ಹೆಸರಾಂತ ಸಾಹಿತಿ ದಿ. ಮೀನಾ ಕಾಕೋಡಕರ ರವರ ಕಥಾ ಸಾಹಿತ್ಯ  ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭ

0
114

ಇತ್ತೀಚೆಗೆ ಅಗಲಿದ ಗೋವಾದ ಹೆಸರಾಂತ ಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ವಿಶ್ವ ಕೊಂಕಣಿ ಕೇಂದ್ರದಲ್ಲಿ 1 ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದ್ದು. ಕಾರ್ಯಾಗಾರವನ್ನು ವಿಶ್ವ ಕೊಂಕಣಿ  ಕೇಂದ್ರದ ಅಧ್ಯಕ್ಷರಾದ ಸಿಎ ನಂದಗೋಪಾಲ ಶೆಣೈ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಬಂದ ಅತಿಥಿ ಗಣ್ಯರು ದಿ. ಮೀನಾ ಕಾಕೋಡಕರರವರ ಚಿತ್ರಪಟಕ್ಕೆ ಹೂಹಾರ ಹಾಕಿ ಸ್ಮರಿಸಿದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು ಉದ್ಘಾಟನಾ ಮಾತುಗಳನ್ನಾಡುತ್ತಾ ದಿ. ಮೀನಾ ಕಾಕೋಡಕರವರ ಕಥಾ ಸಾಹಿತ್ಯ, ಮಕ್ಕಳ ನಾಟಕ ಸಾಹಿತ್ಯ ಅದ್ಭುತವಾಗಿದ್ದುಅವರ ರಚನೆಯ  ನಾಟಕವನ್ನು ಮುಂದಿನ ದಿವಸಗಳಲ್ಲಿ ಮಕ್ಕಳ ಕಾರ್ಯಾಗಾರದಲ್ಲಿ ಅಳವಡಿಸಿ, ತರಬೇತಿ ನೀಡಿ ನಾಟಕ ಪ್ರಿಯರಿಗೆ ಪ್ರದರ್ಶಿಸಲಾಗುವುದು ಎಂದು ತಮ್ಮ ಮನೋಭಾವನೆಯನ್ನು ಹೇಳಿದರು.  ನವದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಗೋಕುಲದಾಸ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಕವಿ ಕೇಂದ್ರಸಾಹಿತ್ಯ ಆಕಾಡೆಮಿಯ ಕೊಂಕಣಿ ವಿಭಾಗದ ಸಂಚಾಲಕರಾಗಿರುವ  ಮೆಲ್ವಿನ್ ರೊಡ್ರಿಗಸ್ ಇವರು ಲೇಖಕಿ ಮೀನಾರವರ ಸಾಹಿತ್ಯ ಸೇವೆಯ ಸಮಗ್ರ ಚಿತ್ರಣ ನೀಡಿದರು.

10.30 ಕ್ಕೆ ಹೆಸರಾಂತ ಸಾಹಿತಿ ಎಚ್ ಎಮ್ ಪೆರ್ನಾಳ ಅಧ್ಯಕ್ಷತೆಯಲ್ಲಿ ದಿ. ಮೀನಾ ಕಾಕೋಡಕರ ರವರ ವಿಮಲಾ ವಿ ಪೈ ವಿಶ್ವ ಕೊಂಕಣಿ ಪುರಸ್ಕೃತ “ವಾಸ್ತು” ಕಾದಂಬರಿ ಮೇಲೆ ಚರ್ಚಾಗೋಷ್ಟಿ ನಡೆಯಿತು. ಈ ಗೋಷ್ಟಿಯಲ್ಲಿ ಹೆಸರಾಂತ ಅನುವಾದಕರು ಡಾ ಗೀತಾ ಶೆಣೈ ಬೆಂಗಳೂರು ಮತ್ತು ವಿದ್ಯಾ ಪೈ ಕೋಲ್ಕತ್ತಾ ಇವರು ಅಂತರ್ಜಾಲದ ಮುಖಾಂತರ ತಮ್ಮ ಅನುಭವ ತಿಳಿಸಿದರು ಹಾಗೂ ಸಾಹಿತಿ ಮಂಗಳಾ ಭಟ್ ಮಂಗಳೂರು ಉಪಸ್ಥಿತರಿದ್ದರು.

12.00 ಗಂಟೆಗೆ ಮೀನಾ ಕಾಕೋಡಕರ ರವರ “ದೊಂಗರ ಚವಲ್ಲಾ” ಕಥಾ ಸಾಹಿತ್ಯದ ಮೇಲೆ  ಚರ್ಚಾಗೋಷ್ಟಿ ನಡೆಯಿತು. ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಬಿ ದೇವದಾಸ ಪೈ ವಹಿಸಿದ್ದು, ಆಕಾಶ ಗಾಂವಕರ ಗೋವಾ ಅಂತರ್ಜಾಲದ ಮುಖಾಂತರ ಹಾಗೂ ಆಶ್ಮಾ ಯವುಜಿನ್ ಡಿಸೋಜಾ ಕಾರ್ಕಳ ಇವರು ಗೋಷ್ಟಿಯಲ್ಲಿ ಸಾಹಿತ್ಯದ ಅನುಭವಗಳನ್ನು ತಿಳಿಸಿದರು.

2.00 ಗಂಟೆಗೆ ಸಾಹಿತಿ ವಿದ್ಯಾ ಬಾಳಿಗಾ ಅಧ್ಯಕ್ಷತೆಯಲ್ಲಿ ಮೀನಾ ಕಾಕೋಡಕರ ರವರ “ಸಪನ ಫುಲ್ಲಾಂ” ಕಥಾ ಸಂಗ್ರಹದ ಮೇಲೆ ಗೋಷ್ಟಿ ನಡೆಯಿತು. ಯುವ ಸಾಹಿತಿಗಳಾದ ಪ್ರೇಮ್ ಮೊರಾಸ್, ರೆನಿಟಾ ಡಿಕೋಸ್ಟಾ, ಬಿಂದು ಮಾಧವ ಶೆಣೈ, ವಂದನಾ ಡಿಸೋಜಾ, ಎಡ್ಮಂಡ್ ಜಾರ್ಜ್ ನೊರೊನ್ಹಾ, ಶಾಂತಕುಮಾರ ಭಟ್ ಮಂಗಳೂರು ಉಪಸ್ಥಿತರಿದ್ದರು.   

ಕಾರ್ಯಕ್ರಮದ ಕೊನೆಯಲ್ಲಿ ಯುವ ಸಾಹಿತಿ ಕ್ರಿಸ್ಟೋಫರ ಡಿಸೋಜಾರವರ ಕಥಾರಂಗ ನಾಟಕ ಪ್ರದರ್ಶನ ಕಾರ್ಯಕ್ರಮ ಜರುಗಿತು. ಗೋವಾ, ಕರ್ನಾಟಕದಿಂದ ರಾಜ್ಯದ  ಹಿರಿಯ  ಸಾಹಿತಿಗಳು ಭಾಗವಹಿಸಿದ್ದರು.  ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ವಿಲಿಯಮ್ ಡಿಸೋಜಾ, ಡಿ ರಮೇಶ ನಾಯಕ್, ಟ್ರಸ್ಟಿ ಶಕುಂತಲಾ ಆರ್ ಕಿಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ ಕಸ್ತೂರಿ ಮೋಹನ ಪೈ ಧನ್ಯವಾದ ಅರ್ಪಿಸಿದರು. ಹೆಚ್ ಎಮ್ ಪೆರ್ನಾಳ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here