ವಿದತ್ ಶಿಕ್ಷಣ ಸಂಸ್ಥೆಯಲ್ಲಿ KCET, NEET, JEE ಕೋರ್ಸ್ ಗಳ ಉದ್ಘಾಟನೆ – ವಿದತ್ ಪರಿಚಯ

0
527

ಸಂಪ್ಯ : ವಿದತ್ ಮೊದಲನೇ ವರ್ಷದ ಸಂಭ್ರಮಾಚರಣೆ ಹಾಗೂ KCET, NEET, JEE ಕೋರ್ಸ್ ಗಳ ಉದ್ಘಾಟನೆಯು ನೆರವೇರಿತು. 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿಧ್ಯಾ ರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದತ್ ಸಂಸ್ಥಾಪಕರಾದ ಶ್ರೀಯುತ ಶ್ರೀ ವತ್ಸ್. ಬಿ .ಎಸ್ ವಹಿಸಿದ್ದರು. ಉದ್ಘಾಟಕರಾಗಿ ಪ್ರೊಫೆಸರ್, ಫೀಸಿಸಿಸ್ಟ್ ಡಾ| ಎ . ಪಿ ರಾಧಾಕೃಷ್ಣ ಹಾಗೂ ಮುಖ್ಯ ಅತಿಥಿಯಾಗಿ ಸಂಪ್ಯ ಪೊಲೀಸ್ ಠಾಣೆಯ
ಎಸ್. ಐ ಜಂಬೂರಾಜ್ ಮಹಾಜನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ| ಎ . ಪಿ ರಾಧಾಕೃಷ್ಣ ಇಂದಿನ ಪರಿಶ್ರಮವೇ ನಾಳಿನ ಯಶಸ್ಸಿಗೆ ಬುನಾದಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಎಸ್. ಐ ಜಂಬೂರಾಜ್ ಮಹಾಜನ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು.
ವಿದತ್ ಸಹಸಂಸ್ಥಾಪಕಿ ಕುಮಾರಿ ಶುಭಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದತ್ ಸ್ನೇಹಿತರ ಕನಸಾಗಿದ್ದು ಇದರ ಒಂದು ವರ್ಷದ ವಿಶ್ವಾಸಾರ್ಹ ಬೆಳವಣಿಗೆ ಬಗ್ಗೆ ತಿಳಿಸಿದರು. ಶ್ರೀಯುತ ಶ್ರೀ ವತ್ಸ್ ಬಿ .ಎಸ್ KCET, NEET, JEE ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ವಿಭಿನತೆಯನ್ನು ಸ್ಪಷ್ಟಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅಕ್ಷಜ್ ಸ್ವಾಗತಿಸಿ ವಿಖ್ಯಾತ ವಂದಿಸಿದರು. ಸಂಸ್ಥೆಯ ಉಪನ್ಯಾಸಕಿ ಸ್ಪೂರ್ತಿ ಸಾಲಿಯನ್ ನಿರೂಪಿಸಿದರು.

LEAVE A REPLY

Please enter your comment!
Please enter your name here