ಹೈದರಾಬಾದ್ : ದೇವಸ್ಥಾನದಲ್ಲಿ ಅವಾಚ್ಯ ಕೃತ್ಯ – ಬೀದರ್ ಮೂಲದ ಯುವಕ ಬಂಧನ

0
79

ಬೀದರ್ : ಹೈದರಾಬಾದ್‌ನ ಕಟ್ಟಾ ಮೈಸಮ್ಮ ದೇವಸ್ಥಾನದಲ್ಲಿ ಬೀದರ್ ಮೂಲದ ಯುವಕನೊಬ್ಬ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದ್ದು, ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಹೌದು ಕರ್ನಾಟಕದ ಬೀದರ್‌ ಮೂಲದ 26 ವರ್ಷದ ವ್ಯಕ್ತಿಯೊಬ್ಬ ಹೈದರಾಬಾದ್‌ನ ಕಟ್ಟಾ ಮೈಸಮ್ಮ ದೇವಸ್ಥಾನ ಪ್ರವೇಶಿಸಿ ಆವರಣದಲ್ಲೇ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.ಈ ಸಂಬಂಧ ಆತನನ್ನು ಭಕ್ತರು ಥಳಿಸಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ.

ಸಫಿಲ್ಗುಡದಲ್ಲಿರುವ ಕಟ್ಟಾ ಮೈಸಮ್ಮ ದೇವಸ್ಥಾನವನ್ನು ಅಕ್ರಮವಾಗಿ ಪ್ರವೇಶಿಸಿದ 26 ವರ್ಷದ ಅಲ್ತಾಫ್‌ ಈ ಕೃತ ಎಸಗಿದಾತ. ಆತ ಮೂತ್ರ ವಿಸರ್ಜನೆ ಮಾಡುತ್ತಿದ್ದನ್ನು ಗಮನಿಸಿದ ಕೆಲವರು ಆತನನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ ಆಕ್ರೋಶಗೊಂಡು ಥಳಿಸಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಬಂಧಿಸಿದ್ದು, ಬಿಎನ್‌ಎಸ್‌ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here