ಭಾರತೀಯ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ (ಐಸಿಎಐ) ಉಡುಪಿ ಶಾಖೆ (SIRC) ವತಿಯಿಂದ ಗೃಹಿಣಿಯರಿಗಾಗಿ ಹಣಕಾಸು ಮತ್ತು ತೆರಿಗೆ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಗೃಹಿಣಿಯರಿಗೆ ನಿತ್ಯದ ಹಣಕಾಸು ನಿರ್ವಹಣೆ, ಉಳಿತಾಯದ ಪ್ರಾಯೋಗಿಕ ವಿಧಾನಗಳು, ತೆರಿಗೆ ಕುರಿತ ಮೂಲಭೂತ ಮಾಹಿತಿ ಮತ್ತು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಸಕ್ರಿಯ ಪಾತ್ರವಹಿಸಲು ಅಗತ್ಯವಾದ ಅರಿವು ನೀಡುವ ಉದ್ದೇಶದಿಂದ ದಿನಾಂಕ: 21 ಜೂನ್ 2025 ಸಮಯ: ಸಂಜೆ 4.00 ರಿಂದ 6.00 ಗಂಟೆಯವರೆಗೆ ಪಂಡುರಂಗ ಭಜನಾ ಮಂದಿರ, ಕೆಮುಂಡೆಲು, ಅಡ್ಮಾರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಿ.ಎ. ಗುಜ್ಜಡಿ ಪ್ರಭಾಕರ ನರಸಿಂಹ ನಾಯಕ್, ಐಸಿಎಐ ಉಡುಪಿ ಶಾಖೆಯ ಪೂರ್ವ ಅಧ್ಯಕ್ಷರು ಮುಖ್ಯ ಭಾಷಣ ನೀಡಲಿದ್ದಾರೆ. ಅವರು ಗೃಹಿಣಿಯರಿಗೆ ನಿತ್ಯದ ಹಣಕಾಸು ನಿರ್ವಹಣೆ ಮತ್ತು ತೆರಿಗೆ ಸಂಬಂಧಿತ ವಿಷಯಗಳಲ್ಲಿ ಉಪಯುಕ್ತ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಉಡುಪಿ ಜಿಲ್ಲೆಯ ಎಲ್ಲಾ ಗೃಹಿಣಿಯರು ಈ ಉಪಯುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಪ್ರಯೋಜನ ಪಡೆಯುವಂತೆ ಐಸಿಎಐ ಉಡುಪಿ ಶಾಖೆಯ ಚೇರ್ ಪರ್ಸನ್ ಸಿ.ಎ. ಅರ್ಚನಾ ಆರ್ ಮೈಯಾ ಅವರು ಹಾರ್ದಿಕವಾಗಿ ಆಹ್ವಾನಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676178061