ಪತ್ನಿ ಕೊಂದು ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿದ್ದ ಪತಿ

0
1283

ಮೊರಾದಾಬಾದ್: ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ  ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ. ನಂತರ ಕೊಡಲಿಯಿಂದ ತಲೆ ಕಡಿದು ದೇಹವನ್ನು ಮನೆಯಲ್ಲಿಯೇ ಹೂತುಹಾಕಿದ್ದ.

ಕುಟುಂಬದ ದೂರಿನ ಮೇರೆಗೆ ಪೊಲೀಸರು ಕಠಿಣ ಕ್ರಮ ಕೈಗೊಂಡ ನಂತರ, ವ್ಯಕ್ತಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಲಾದ ವಸ್ತುಗಳು, ಮಹಿಳೆಯ ತಲೆಯನ್ನು ನದಿಯಿಂದ ಮತ್ತು ಮನೆಯಲ್ಲಿ ಹೂತಿಟ್ಟಿದ್ದ ಮುಂಡವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೊಲೆಗಾರ ಪತಿಯನ್ನು ಜೈಲಿಗೆ ಕಳುಹಿಸಲಾಗಿದೆ.

ಈ ಪ್ರಕರಣ ಮಜೋಲಾ ಪೊಲೀಸ್ ಠಾಣೆಯ ಟಿಪಿ ನಗರದಲ್ಲಿ ನಡೆದಿದೆ.ವ್ಯಕ್ತಿ ಶೇನ್ ಆಲಂ ಅಲಿಯಾಸ್ ರೆಹಾನ್ ಮೊದಲು ತನ್ನ ಪತ್ನಿ ತಬಸ್ಸುಮ್‌ಳನ್ನು ಇರಿದು, ನಂತರ ಇಟ್ಟಿಗೆಯಿಂದ ಜಜ್ಜಿ ಕೊಂದಿದ್ದಾನೆ. ಶೇನ್ ಆಲಂ ತನ್ನ ಪತ್ನಿ ತಬಸ್ಸುಮ್ ಅವರ ಶಿರಚ್ಛೇದ ಮಾಡಿ ನದಿಗೆ ಎಸೆದಿದ್ದಾನೆ. ಯಾರಿಗೂ ಏನೂ ತಿಳಿಯದಂತೆ ಶೇನ್ ಮನೆಯೊಳಗೆ ಗುಂಡಿ ತೋಡಿ ತಬಸ್ಸಮ್‌ನ ದೇಹವನ್ನು ಹೂತುಹಾಕಿದ್ದ ಮಮತ್ತು ಕುಟುಂಬದ ದಾರಿ ತಪ್ಪಿಸಲು ಪ್ರಯತ್ನಿಸಿದ್ದ.

ತಬಸ್ಸುಮ್ ಅವರ ತಾಯಿ ಮಜೋಲಾ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು. ಅವರ ಮಗಳು ಶೇನ್ ಆಲಂ ಅಲಿಯಾಸ್ ರೆಹಾನ್ ಅವರನ್ನು ಮದುವೆಯಾಗಿದ್ದಾಳೆಂದು ಹೇಳಲಾಗಿತ್ತು. ಇದು ಅವರಿಬ್ಬರಿಗೂ ಎರಡನೇ ವಿವಾಹವಾಗಿತ್ತು. ತಬಸ್ಸುಮ್ ಅವರ ಹೆಸರಿನಲ್ಲಿ ಅವರ ಮೊದಲ ಪತಿ ಕೊಟ್ಟಿದ್ದ ಮನೆ ಇದೆ, ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಆದರೆ ಆಕೆಯ ಪತಿ ರೆಹಾನ್ ಆ ಮನೆಯನ್ನು ಮಾರಾಟ ಮಾಡಲು ಬಯಸಿದ್ದ , ಇದೇ ವಿವಾದಕ್ಕೆ ಕಾರಣ. ಆದರೆ ಅವರ ಮಗಳು ಹಲವು ದಿನಗಳಿಂದ ಕಾಣೆಯಾಗಿದ್ದಾಳೆ.ಆದರೆ ಆಕೆಯ ಪತಿ ಆಕೆಯ ಬಗ್ಗೆ ಏನೂ ಮಾತನಾಡುತ್ತಿರಲಿಲ್ಲ ಎಂದು ಮಾಹಿತಿ ನೀಡಿದ್ದರು.

ಎಸ್‌ಪಿ ರಣವಿಜಯ್ ಸಿಂಗ್ ಮಾತನಾಡಿ ಇದೇ ಏಪ್ರಿಲ್ 18 ರಂದು, ಮಹಿಳೆಯೊಬ್ಬರು ಮಜೋಲಾ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದ್ದರು, ಅವರ ಮಗಳು ಜನ್ನತ್ ಬಾಗ್‌ನಿಂದ 12 ರಿಂದ ಕಾಣೆಯಾಗಿದ್ದಾಳೆ ಮತ್ತು ಆಕೆಗೆ ಮದುವೆಯಾಗಿತ್ತು.

ಸುಮಾರು ಒಂದು ತಿಂಗಳ ಹಿಂದೆ ಘಟನೆ ನಡೆದಿತ್ತು. ಅವನ ಮಾಹಿತಿಯ ಆಧಾರದ ಮೇಲೆ, ಕಾಣೆಯಾದ ಮಹಿಳೆಯ ಶವವನ್ನು ಅವನ ಮನೆಯಿಂದ ಮತ್ತು ಆಕೆಯ ತಲೆಯನ್ನು ಹತ್ತಿರದ ನದಿಯಿಂದ ವಶಪಡಿಸಿಕೊಳ್ಳಲಾಯಿತು. ಕೊಲೆಗೆ ಬಳಸಲಾದ ಕೊಡಲಿ ಪತ್ತೆಯಾಗಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here