ಮೂಡುಬಿದಿರೆ ರೋಟರಿ ವಿದ್ಯಾ ಸಂಸ್ಥೆಗಳಲ್ಲಿ ವಾರ್ಷಿಕ ಕ್ರೀಡೋತ್ಸವದ ಉದ್ಘಾಟನಾ ಸಮಾರಂಭ

0
7

ಮೂಡುಬಿದ್ರೆ ನಗರದ ಪ್ರತಿಷ್ಠಿತ ರೋಟರಿ ವಿದ್ಯಾ ಸಂಸ್ಥೆಯಲ್ಲಿ 2026 – 27ನೇ ಸಾಲಿನ ವಾರ್ಷಿಕ ಕ್ರೀಡೋತ್ಸವ ದಿನಾಂಕ 14/11/2026 ರಂದು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಯಿತು.

ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಲಯನ್ ರೊನಾಲ್ಡ್ ಸಿಲ್ವನ್ ಡಿಸೋಜಾ ಸಂಸ್ಥೆಗಳ ಕ್ರೀಡಾಳುಗಳಿಂದ ಮತ್ತು ಸಂಸ್ಥೆಯ ಬ್ಯಾಂಡ್ ಸೆಟ್ ತಂಡದಿಂದ ಗೌರವ ವಂದನೆ ಸ್ವೀಕರಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾದ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಯಾದ ಶಿರ್ತಾಡಿಯ ಇನ್ನೋವಿಷನ್ ನೆಟ್‌ವರ್ಕ್‌ನ ಮಾಲೀಕ , ಶಿರ್ತಾಡಿ ಪ್ಯಾಕ್ಸ್ ಬ್ಯಾಂಕ್‌ನ ಉಪಾಧ್ಯಕ್ಷ ಶ್ರೀ ಚಿಂತನ್ ಲೋಬೊ ಕ್ರೀಡಾಜ್ಯೋತಿಯನ್ನು ಬೆಳಗಿಸಿ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು..
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರೊ ನಾರಾಯಣ ಪಿ ಎಂ ಮತ್ತು ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೊ ಅನಂತಕೃಷ್ಣ ರಾವ್, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರೊ ಪ್ರವೀಣ್ ಚಂದ್ರ ಜೈನ್, ರೋಟರಿ ಕೇಂದ್ರೀಯ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಚಾಲಕ ರೊ ಜೆ. ಡಬ್ಲೂ ಪಿಂಟೋ, ರೋಟರಿ ಆಡಳಿತ ಮಂಡಳಿಯ ಖಜಾಂಚಿ ರೊ ನಾಗರಾಜ್ ಬಿ , ರೋಟರಿ ಕ್ಲಬ್ ನ ಹಿರಿಯ ಸದಸ್ಯ ಅಬ್ದುಲ್ ರವೂಫ್ , ರೊ ನಾಗರಾಜ್ ಹೆಗ್ಡೆ, ಇನ್ನರ್ ವೀಲ್ ಕ್ಲಬ್ ಡಿಸ್ಟ್ರಿಕ್ಟ್ 318 ನ ಡಿಸ್ಟ್ರಿಕ್ಟ್ ಎಡಿಟರ್ ಸಹನಾ ನಾಗರಾಜ್ ಮತ್ತು ರೋಟರಿ ವಿದ್ಯಾ ಸಂಸ್ಥೆಯ ಮೂರು ವಿಭಾಗದ ಮುಖ್ಯಸ್ಥರಾದ ಶ್ರೀ ರವಿಕುಮಾರ್ , ಶ್ರೀಮತಿ ತಿಲಕಾ ಅನಂತವೀರ ಜೈನ್ ಹಾಗೂ ಶ್ರೀಮತಿ ಲಕ್ಷ್ಮಿ ಮರಾಠೆ ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದಲ್ಲಿ ನಡೆದ ಪಥಸಂಚಲನವು ಶಿಸ್ತು ಮತ್ತು ಸಮನ್ವಯತೆಯನ್ನು ಪ್ರತಿಬಿಂಬಿಸಿತು. ಕಾಲೇಜು ವಿಭಾಗದ ಕ್ರೀಡಾ ಕಾರ್ಯದರ್ಶಿ ಸುಧಾಂಶು ತಮ್ಮ ಕಾಲೇಜು , ಕೇಂದ್ರೀಯ ಶಾಲೆ ಹಾಗೂ ರೋಟರಿ ಆಂಗ್ಲ ಮಾದ್ಯಮ ಶಾಲೆಯ ವಿಶೇಷ ಸಾಧನೆ ಮಾಡಿದ ಸಹ ಕ್ರೀಡಾಪಟುಗಳೊಂದಿಗೆ ಸದ್ರಿ ಅಯ್ಯಪ್ಪ ದೇವಸ್ಥಾನದಿಂದ ತಂದ ಕ್ರೀಡಾ ಜ್ಯೋತಿಯನ್ನು ಕ್ರೀಡೋತ್ಸವದ ಉದ್ಘಾಟಕರಾದ ಶ್ರೀ ಚಿಂತನ್ ಲೋಬೊ ಅವರಿಗೆ ಹಸ್ತಾಂತರಿಸಿದರು.

ಶ್ರೀ ಚಿಂತನ್ ಲೋಬೊ ತಮ್ಮ ಉದ್ಘಾಟನಾ ಭಾಷಣದಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿಯೆನಿಕೊಳ್ಳಲು ತಮಗೆ ಹೆಮ್ಮೆಯಿದೆ. ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೀಡುವ ತಿದ್ದುವಿಕೆ ದೂಷಣೆಯೆಂದು ಭಾವಿಸದೆ ತಮ್ಮ ಬೆಳವಣಿಗೆಯ ಮೈಲುಗಲ್ಲಾಗಿ ಪರಿಗಣಿಸಿ ಸ್ವೀಕರಿಸಬೇಕು. ನನ್ನಂತೆಯೇ ತಾವುಗಳು ಮುಂದೆ ಈ ಸಂಸ್ಥೆಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸುವ ದಿನ ದೂರವಿಲ್ಲ ಎಂದು ನುಡಿದರು.

ಮುಖ್ಯ ಅತಿಥಿಗಳಾದ ರೊನಾಲ್ಡ್ ಸಿಲ್ವನ್ ಡಿಸೋಜಾ
ಪಥಸಂಚಲನದ ಶಿಸ್ತುಬದ್ಧಪ್ರದರ್ಶನವನ್ನು ಕಂಡು ಹರ್ಷ ವ್ಯಕ್ತಪಡಿಸಿ ತಮ್ಮ ಜೀವನದ ಹಲವು ಮಜಲುಗಳನ್ನು ಮಕ್ಕಳೊಂದಿಗೆ ಹಂಚಿಕೊಂಡ ಅವರು , ಜೀವನದಲ್ಲಿ ಪ್ರತಿಯೊಬ್ಬರಿಗೂ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಕ್ರೀಡೆಗಳಲ್ಲಿ ನಿಮ್ಮ ಭಾಗವಹಿಸುವಿಕೆ ಮೊದಲ ಗೆಲುವು. ಸ್ಪರ್ಧೆಯ ಸೋಲು – ಗೆಲುವಿಗಿಂತ ಪ್ರಯತ್ನ ಮತ್ತು ಭಾಗವಹಿಸುವಿಕೆ ಮುಖ್ಯ. ಯಾವುದೇ ಸಂದರ್ಭದಲ್ಲೂ ಪ್ರಯತ್ನವನ್ನು ಕೈಬಿಡಬೇಡಬಾರದು ಎಂದು ಹೇಳುತ್ತಾ ಸುಂದರವಾದ ಕಥೆಯೊಂದನ್ನು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ನಾರಾಯಣ್ ಪಿ. ಎಂ ಅವರು ಶಾಲಾ ಧ್ವಜಾರೋಹಣ ಮಾಡಿ ಕ್ರೀಡೆಗಳು ಜೀವನದಲ್ಲಿ ಶಿಸ್ತು , ಆತ್ಮವಿಶ್ವಾಸ ಹಾಗೂ ಮನೋಸ್ಥೈರ್ಯವನ್ನು ಬೆಳೆಸುತ್ತವೆ. ಪ್ರತಿಯೊಬ್ಬರೂ ಆಟೋಟಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾ ಪಟುಗಳನ್ನು ಹರಸಿ ಕಾರ್ಯಕ್ರಮದ ಯಶಸ್ಸು ಮತ್ತು ಅಚ್ಚುಕಟ್ಟುತನಕ್ಕೆ ಸಂಸ್ಥೆಯ ಎಲ್ಲರನ್ನು ಪ್ರಶಂಸಿಸಿದರು

ಮುಖ್ಯ ಅತಿಥಿಯಾದ ಸಂಸ್ಥೆಗಳ ಕಾರ್ಯದರ್ಶಿ ರೊ ಅನಂತಕೃಷ್ಣ ರಾವ್ ತಮ್ಮ ಮಾತಿನಲ್ಲಿ ಇಂದಿನ ಈ ವೇದಿಕೆ ಮಕ್ಕಳ ಪ್ರತಿಭೆ ಮತ್ತು ಉತ್ಸಾಹವನ್ನು ಪ್ರದರ್ಶಿಸಲು ದೊರಕಿರುವ ಅವಕಾಶ ಎನ್ನುತ್ತಾ , ಅತಿಥಿಗಳ ಮಾತುಗಳಿಗೆ ಆಡಳಿತಮಂಡಳಿಯ ಪರವಾಗಿ ಕೃತಜ್ಞತೆ ತಿಳಿಸಿ , ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಅತ್ಯುತ್ತಮವಾಗಿ ಪಾಲ್ಗೊಳುವಂತೆ ಶುಭಹಾರೈಸಿದರು.

ಆಳ್ವಾಸ್ ಬಿಪಿಎಡ್ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು, ಕ್ರೀಡಾಕೂಟದಲ್ಲಿ ಸಹಕರಿಸಿದರು.. ಆಳ್ವಾಸ್ ಕಾಲೇಜು ಫಿಸಿಯೋಥೆರಪಿಯ ವೈದ್ಯರು ಮತ್ತು ಸಿಬ್ಬಂದಿ ಪ್ರಥಮ ಚಿಕಿತ್ಸೆಯಲ್ಲಿ ಸಹಕರಿಸಿದರು.
ಅತಿಥಿಗಳಿಗೆ ಮತ್ತು ಸಹಕರಿಸಿದ ಆಳ್ವಾಸ್ ವಿದ್ಯಾಸಂಸ್ಥೆಗಳಿಗೆ ಸ್ಮರಣಿಕೆಯನ್ನು ಕೊಡಲಾಯಿತು

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಶ್ರೀ ಪ್ರಫುಲ್ ಡಿಸೋಜಾ ವಿದ್ಯಾಸಂಸ್ಥೆಯ ವ್ಯವಸ್ಥಾಪಕರು ಶ್ರೀ ಸತೀಶ್ , ಹಿರಿಯ ಸಂಯೋಜಕರಾದ ಗಜಾನನ ಮರಾಠೆ , ದೈಹಿಕ ಶಿಕ್ಷಕರಾದ ಶ್ರೀ ಸುಧೀರ್ ಕುಮಾರ್ , ಶಹನ್ ರಾಜ್, ದೀಕ್ಷಿತ್ , ಹರಿಶ್ಚಂದ್ರ , ಸುನೀತ, ಸುಗುಣ , ಇತರ ವಿಭಾಗಗಳ ಸಂಯೋಜಕರು , ಶಿಕ್ಷಕರು , ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರೀಯ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಲಕ್ಷ್ಮಿ ಮರಾಠೆ ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಸ್ವಸ್ತಿಕಾ ಜೈನ್ ಕ್ರೀಡಾ ಜ್ಯೋತಿಯನ್ನು ತಂದ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಕ್ರೀಡಾಪಟುಗಳ ಸಾಧನೆಗಳನ್ನು ವಾಚಿಸಿ , ಉಪನ್ಯಾಸಕಿ ಶ್ರೀಮತಿ ನವ್ಯಾ ಪಥಸಂಚಲನ ತಂಡಗಳ ವಿವರ ವಾಚಿಸಿ , ಕೇಂದ್ರೀಯ ಶಾಲೆಯ ಶಿಕ್ಷಕಿ ಶ್ರೀಮತಿ ಪ್ರೀತಿ ಮತ್ತು ಉಪನ್ಯಾಸಕ ಶ್ರೀ ಅನ್ಸಿಲ್ ಪ್ರಿನ್ಸಿಸ್ಟನ್ ಸೆರಾವೋ ಕಾರ್ಯಕ್ರಮ ನಿರೂಪಿಸಿ , ಉಪನ್ಯಾಸಕಿ ವೈಶಾಲಿ ಧನ್ಯವಾದ ಸಮರ್ಪಣೆ ಮಾಡಿದರು.