ ಯೋಜನೆಯಿಂದ ಮಾನವೀಯ ಸ್ಪಂದನೆ: ಕಾಮೋಡ್ ಕುರ್ಚಿ ವಿತರಣೆ ಕಾರ್ಯಕ್ರಮ

0
230

ಓಂ ಶ್ರೀ ಮಂಜುನಾಥಯ ನಮಃ ಪರಮ ಪೂಜ್ಯ ಖಾವಂದರು ಹಾಗೂ ಮಾತೃ ಶ್ರೀ ಅಮ್ಮ ನವರ ಆಶೀರ್ವಾದದೊಂದಿಗೆ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ (ರಿ) ಮಂಗಳೂರು ತಾಲೂಕು ವತಿಯಿಂದ ಸೋಮೇಶ್ವರ ವಲಯದ ಕುಂಪಲ ಕಾರ್ಯಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 1 ರ ನಿರ್ದೇಶಕರಾದ ದಿನೇಶ್.ಡಿ ಸರ್ ಅವರು ಕುಸುಮರವರ ಪತಿಯಾದ ಭರತ್ ಇವರಿಗೆ ಕಾಮೋಡ್ ಕುರ್ಚಿಯನ್ನು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಮಂಗಳೂರು ತಾಲೂಕಿನ ಯೋಜನಾಧಿಕಾರಿಯಾದ ಸುರೇಂದ್ರ ಸರ್ ಹಾಗೂ ಮಂಗಳೂರು ತಾಲೂಕಿನ ಪ್ರಗತಿ ಬಂದು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದಂತಹ ಸತೀಶ್ ದೀಪಂ ,ಸೋಮೇಶ್ವರ ವಲಯದ ಮೇಲ್ವಿಚಾರಕರು ಮೋಹನ್,ಕೇಸರಿ ಮಿತ್ರವೃಂದ ಸೇವಾ ಟ್ರಸ್ಟ್ (ರಿ) ಕುಂಪಲ ಇದರ ಟ್ರಸ್ಟಿಗಳಾದ ನಾರಾಯಣ ಕುಂಪಲ
ಅಧ್ಯಕ್ಷರಾದ ಸುಧಾಕರ್, ಮಾತೃ ಮಂಡಳಿಯ ಅಧ್ಯಕ್ಷರಾದ ದಿವ್ಯ ರಾಕೇಶ್, ಆಶಾ ಸುರೇಶ್, ಕೋಶಾಧಿಕಾರಿ ಧನಲಕ್ಷ್ಮಿ ಗಟ್ಟಿ, ಜಯಲಕ್ಷ್ಮಿ ಪ್ರೇಮ್ ಮತ್ತು ಸ್ಥಳೀಯ ಸೇವಾಪ್ರತಿನಿಧಿ ಆದ ಸುಶೀಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here