ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಳ್ಮಾರು ಆವರಣದಲ್ಲಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ (CSR) ಯೋಜನೆಯಡಿ ನಿರ್ಮಿಸಲಾದ ಇಂಟರ್‌ಲಾಕ್ ಅಳವಡಿಕೆಯ ಉದ್ಘಾಟನಾ ಸಮಾರಂಭ

0
17

ಬೆಳ್ಮಾರು : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬೆಳ್ಮಾರು ಆವರಣದಲ್ಲಿ ಕರ್ನಾಟಕ ಬ್ಯಾಂಕ್‌ನ ಸಿಎಸ್‌ಆರ್ (CSR) ಯೋಜನೆಯಡಿ ನಿರ್ಮಿಸಲಾದ ಇಂಟರ್‌ಲಾಕ್ ಅಳವಡಿಕೆಯ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಘವೇಂದ್ರ ಎಸ್. ಭಟ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಯು ಸಮಾಜದ ಪ್ರಗತಿಗೆ ಅತ್ಯಂತ ಅಗತ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಸುರಕ್ಷಿತ ಕಲಿಕಾ ವಾತಾವರಣ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ಬ್ಯಾಂಕ್ ಇಂತಹ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ಎಜಿಎಂ ರಮೇಶ್ ವೈದ್ಯ, ಬೆಳ್ಮಾರ್ ಶಾಲೆಗೆ ಉಚಿತ ಬಸ್ ವ್ಯವಸ್ಥೆ ಮಾಡಿದ ಡಾ. ಮನ್ಮಥ ಭಟ್ (ಅಧ್ಯಕ್ಷರು, ಮನ್ಮಥ ಭಟ್ ಫೌಂಡೇಶನ್), ಕರ್ನಾಟಕ ಬ್ಯಾಂಕ್ ಅಂಬಾಗಿಲು ಶಾಖೆಯ ವ್ಯವಸ್ಥಾಪಕರಾದ ಹರೀಶ್ ಭಟ್, ಆದಿಉಡುಪಿ ಶಾಖೆಯ ವ್ಯವಸ್ಥಾಪಕರಾದ ಶ್ರೀ ಚಂದ್ರಶೇಖರ್ ಆಳ್ವ,
ತುಳುನಾಡ ರಕ್ಷಣ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ.

ರಜತ್ ಭಟ್ ಬೆಳ್ಮಾರ್ ,ಕಮಲೇಶ್ ಭಟ್ ನಿವೃತ್ತ ಬ್ಯಾಂಕ್ ಉದ್ಯೋಗಿ, ಸತೀಶ್ ಭಟ್ ಬೆಳ್ಮಾರು, ಎಸ್‌ಡಿಎಂಸಿ ಅಧ್ಯಕ್ಷೆ ರೋಹಿಣಿ ರಾವ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಕರ್ನಾಟಕ ಬ್ಯಾಂಕ್ ಸಿಬ್ಬಂದಿ ಪ್ರಶಾಂತ್ ಅಡಿಗ, ಹಿರಿಯರಾದ ಅಶೋಕ್ ಭಟ್ ಬೆಳ್ಮಾರು, ಹಿರಿಯರಾದ ಸಿರಿಲ್ ಮೇರಿ ಬೆಳ್ಮಾರು, ಹಾಗೂ ಗುತ್ತಿಗೆದಾರರಾದ ಸಮರ್ಥ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು,ಅಡುಗೆ ಸಿಬ್ಬಂದಿಗಳು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

ಶಾಲೆಯ ಅಧ್ಯಾಪಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭದ ಯಶಸ್ಸಿಗೆ ಸಹಕರಿಸಿದರು.

ಶಾಲೆಯ ಅಭಿವೃದ್ಧಿಗೆ ನೆರವಾಗಿ ವಿದ್ಯಾರ್ಥಿಗಳಿಗೆ ಉತ್ತಮ ಪರಿಸರ ಕಲ್ಪಿಸಿರುವ ಕರ್ನಾಟಕ ಬ್ಯಾಂಕ್ ಹಾಗೂ ಅದರ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಎಸ್. ಭಟ್ ಅವರಿಗೆ ಶಾಲಾ ಆಡಳಿತ ಮಂಡಳಿ, ಎಸ್‌ಡಿಎಂಸಿ, ಶಿಕ್ಷಕರು ಮತ್ತು ಗ್ರಾಮಸ್ಥರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಸಮಾರಂಭವು ಸಂಭ್ರಮದ ವಾತಾವರಣದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here